Russia-Ukraine War: ಉಕ್ರೇನ್ ವಿರುದ್ಧ ಹೋರಾಡಲು ಟ್ರಾನ್ಸ್‌ನಿಸ್ಟ್ರಿಯಾ ಪಡೆ ಬಳಸಿಕೊಂಡ ರಷ್ಯಾ.!

Mar 9, 2022, 5:34 PM IST

ಉಕ್ರೇನ್‌ ವಿರುದ್ಧ ಹೋರಾಡಲು ರಷ್ಯಾ ಹೊಸ ದಾರಿ ಹುಡುಕಿದೆ. ರಷ್ಯಾಗೆ ಸಿಗಲಿದೆ ಬಾಡಿಗೆ ಯೋಧರ ಬೆಂಬಲ. ಕೀವ್, ಒಡೆಸ್ಸಾದಲ್ಲಿ ನ 10 ಲಕ್ಷ ಟ್ರಾನ್ಸ್‌ನಿಸ್ಟ್ರಿಯಾಗಳು ಉಕ್ರೇನ್ ವಿರುದ್ಧ ಹೋರಾಡುತ್ತಿದೆ. 

ರಷ್ಯಾ ಮೇಲೆ ಅಮೆರಿಕ ಮೂಲದ ಕಂಪನಿಗಳ ನಿಷೇಧ ಮುಂದುವರೆದಿದ್ದು, ಇದೀಗ ಒಟಿಟಿ ಸೇವೆ ನೀಡುವ ನೆಟ್‌ಫ್ಲಿಕ್ಸ್‌ ಮತ್ತು ಅಮೆರಿಕನ್‌ ಎಕ್ಸ್‌ಪ್ರೆಸ್‌ ಕಾರ್ಡ್‌ಗಳು ತಮ್ಮ ಸೇವೆಯನ್ನು ಸ್ಥಗಿತಗೊಳಿಸಿರುವುದಾಗಿ ಪ್ರಕಟಿಸಿವೆ. ಜೊತೆಗೆ ಹಣಕಾಸು ಸೇವೆ ನೀಡುವ ಕೆಪಿಎಂಜಿ ಮತ್ತು ಪಿಡಬ್ಲುಸಿ ಕೂಡಾ ರಷ್ಯಾದಲ್ಲಿ ತಮ್ಮ ಕಾರ್ಯಾಚರಣೆ ಸ್ಥಗಿತಗೊಳಿಸಿರುವುದಾಗಿ ಹೇಳಿವೆ.