ಮಹಿಳಾ ಸಮಾನತೆ ದಿನದ ಅಂಗವಾಗಿ ದಿಗ್ಗಜ ಮಹಿಳೆಯರ ಜೊತೆ‌ ಮಾತು ಮಂಥನ

Aug 30, 2020, 8:09 PM IST

ಮಹಿಳಾ ಸಮಾನತೆ ಕೇವಲ ಆಚರಣೆಗೆ ಅಥವಾ ಒಂದು ದಿನಕ್ಕೆ ಮಾತ್ರ ಸೀಮಿತವಲ್ಲ. ಪ್ರತಿ ದಿನವೂ ಮಹಿಳೆಯರಿಗೆ ಸಮಾನತೆ, ಗೌರವ ನೀಡಬೇಕಿದೆ. ಮಹಿಳೆಯನ್ನು ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿವಾಗಿ ಸೇರಿದಂತೆ ಎಲ್ಲಾ ರೀತಿಯಲ್ಲಿ ಬಲಪಡಿಸಬೇಕು. ಇದಕ್ಕಾಗಿ ಸರ್ಕಾರ ಎಲ್ಲಾ ರೀತಿಯ ಯೋಜನೆಗಳನ್ನು ರೂಪಿಸುತ್ತಿದೆ. ಎಲ್ಲಾ ಮಹಿಳೆಯರು ಸಾಧನೆ ಮಾಡಲು ಸರ್ಕಾರ ಪ್ರೋತ್ಸಾಹ ನೀಡುತ್ತಿದೆ. ಜೊತೆಗೆ ನಾವೆಲ್ಲಾ ಆಕೆಗೆ ಬೆಂಬಲವಾಗಿ ನಿಲ್ಲಬೇಕು ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.  

ಸುವರ್ಣ ನ್ಯೂಸ್ - ಕನ್ನಡಪ್ರಭ ಸಹಯೋಗದಲ್ಲಿ  ಮಹಿಳಾ ಸಮಾನತೆ ದಿನದ ಅಂಗವಾಗಿ ದಿಗ್ಗಜ ಮಹಿಳೆಯರ ಜೊತೆ‌ ಮಾತು ಮಂಥನ ವಿಶೇಷ ಕಾರ್ಯಕ್ರಮದಲ್ಲಿ  ಶಶಿಕಲಾ ಜೊಲ್ಲೆ ಇಲಾಖೆಯ ಯೋಜನೆ ಕುರಿತು ಬೆಳಕು ಚೆಲ್ಲಿದರು. ಈ ವಿಶೇಷ ಕಾರ್ಯಕ್ರಮದಲಲ್ಲಿ ಅದ್ಯಮ ಚೇತನ ಸಂಸ್ಥೆಯ ತೇಜಸ್ವಿನಿ ಅನಂತಕುಮಾರ್, ನಟಿ ಹಾಗೂ ಪ್ರವಾಸೋದ್ಯಮ ಅಭಿವೃದ್ದಿ ನಿಗಮದ ಶೃತಿ, ನಿರ್ಮಾಪಕಿ ಶೃತಿ ನಾಯ್ದು, ಗೃಹ ಇಲಾಖೆ ಕಾರ್ಯದರ್ಶಿ ರೂಪಾ ಮೌದ್ಗಿಲ್ ತಮ್ಮ ಸಾಧನೆ ಹಾದಿ ಹಾಗೂ ಎದುರಿಸಿದ ಸವಾಲುಗಳ ಕುರಿತು ಹೇಳಿದ್ದಾರೆ.