ಬೆಂಗಳೂರು(ಮಾ.31): ಡಿಜಿಟಲ್ ವಿಭಾಗದಲ್ಲಿನ ಹೊಸ ಅವಕಾಶಗಳು ಹಾಗೂ ತಂತ್ರಜ್ಞಾನ ಬಳಕೆಗೆ ಸಂಬಂಧಿಸಿದಂತೆ ಕರ್ನಾಟಕ ಪತ್ರಕರ್ತೆಯರ ಸಂಘಟನೆಯಿಂದ ಡಿಜಿಟಲ್ ಕಾರ್ಯಗಾರ ಏರ್ಪಾಡಿಸಲಾಗಿತ್ತು.
ಡಿಜಿಟಲ್ ವಿಭಾಗದ ಹೊಸ ಆವಿಷ್ಕಾರಗಳು, ಸೋಷಿಯಲ್ ಮೀಡಿಯದಲ್ಲಿ ಮಹಿಳೆಯರಿಗೆ ಇರುವ ಅವಕಾಶಗಳು, ಹೊಸ ತಂತ್ರಜ್ಞಾನದ ಬಳಕೆ ಸೇರಿದಂತೆ ಹಲವು ವಿಭಾಗಗಳಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾರ್ಯಗಾರ ನೆರವೇರಿತು.ಎಫ್ ಕೆಸಿಸಿಐ ಸಂಭಾಗಣದಲ್ಲಿ ಏರ್ಪಾಡಾಗಿದ್ದ ಕಾರ್ಯಗಾರದಲ್ಲಿ ಹಲವು ಪತ್ರಕರ್ತೆಯರು ಪಾಲ್ಗೊಂಡು ಕಾರ್ಯಗಾರದ ಮೂಲಕ ಮಹಿತಿ ಪಡೆದರು.