Sep 25, 2020, 8:40 AM IST
ಬೆಂಗಳೂರು (ಸೆ. 25): ಚೀನಾ ಭಾರತದ ಗಡಿಯಲ್ಲಿ ಕ್ಯಾತೆ ತೆಗೆಯುವುದು ಮಾತ್ರವಲ್ಲ, ದೇಶದ ಒಳಗೆ ಅದರಲ್ಲೂ ಕರ್ನಾಟಕದೊಳಗೆ ಗೂಢಚಾರಿಕೆ ನಡೆಸುತ್ತಿದೆ. ಕರ್ನಾಟಕದಲ್ಲಿರುವ ಬೌದ್ಧ ಬಿಕ್ಕುಗಳ ಹಿಂದೆ ಚೀನೀ ಏಜೆಂಟರು ಬಿದ್ದಿದ್ದಾರೆ. ಬಿಕ್ಕುಗಳಿಗೆ ಲಂಚ ಕೊಡಲು ಕೋಟ್ಯಂತರ ರೂಪಾಯಿಗಳನ್ನು ಚೀನಾ ವ್ಯಯಿಸುತ್ತಿದೆ.
ಮೈಸೂರು ಜಿಲ್ಲೆಯ ಬೈಲಕುಪ್ಪೆ ಹಾಗೂ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದಲ್ಲಿರುವ ಟಿಬೆಟಿಯನ್ ಶಿಬಿರದಲ್ಲಿರುವ ಬೌದ್ಧ ಸನ್ಯಾಸಿಗಳಿಗೆ ಲಕ್ಷಾಂತರ ರು. ಹಣವನ್ನು ಚೀನಾ ಸಂದಾಯ ಮಾಡಿರುವುದು ಜಾರಿ ನಿರ್ದೇಶನಾಲಯ (ಇ.ಡಿ.) ನಡೆಸುತ್ತಿರುವ ತನಿಖೆ ವೇಳೆ ಬಟಾಬಯಲಾಗಿದೆ.
ಕರ್ನಾಟಕದ ಬೌದ್ಧ ಬಿಕ್ಕುಗಳಿಗೆ ಚೀನಾದಿಂದ ಲಂಚ!
ಅಕ್ರಮ ಹಣ ವರ್ಗಾವಣೆ ದಂಧೆ ಆರೋಪದ ಮೇರೆಗೆ ಚೀನಾ ಪ್ರಜೆ ಚಾರ್ಲಿ ಪೆಂಗ್ ಎಂಬಾತನನ್ನು ಇ.ಡಿ. ಬಂಧಿಸಿ ವಿಚಾರಣೆ ನಡೆಸುತ್ತಿದೆ.