Omicronನಿಂದ ಮಕ್ಕಳಿಗೆ ಹೆಚ್ಚು ಅಪಾಯ, ಬೆಚ್ಚಿ ಬೀಳಿಸಿದೆ ತಜ್ಞರ ವರದಿ!

Dec 5, 2021, 2:29 PM IST

ನವದೆಹಲಿ(ಡಿ.05): ಒಮಿಕ್ರಾನ್‌ ವೈರಸ್‌ನಿಂದ ಮಕ್ಕಳಿಗೆ ಅಪಾಯ. ದಕ್ಷಿಣ ಆಫ್ರಿಕಾ ತಜ್ಞರಿಂದ ಕಳವಳಕಾರಿ ಮಾಹಿತಿ ಲಭ್ಯವಾಗಿದೆ. ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಆಸ್ಪತ್ರೆಗೆ ದಾಖಲಾಗುತ್ತಿದ್ದು, ಇದು ಹೊಸ ತಳಿ ಬಗ್ಗೆ ಆತಂಕ ಹುಟ್ಟುವಂತೆ ಮಾಡಿದೆ. 

ಹೌದು ಆಸ್ಪತ್ರೆಗೆ ದಾಖಲಾಗುತ್ತಿರುವ ಮಕ್ಕಳಲ್ಲಿ ಒಮಿಕ್ರಾನ್ ಪ್ರಕರಣ ಹೆಚ್ಚು ಕಾಣಿಸಿಕೊಂಡಿದೆ. ಈ ನಿಟ್ಟಿನಲ್ಲಿ ಈ ವೈರಸ್ ಬಗ್ಗೆ ರಾಜ್ಯದಲ್ಲೂ ಎಚ್ಚರಿಕೆ ವಹಿಸುವುದು ಅಗತ್ಯ ಎನ್ನಲಾಗಿದೆ. ಮಕ್ಕಳ ಆರೋಗ್ಯದ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸರ್ಕಾರ ಚಿಂತಿಸಿದೆ. 

ಇನ್ನು ಎರಡನೇ ಅಲೆಯಲ್ಲೂ ಮಕ್ಕಳಲ್ಲಿ ಹೆಚ್ಚು ಸೋಂಕು ಪತ್ತೆಯಾಗಿತ್ತು. ಹೀಗಾಗಿ ಮೂರನೇ ಅಲೆ ದಾಳಿ ಇಡುವ ಈ ಸಂದರ್ಭದಲ್ಲಿ ಸರ್ಕಾರ ಈ ಹಿಂದಿನ ತಪ್ಪು ಮತ್ತೆ ಮರುಕಳಿಸದಂತೆ ಎಚ್ಚರ ವಹಿಸಲು ಸಿದ್ಧತೆ ಆರಂಭಿಸಿದೆ.