Nov 5, 2023, 11:13 AM IST
ಈ ವಾರದ ವಿಶೇಷ ನೋಡುವುದಾದ್ರೆ, ನವೆಂಬರ್ 06 ರಂದು ಸೋಮವಾರ ಬುಧಗ್ರಹ ವೃಶ್ಚಿಕ ರಾಶಿಯನ್ನು ಪ್ರವೇಶ ಮಾಡುತ್ತಾನೆ. ನವೆಂಬರ್ 11 - ಶನಿವಾರ - ಧನ ತ್ರಯೋದಶಿಯಾಗಿದ್ದು, ಇದು ನೀರು ತುಂಬುವ ಹಬ್ಬವಾಗಿದೆ. ಇಲ್ಲಿಂದ ದೀಪಾವಳಿ ಆರಂಭವಾಗುತ್ತದೆ. ಈ ವಾರ ಮಿಥುನ ರಾಶಿಯವರಿಗೆ ವಾರದ ಆದಿಯಲ್ಲಿ ಆರೋಗ್ಯ ಬಲವಿಲ್ಲ, ಅಲರ್ಜಿಗಳ ಬಾಧೆ, ಚರ್ಮ ಸಂಬಂಧಿ ತೊಂದರೆ, ವೃತ್ತಿಯಲ್ಲಿ ಅನುಕೂಲ, ಹಣ ಸಹಾಯ ಇರಲಿದೆ. ವಾರ ಮಧ್ಯದಲ್ಲಿ ಸಹೋದರರ ಸಹಕಾರ, ವೃತ್ತಿಯಲ್ಲಿ ಅನುಕೂಲವಿದ್ದು, ಸ್ನೇಹಿತರು-ಬಂಧುಗಳಲ್ಲಿ ಮನಸ್ತಾಪ ಬರಲಿದೆ. ದಾಂಪತ್ಯದಲ್ಲಿ ಹೊಂದಾಣಿಕೆ ಕಷ್ಟ. ವಾರಾಂತ್ಯದಲ್ಲಿ ನೀರಿನ ಅಭಾವ ಉಂಟಾಗಲಿದ್ದು, ಬಂಧು-ಮಿತ್ರರಲ್ಲಿ ಬೇಸರ ಉಂಟಾಗಲಿದೆ. ಸಾಲದ ಸುಳಿಗೆ ಸಿಲುಕುವಿರಿ. ಈ ರಾಶಿಯವರು ಪರಿಹಾರಕ್ಕೆ ವಿಷ್ಣು ಸನ್ನಿಧಾನದಲ್ಲಿ ಗಂಧಾಲಂಕಾರ ಮಾಡಿಸಿ.
ಇದನ್ನೂ ವೀಕ್ಷಿಸಿ: ಬೆಂಗಳೂರು ಫೌಂಡೇಶನ್ ವತಿಯಿಂದ ಗೌರವ: ವಿವಿಧ ಕ್ಷೇತ್ರಗಳಲ್ಲಿ ಸಾಧನೆ..ರಾಜ್ಯಪಾಲರಿಂದ ವಂದನೆ