3 ತಿಂಗಳಲ್ಲಿ 22000 ಕಿ.ಮೀ ಸಂಚಾರ, ದೇಶ ಪರ್ಯಟನೆ ಮಾಡಿರುವ ಅಮೃತ ಜೋಶಿ!

3 ತಿಂಗಳಲ್ಲಿ 22000 ಕಿ.ಮೀ ಸಂಚಾರ, ದೇಶ ಪರ್ಯಟನೆ ಮಾಡಿರುವ ಅಮೃತ ಜೋಶಿ!

Published : Aug 05, 2022, 04:06 PM IST

3 ತಿಂಗಳಲ್ಲಿ ದೇಶ ಪರ್ಯಟನೆ ಮಾಡಿರುವ ಅಮೃತ ಜೋಶಿ,  ಈ ಅವಧಿಯಲ್ಲಿ 22000 ಕಿಲೋಮೀಟರ್‌ ದೇಶ ಪರ್ಯಟನೆ ಮಾಡಿದ್ದಾರೆ. ಏಕಾಂಗಿಯಾಗಿ ದೇಶ ಸುತ್ತಿಬಂದು ಬೆಂಗಳೂರಿಗೆ ವಾಪಸಾಗಿರುವ ಅಮೃತ, ಇತ್ತೀಚೆಗೆ ಏಷ್ಯಾನೆಟ್‌ ಸುವರ್ಣನ್ಯೂಸ್‌ ಜೊತೆ ಮಾತನಾಡಿದ್ದಾರೆ.
 

ಬೆಂಗಳೂರು (ಆ. 5): ಮೂರು ತಿಂಗಳ ಅವಧಿಯಲ್ಲಿ ಏಕಾಂಗಿಯಾಗಿ 22 ಸಾವಿರ ಕಿಲೋಮೀಟರ್‌ ದೇಶ ಪರ್ಯಟನೆಯ ಸಾಹಸ ಮಾಡಿರುವ ಅಮೃತ ಜೋಶಿ, ಇತ್ತೀಚೆಗೆ ಬೆಂಗಳೂರಿಗೆ ವಾಪಸಾದರು. ಅವರಿಗೆ ಇತ್ತೀಚೆಗೆ ಬೆಂಗಳೂರಿನಲ್ಲಿ ಸನ್ಮಾನಿಸಲಾಯಿತು. 

ಈ ವೇಳೆ ಮಾತನಾಡಿದ ಅವರು,  ನಾನು 12 ನೇ ವರ್ಷಕ್ಕೆ ಬೈಕ್ ಕಲಿತಿದ್ದೆ. ಸಹಜವಾಗಿ ಹುಡುಗಿಯರು ಅಂದ್ರೆ ರೆಸ್ಟ್ರಿಕ್ಷನ್ ಇರುತ್ತೆ. ಆದರೆ, ನನ್ನ ತಂದೆಗೆ ಮಗಳು ಬೈಕ್‌ ಓಡಿಸಬೇಕು ಅನ್ನೋ ಕನಸಿತ್ತು. ಅವರ ಆಸೆಯಂತೆ ನಾನು ಮುಂದುವರಿದೆ. ಅವರಿಗೆ ನಾನು ಬೈಕ್ ನಲ್ಲಿ ಸುತ್ತಬೇಕು ಅನ್ನೋ ಆಸೆಗಳಿತ್ತು. 2 ವರ್ಷದ ಹಿಂದೆ ಅವರು ತೀರಿಕೊಂಡರು. ಅವರ ಆಸೆ ಪೂರೈಸಲಿ ಅಂತ ದೇಶ ಪರ್ಯಟನೆ ಮಾಡಿದ್ದೇನೆ ನನ್ನ ತಂದೆ ಈಗ ಇಲ್ಲದಿದ್ದರೂ, ಅವರ ಆಸೆ ಪೂರೈಸಿದ್ದೇನೆ ಅನ್ನೋ ಧನ್ಯತಾ ಭಾವವಿದೆ. ನನಗೆ ಚಿಕ್ಕವಳಿದ್ದಾಗಿನಿಂದಲೂ ಮೇಘಾಲಯ ನೋಡಬೇಕು ಅಂತ ಆಸೆ ಇತ್ತು. ಅದನ್ನು ಈಗ ಪೂರೈಸಿದ್ದೇನೆ ಎಂದು ಹೇಳಿದ್ದಾರೆ.

ಆರು ಕಿಮೀ ನಡೆದೇ ಹೋಗಿ ಪುಸ್ತಕ ವಿತರಣೆ; ಗ್ರಂಥಪಾಲಕಿಗೆ ಆನಂದ್ ಮಹೀಂದ್ರಾ ಮೆಚ್ಚುಗೆ

ನಾನು ಬಾಂಗ್ಲಾ ಬಾರ್ಡರ್ ಗೆ ಹೋದಾಗ ನಮ್ಮ ಸೈನಿಕರು ಸಾಕಷ್ಟು ಸಹಾಯ ಮಾಡಿದರು. ಅಲ್ಲಿ ಮಾತ್ರವಲ್ಲ ನೇಪಾಳ ಗಡಿಯಲ್ಲೂ ನಮಗೆ ಸಹಾಯ ಸಿಕ್ಕಿತು. ನಾನು ಮಾಡಿದ ಈ ಕಾರ್ಯಕ್ಕೆ ನನ್ನನ್ನ ಗುರುತಿಸಿ ಇಂದು ಸನ್ಮಾನ ಮಾಡಿರೋದು ತುಂಬಾ ಖುಷಿ ಸಿಕ್ಕಿದೆ. ಮಾರ್ಗ ಮಧ್ಯೆ ಅಪಘಾತ ಆದ ಕಾರಣ 1 ತಿಂಗಳು ಮನೆಯಲ್ಲಿ ರೆಸ್ಟ್‌ ಮಾಡಿದ್ದೆ. ಆ ಬಳಿಕ ಮತ್ತೆ ಪರ್ಯಟನೆ ಆರಂಭಿಸಿದೆ ಎಂದು ಹೇಳಿದ್ದಾರೆ.

04:08ಸದ್ಗುರು 'ಲಿಂಗ ಭೈರವಿ' ದೇವಿ ಸನ್ನಿಧಿಯಲ್ಲಿಯೇ ಯಾಕೆ ಸಮಂತಾ ಮದುವೆ ಆಗಿದ್ದು? ಇಲ್ಲಿದೆ ಸೀಕ್ರೆಟ್.. !
04:48ಮಾಜಿ ಬಾಯ್‌ಫ್ರೆಂಡ್ ಗರ್ವಿಷ್ಟ, ಟಾಕ್ಸಿಕ್ ಮ್ಯಾನ್; 'ಇದು ನಂದೇ ಕಥೆ' ಅಂದ್ರಾ -ಗರ್ಲ್‌ಫ್ರೆಂಡ್- ರಶ್ಮಿಕಾ ಮಂದಣ್ಣ?
02:38ಕತ್ರಿನಾ ಕೈಫ್-ವಿಕ್ಕಿ ಜೋಡಿಯ ;ಸಂತಾನ ಭಾಗ್ಯ'ಕ್ಕೆ ಕರ್ನಾಟಕದ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಮಣ್ಯದ ನಂಟು!
05:15'ಮಂಚದ ಮರ್ಮ' ಬಿಚ್ಚಿಟ್ಟ ಸಂಯುಕ್ತಾ ಹೆಗ್ಡೆ; 'ನೀವೇ ನಾಯಕಿ ಮಲಗೋಣ' ಅಂತ ಕರಿತಾರೆ ಅಂದ್ರು!
02:36ಡಿಂಪಲ್ ಕ್ವೀನ್ ಈಗ 'ಆಟೋ ರಾಣಿ'..! ಆಟೋ ಚಾಲಕರ ಸಂಘಕ್ಕೆ ರಚಿತಾ ರಾಮ್ ರಾಯಭಾರಿ
08:40ಕನ್ನಡದಲ್ಲಿ ಓಂ ಶಾಂತಿ, ತೆಲುಗಿನಲ್ಲಿ ಡಿಸ್ಕೋ ಶಾಂತಿ ಆಗಿರೋ ರಹಸ್ಯ ಬಿಚ್ಚಿಟ್ಟ 'ರಂಭೆ' ಜ್ಯೋತಿ ರೈ!
04:42ರಶ್ಮಿಕಾ ಮಂದಣ್ಣಗೆ ಮತ್ತೊಬ್ಬ ಕನ್ನಡತಿಯಿಂದ ಸವಾಲ್, ಅಷ್ಟರಲ್ಲೇ ಇನ್ನೊಬ್ಬರೂ ಕಾಲೆಳೆಯೋಕೆ ರೆಡಿನಾ?
16:23ಮೋದಿ ಸರ್ಕಾರದ 11 ವರ್ಷದಲ್ಲಿ ನಾರಿಶಕ್ತಿಯಲ್ಲಾದ ಬದಲಾವಣೆ ಏನು?
15:41ಮಹಿಳಾ ಸಬಲೀಕರಣಕ್ಕೆ ಕೇಂದ್ರದ ಕ್ರಾಂತಿಕಾರಿ ನಡೆ,ಭಾರತೀಯ ನಾರಿಯರ ಮನಗೆದ್ದ ಯೋಜನೆ ಯಾವುದು
07:57ಆರ್ಟ್ ಆಫ್ ಲಿವಿಂಗ್ ಮಹಿಳಾ ಸಮ್ಮೇಳನದಲ್ಲಿ ರವಿಶಂಕರ್ ಗುರೂಜಿ ಮಾತು!