ಹೆಣ್ಣು ಮನಸ್ಸು ಮಾಡಿದರೆ, ಏನಾದರೂ ಸಾಧಿಸಿ ತೋರಿಸುತ್ತಾಳೆ ಎನ್ನುವುದಕ್ಕೆ ಕೊಪ್ಪಳದ (Koppla) ಮಂಜುಳಾ ಹುಂಡಿಯವರನ್ನು ಉದಾಹರಣೆ. ಮೂಲತಃ ಕೊಪ್ಪಳದವರಾದ ಇವರು ಹಲಗೇರಿಯಲ್ಲಿ 7 ಎಕರೆ ಜಮೀನನ್ನು ಗುತ್ತಿಗೆ ಪಡೆದು ಕೃಷಿ (Farming) ಮಾಡುತ್ತಿದ್ದಾರೆ.
ಕೊಪ್ಪಳ (ಡಿ. 07): ಹೆಣ್ಣು ಮನಸ್ಸು ಮಾಡಿದರೆ, ಏನಾದರೂ ಸಾಧಿಸಿ ತೋರಿಸುತ್ತಾಳೆ ಎನ್ನುವುದಕ್ಕೆ ಕೊಪ್ಪಳದ (Koppala) ಮಂಜುಳಾ ಹುಂಡಿಯವರನ್ನು ಉದಾಹರಣೆ. ಮೂಲತಃ ಕೊಪ್ಪಳದವರಾದ ಇವರು ಹಲಗೇರಿಯಲ್ಲಿ 7 ಎಕರೆ ಜಮೀನನ್ನು (Farming) ಗುತ್ತಿಗೆ ಪಡೆದು ಕೃಷಿ ಮಾಡುತ್ತಿದ್ದಾರೆ. ಜಮೀನಿನಲ್ಲಿ ಕಡಲೆ, ಮೆಕ್ಕೇಜೋಳ ಸೇರಿ ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಇನ್ನೊಂದೆಡೆ ಅತಿಥಿ ಶಿಕ್ಷಕಿಯಾಗಿಯೂ (Guest Teacher) ಕಾರ್ಯ ನಿರ್ವಹಿಸುತ್ತಿದ್ದಾರೆ. ಜೊತೆಗೆ ಖಾನಾಳಿಯನ್ನೂ ನಡೆಸುತ್ತಿದ್ದಾರೆ.
ಮಂಜುಳಾ ಹುಂಡಿಯವರದ್ದು ಮೂಲತಃ ಕೃಷಿ ಕುಟುಂಬವಾದರೂ, ಮೊದ ಮೊದಲು ಆಸಕ್ತಿ ಇರಲಿಲ್ಲ. ಬದಲಾದ ಪರಿಸ್ಥಿತಿಯಲ್ಲಿ ಏನಾದರೂ ಮಾಡಲೇಬೇಕು ಅನ್ನುವಾಗ, ಕೃಷಿಗೆ ಮುಂದಾದರು. 7 ಎಕರೆ ಜಮೀನಿನಲ್ಲಿ ಕೃಷಿ ಮಾಡುತ್ತಿದ್ದಾರೆ. ಜೊತೆಗೆ ಪಿಎಸ್‌ವೈ ಪರೀಕ್ಷೆಗೂ ತಯಾರಾಗುತ್ತಿದ್ದಾರೆ.