Feb 11, 2022, 4:03 PM IST
ಕಾರವಾರ (ಫೆ. 11): ರಾಜ್ಯದಲ್ಲಿ ಹೆಣ್ಣು ಮಕ್ಕಳು ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳು ಸಾಕಷ್ಟು ಕೇಳಿಬರುತ್ತಿತ್ತು. ಈ ಪ್ರಕರಣಗಳನ್ನು ಭೇದಿಸುವುದು ಪೊಲೀಸರಿಗೆ ಕೂಡಾ ದೊಡ್ಡ ಸವಾಲಿನ ಪ್ರಶ್ನೆಯಾಗುತ್ತಿತ್ತು.ಇಂತಹ ಕೃತ್ಯಗಳನ್ನು ತಡೆಗಟ್ಟಲು ಹಾಗೂ ಹೆಣ್ಣುಮಕ್ಕಳಲ್ಲಿ ಧೈರ್ಯ ಮೂಡಿಸುವ ಉದ್ದೇಶದಿಂದ ರಾಜ್ಯ ಸರಕಾರ ಇದೀಗ ಓಬವ್ವ ಆತ್ಮರಕ್ಷಣಾ ಕಲೆ ತರಬೇತಿಯನ್ನು ಪ್ರಾರಂಭಿಸಿದೆ. ಈ ತರಬೇತಿಯು ಸಮಾಜದಲ್ಲಿ ಹೊಸ ಬದಲಾವಣೆಯೊಂದಿಗೆ ಹೆಣ್ಣುಮಕ್ಕಳಲ್ಲಿ ಸದೃಢತೆ ಮೂಡಿಸಲು ಕಾರಣವಾಗಿದೆ.
ಹೆಣ್ಣುಮಕ್ಕಳ ಸ್ವಯಂ ರಕ್ಷಣೆ ಹಾಗೂ ಅವರಲ್ಲಿ ಆತ್ಮ ವಿಶ್ವಾಸ ಮೂಡಿಸುವ ಉದ್ದೇಶದಿಂದ ರಾಜ್ಯ ಸರಕಾರ ವಸತಿ ಶಾಲೆಯ ವಿದ್ಯಾರ್ಥಿನಿಯರಿಗೆ ಓಬವ್ವ ಆತ್ಮರಕ್ಷಣಾ ಕಲೆಯ ತರಬೇತಿ ನೀಡಲು ಪ್ರಾರಂಭಿಸಿದೆ. ಇದರನ್ವಯ ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ ಓಬವ್ವ ಆತ್ಮರಕ್ಷಣೆ ಕಲೆ ತರಬೇತಿ ಕಾರ್ಯಕ್ರಮಕ್ಕೆ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಚಾಲನೆ ನೀಡಿದ್ದಾರೆ.
Surrogacy: ಈ ದೇಶದಲ್ಲಿ ಬಾಡಿಗೆ ಗರ್ಭಕ್ಕೆ ಸಿಗುತ್ತೆ ಕೈ ತುಂಬಾ ಹಣ
ಇನ್ನು ಉತ್ತರಕನ್ನಡ ಜಿಲ್ಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ 2 ಹಾಸ್ಟೆಲ್‌ಗಳ 177 ವಿದ್ಯಾರ್ಥಿನಿಯರು, ಬಿಸಿಎಂ 21 ಹಾಸ್ಟೆಲ್‌ಗಳ 1,777 ವಿದ್ಯಾರ್ಥಿನಿಯರು ಹಾಗೂ ಕ್ರೈಸ್ಟ್‌ನ 10 ವಸತಿಶಾಲೆಗಳ 1000 ವಿದ್ಯಾರ್ಥಿನಿಯರಿಗೆ ಜೂಡೋ, ಕರಾಟೆ, ಟೈಕ್ವಾಂಡೋ ತರಬೇತಿ ನೀಡಲು ನಿರ್ಧರಿಸಲಾಗಿದೆ. ವಾರದಲ್ಲಿ ಎರಡು ದಿನ 1 ಗಂಟೆಯಂತೆ ತಲಾ 50 ವಿದ್ಯಾರ್ಥಿನಿಯರ ಬ್ಯಾಚ್ ಮಾಡಿ ವಿದ್ಯಾರ್ಥಿನಿಯರಿಗೆ ಆತ್ಮರಕ್ಷಣಾ ಕಲೆಯನ್ನು ಕಲಿಸಲು ಸರಕಾರ ಸೂಚನೆ ನೀಡಿದೆ. ಇದರೊಂದಿಗೆ ಓಬವ್ವ ಆತ್ಮರಕ್ಷಣೆ ಕಲೆಯನ್ನು ವಿದ್ಯಾರ್ಥಿನಿಯರಿಗೆ ಬ್ಲ್ಯಾಕ್ ಬೆಲ್ಟ್ ಪಡೆದಂತಹ ಮಹಿಳಾ ತರಬೇತುದಾರರಿಂದಲೇ ನೀಡಬೇಕೆನ್ನುವ ನಿಯಮ ಮಾಡಲಾಗಿದ್ದು, ಒಂದು ವೇಳೆ ಬ್ಲ್ಯಾಕ್ ಬೆಲ್ಟ್ ಮಹಿಳಾ ತರಬೇತುದಾರರು ಇರದ ಪ್ರದೇಶದಲ್ಲಿ ಪುರುಷರಿಂದಲೂ ಶಿಕ್ಷಣ ಒದಗಿಸಬಹುದು ಎಂದು ಸರಕಾರ ಆದೇಶ ಹೊರಡಿಸಿದೆ. ಈ ಆತ್ಮರಕ್ಷಣಾ ಶಿಕ್ಷಣ ವಿದ್ಯಾರ್ಥಿಯರಿಗೆ ಸಾಕಷ್ಟು ಸಹಾಯಕವಾಗಿದ್ದು, ಯಾವುದೇ ದುಷ್ಕೃತ್ಯಗಳನ್ನು ಧೈರ್ಯದಿಂದ ಎದುರಿಸಿ ಸ್ವಯಂ ರಕ್ಷಣೆ ಮಾಡಿಕೊಳ್ಳಬಹುದಾಗಿದೆ. ಸ್ವಯಂ ರಕ್ಷಣೆಯ ಕಲೆಯಿಂದ ಹೆಣ್ಣುಮಕ್ಕಳಲ್ಲಿ ಹೆಚ್ಚು ಧೈರ್ಯ ಮೂಡುವುದರೊಂದಿಗೆ ಜ್ಞಾಪಕಶಕ್ತಿ ಬೆಳವಣಿಗೆಗೂ ಇದು ಸಹಕಾರಿಯಾಗಿದೆ ಅಂತಾರೆ ವಿದ್ಯಾರ್ಥಿನಿಯರು.
ಒಟ್ಟಿನಲ್ಲಿ ರಾಜ್ಯ ಸರಕಾರ ಜಾರಿಗೆ ತಂದಿರುವ ಓಬವ್ವ ಆತ್ಮರಕ್ಷಣೆ ಕಲಾ ತರಬೇತಿ ಹೆಣ್ಣು ಮಕ್ಕಳಿಗೆ ಸಾಕಷ್ಟು ಸಹಾಯಕವಾಗಿದೆ. ಸರಕಾರ ಈ ಯೋಜನೆಯನ್ನು ಪ್ರತಿಯೊಂದು ಶಾಲಾ- ಕಾಲೇಜುಗಳಲ್ಲೂ ವಿಸ್ತರಿಬೇಕಿದ್ದು, ಈ ಮೂಲಕ ರಾಜ್ಯದಲ್ಲಿ ನೂತನ ಕ್ರಾಂತಿ ನಿರ್ಮಾಣವಾಗಲಿದೆ.