ಶಾಂತಿಗೂ ಬದ್ಧ, ಸಮರಕ್ಕೂ ಬದ್ಧ: ಚೀನಾಗೆ ತಕ್ಕ ಪಾಠ ಕಲಿಸಲು ಮೋದಿ ರೆಡಿ..!

Jun 21, 2020, 7:07 PM IST

ನವದೆಹಲಿ (ಜೂ. 21): ಇಂಡೋ- ಚೈನಾ ಗಡಿ ಈಗ ಉದ್ವಿಗ್ನವಾಗಿದೆ. ಕುತಂತ್ರದಿಂದ ಚೀನಾ ಭಾರತದ ಒಳಕ್ಕೆ ನುಸುಳಲು ನೋಡ್ತಾ ಇದ್ದರೆ ಅವರನ್ನು ಬೆಂಡೆತ್ತಲು ಭಾರತೀಯ ಸೈನಿಕರು ಉತ್ಸುಕರಾಗಿದ್ದಾರೆ. ಸಂಘರ್ಷ ಮುಂದುವರೆದರೆ ಯುದ್ಧದ ಭೀತಿ ಆವರಿಸಿದೆ. ಈ ಬಗ್ಗೆ ಚರ್ಚಿಸಲು ಪ್ರಧಾನಿ ಮೋದಿ ಸರ್ವಪಕ್ಷ ಸಭೆ ಕರೆದು ಚರ್ಚೆ ನಡೆಸಿದ್ದಾರೆ. ಅಗತ್ಯ ಬಿದ್ದರೆ ತಯಾರಾಗಿರಿ ಎಂದು ಸೇನೆಗೆ ಸೂಚನೆ ಕೊಡಲಾಗಿದೆ. 

ಪ್ರಧಾನಿ ಮೋದಿಯವರಿಗೆ ಸಾಲು ಸಾಲು ಸಂಕಷ್ಟ; ಗ್ರಹಣ ತಂದ ಗಂಡಾಂತರವಾ?

ಚೀನಾ ವಿರುದ್ಧ ಹೋರಾಡಲು ವಿವಿಧ ದೇಶಗಳು ಪ್ರಧಾನಿ ಮೋದಿಗೆ ಸಾಥ್ ನೀಡಿದರೆ, ದೇಶದ ಒಳಗೆ ಭಿನ್ನಾಭಿಪ್ರಾಯ ಮರೆತು ಎಲ್ಲಾ ಪಕ್ಷದವರು, ರಾಜಕೀಯ ನಾಯಕರು ಚೀನಾ ವಿರುದ್ಧ ಹೋರಾಡಲು ಮೋದಿಯವರಿಗೆ ಹೆಗಲು ಕೊಡಲು ಸಿದ್ಧರಾಗಿದ್ದು ವಿಶೇಷ. ಇದು ಮೋದಿಯವರ ಬಲವನ್ನು ಹೆಚ್ಚಿಸಿದೆ. ಹೊಸ ಮನ್ವಂತರಕ್ಕೆ ನಾಂದಿ ಹಾಡಿದೆ. ಮೋದಿಯವರು ನಡೆಸಿದ ಸರ್ವಪಕ್ಷ ಸಭೆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ..!