ಮಹಿಳಾ ಸುರಕ್ಷತೆ, ಜಾಗೃತಿಗಾಗಿ ರಸ್ತೆಗಿಳಿದ ಮಹಿಳಾ ಬೈಕರ್ಸ್!

May 8, 2022, 10:23 AM IST

ಯೆಸ್...ಹೀಗೆ ರಾತ್ರಿ ಹೊತ್ತಿನಲ್ಲಿ ಬುಲೆಟ್ ತೆಗೆದುಕೊಂಡು ಸುತ್ತಾಟ ನಡೆಸಿರುವ ಈ ಮಹಿಳೆಯರು ಮೂಲತಃ ಬೆಂಗಳೂರಿ(Bengaluru)ನವರು. ಇಡೀ ರಾಜ್ಯದಲ್ಲಿ ನಿರಂತರವಾಗಿ ನಡೆದ ಮಹಿಳೆಯರ ಮೇಲಿನ ದಾಳಿ ಮತ್ತು ಆ್ಯಸಿಡ್ ಅಟ್ಯಾಕ್(Acid attack)ಗಳು ರಾಜ್ಯದಲ್ಲಿ ನಿಲ್ಲಬೇಕು. ಮಹಿಳೆಯರು(women) ನಿರ್ಭಯವಾಗಿ ಸುತ್ತಾಟ ಮಾಡಬೇಕು ಎಂಬ ಮಹಾದಾಸೆಯನ್ನ ಇಟ್ಟಿಕೊಂಡು ಜನರಲ್ಲಿ ಹೊಸದೊಂದು ಜಾಗೃತಿ ಮೂಡಿಸಲು ಮುಂದಾಗಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡ ಈ ನಾಲ್ಕು ಜನ ಮಹಿಳೆಯರಾದ ಅನಿತಾ, ಕೀರ್ತಿ, ಸ್ವಾತಿ ಹಾಗೂ ಟೀಮ್ ಲೀಡರ್ ಲಕ್ಷ್ಮಿ 30 ದಿನಗಳಲ್ಲಿ 31 ಜಿಲ್ಲೆ ಬೈಕ್ ಸುತ್ತಾಟ ನಡೆಸುತ್ತಾ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.

ಇತ್ತೀಚಿಗೆ ಮಹಿಳೆಯರಿಗೆ ಸುರಕ್ಷಿತ ಇಲ್ಲದಂತೆ ಆಗಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಆ್ಯಸಿಡ್ ದಾಳಿ ನಡೆಸಿದ ದುರುಳನಿಗೂ ಕೂಡ ಆ್ಯಸಿಡ್ ಹಾಕಬೇಕು. ಅಂದಾಗ ಆ್ಯಸಿಡ್ ದಾಳಿಗೆ ಒಳಗಾದವರ ನೋವು ಗೊತ್ತಾಗುತ್ತೆ ಅಂತ ಕೀರ್ತಿ ಆಕ್ರೋಶ ವ್ಯಕ್ತಪಡಿಸಿದರು. 

ಇನ್ನೂ ನಾಲ್ಕು ಜನ ಮಹಿಳೆಯರು ಬೈಕ್ ನಲ್ಲಿ 14 ಜಿಲ್ಲೆಗಳು ಸುತ್ತಾಟ ನಡೆಸಿ ರಾಯಚೂರು ಜಿಲ್ಲೆಗೆ ಬಂದು ಬಸ್ ನಿಲ್ದಾಣ(Bus stand)ದಲ್ಲಿ ಜಾಗೃತಿ ಮೂಡಿಸಿದ್ರು. ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ಇದ್ದಾರೆ. ಭಯ ಬಿಟ್ಟು ಹೊರಗಡೆ ಓಡಾಡಬಹುದು, ಹೆಣ್ಣು ಮಕ್ಕಳೂ ಯಾವುದರಲ್ಲಿಯೂ ಕಮ್ಮಿ ಇಲ್ಲ ಎಂಬುವುದನ್ನ ವಿವಿಧ ಕಾಲೇಜುಗಳಿಗೆ ಹಾಗೂ ವಿವಿಧ ಸಂಘ- ಸಂಸ್ಥೆಗಳಿಗೆ ಭೇಟಿ ನೀಡಿ ಜಾಗೃತಿ ಸಾರಲು ಮುಂದಾಗಿದ್ದಾರೆ. 

Mothers Day 2022: ತಾಯಂದಿರ ದಿನಕ್ಕಾಗಿ ಮನಮುಟ್ಟುವ ಕೋಟ್ಸ್ ಗಳು, ಶುಭ ಸಂದೇಶಗಳು!

ಒಟ್ಟಿನಲ್ಲಿ ರಾತ್ರಿ 8 ಗಂಟೆ ಆಯ್ತು ಅಂದ್ರೆ ಮನೆಯಿಂದ ಹೊರಬರಲು ಯುವತಿಯರು  ಹಿಂದೇಟು ಹಾಕುತ್ತಾರೆ. ಆದ್ರೆ ಈ ನಾಲ್ಕು ಜನ ಯುವತಿಯರು ಮಾತ್ರ ಹೊಸ ವಿಚಾರ ಇಟ್ಟಿಕೊಂಡು, ಇಡೀ ರಾಜ್ಯ ಬೈಕ್ ನಲ್ಲಿ ಸುತ್ತಾಟ ನಡೆಸಿ ಮಹಿಳೆಯರಲ್ಲಿ ಧೈರ್ಯ ತುಂಬ ಕಾರ್ಯಕ್ಕೆ ಮುಂದಾಗಿದ್ದಾರೆ.