Sep 20, 2020, 5:08 PM IST
ಬೆಂಗಳೂರು (ಸೆ. 20): ಮಾರಕ ರೋಗಗಳ ತವರೂರಾಗುತ್ತಿದೆ ಚೀನಾ. ಹೊಸ ಹೊಸ ರೋಗಗಳನ್ನು ಉತ್ಪಾದಿಸುತ್ತಿದೆ. ಕೊರೊನಾ ಆಯ್ತು ಈಗ ಚೀನಾದಲ್ಲಿ ಇನ್ನೊಂದು ರೀತಿಯ ಬ್ಯಾಕ್ಟೀರಿಯಾ ಕಾಣಿಸಿಕೊಂಡಿದೆ. ಬ್ರುಸೆಲ್ಲೋಸಿಸ್ ಎಂಬ ಬ್ಯಾಕ್ಟೀರಿಯಾಕ್ಕೆ ಸಾಕಷ್ಟು ಜನ ತುತ್ತಾಗಿದ್ದಾರೆ.
ಚೀನಾದಲ್ಲಿ ಹೊಸ ಬ್ಯಾಕ್ಟೀರಿಯಾ: ಸೋಂಕು ತಗುಲಿದ್ರೆ ಪುರುಷತ್ವವೇ ಹೋಗುತ್ತೆ
ಜೈವಿಕ ಔಷಧ ಪ್ರಯೋಗಾಲಯದಲ್ಲಿ ಕಳೆದ ವರ್ಷ ಉಂಟಾದ ಸೋರಿಕೆಯಿಂದ ಬ್ಯಾಕ್ಟೀರಿಯಾ ಹುಟ್ಟಿಕೊಂಡಿದೆ ಎಂದು ಚೀನಾ ಹೇಳುತ್ತಿದೆ. ಈಗಾಗಲೇ 3245 ಜನರಿಗೆ ಈ ರೋಗ ಬಂದಿದೆ. ಇದು ಬಂದರೆ ತಲೆನೋವು, ಸ್ನಾಯು ಸೆಳೆತ, ಜ್ವರ ಕಾಣಿಸಿಕೊಳ್ಳುತ್ತದೆ. ಹಾಗಾದರೆ ಬ್ರುಸೆಲ್ಲೋಸಿಸ್ ಹೇಗೆ ಬರುತ್ತದೆ? ಇದನ್ನು ವಾಸಿ ಮಾಡಲು ಸಾಧ್ಯವೇ ಇಲ್ವಾ? ಇವೆಲ್ಲದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!