Weekly-Horoscope: ಈ ರಾಶಿಯವರಿಗೆ ವಾರಪೂರ್ತಿ ಸಂಗಾತಿ-ಸಾಲ ವಿಚಾರದಲ್ಲಿ ಅನಾನುಕೂಲವಿದ್ದು, ಪರಿಹಾರಕ್ಕೆ ಹೀಗೆ ಮಾಡಿ..

Jul 14, 2024, 8:32 AM IST

ಈ ವಾರದ ಆದಿಯಲ್ಲಿ ಮಿಥುನ ರಾಶಿಯವರಿಗೆ ವೃತ್ತಿಯಲ್ಲಿ ಕಲಹದ ವಾತಾವರಣವಿರಲಿದೆ. ಮಕ್ಕಳಿಂದ ಸಮಾಧಾನ, ಉನ್ನತ ಶಿಕ್ಷಣದವರಿಗೆ ಅನುಕೂಲ. ಉದರ ಬಾಧೆ-ಮಿತ್ರರಲ್ಲಿ ಮನಸ್ತಾಪ ಬರಲಿದೆ. ವಾರಾಂತ್ಯದಲ್ಲಿ ಪ್ರಯಾಣ-ಬಂಧುಗಳಲ್ಲಿ ಎಚ್ಚರವಹಿಸಿ. ಸಂಗಾತಿಯಿಂದ ಸಹಕಾರ, ವ್ಯಾಪಾರಿಗಳಿಗೆ ಉತ್ತಮ ಫಲ, ಹಣದ ವಿಚಾರದಲ್ಲಿ ಎಚ್ಚರವಹಿಸಿ. ಪರಿಹಾರಕ್ಕೆ ಮಹಾಲಕ್ಷ್ಮೀ ಸನ್ನಿಧಾನಕ್ಕೆ ತುಪ್ಪ ದಾನ ಮಾಡಿ. ಕರ್ಕಟಕ ರಾಶಿಯವರಿಗೆ ವಾರದ ಆದಿಯಲ್ಲಿ ಕೃಷಿಕರಿಗೆ ಉತ್ತಮ ಅನುಕೂಲ, ನೀರು-ಹಾಲಿನ ಕ್ಷೇತ್ರದವರಿಗೆ ಲಾಭ ವೃತ್ತಿಯಲ್ಲಿ ಅನುಕೂಲ, ಸೇವಕರು-ಸಹಾಯಕರಲ್ಲಿ ಅಸಮಾಧಾನವಿರಲಿದೆ. ವಾರಾಂತ್ಯದಲ್ಲಿ ಹಣಕಾಸಿನ ತೊಡಕು, ವಿದ್ಯಾರ್ಥಿಗಳಿಗೆ ತೊಂದರೆ, ಕುಟುಂಬದಲ್ಲಿ ಘರ್ಷಣೆ, ಸಾಲಬಾಧೆ ಕಾಡಲಿದೆ. ಪರಿಹಾರಕ್ಕೆ ಮಹಾಲಕ್ಷ್ಮೀ ಸನ್ನಿಧಾನಕ್ಕೆ ತುಪ್ಪ ದಾನ ಮಾಡಿ.

ಇದನ್ನೂ ವೀಕ್ಷಿಸಿ:  ಅಕ್ಷರ ದಾಸೋಹ ಬಿಸಿಯೂಟ ಬೇಳೆಯಲ್ಲಿ ಹುಳು ಪತ್ತೆ! ಬಾಲಹುಳು, ನುಸಿಹುಳು ಕಂಡು ಆತಂಕಗೊಂಡ ಮಕ್ಕಳು,ಪೋಷಕರು!