ದೊಡ್ಮನೆಯಲ್ಲಿ ಹೊಡಿ ಮಗ ಹೊಡಿ ಮಗ: ರಕ್ಷಿತಾ ಶೆಟ್ಟಿ ಮೇಲೆ ಕೈ ಎತ್ತಿದ ರಾಶಿಕಾ ಶೆಟ್ಟಿ

ದೊಡ್ಮನೆಯಲ್ಲಿ ಹೊಡಿ ಮಗ ಹೊಡಿ ಮಗ: ರಕ್ಷಿತಾ ಶೆಟ್ಟಿ ಮೇಲೆ ಕೈ ಎತ್ತಿದ ರಾಶಿಕಾ ಶೆಟ್ಟಿ

Published : Jan 06, 2026, 01:11 PM IST

ಬಿಗ್ ಬಾಸ್ ಕನ್ನಡ ಸೀಸನ್ 12 ಅಂತಿಮ ಹಂತ ತಲುಪಿದ್ದು, ಸ್ಪರ್ಧಿಗಳ ನಡುವೆ ಪೈಪೋಟಿ ತಾರಕಕ್ಕೇರಿದೆ. ನಾಮಿನೇಷನ್ ಪ್ರಕ್ರಿಯೆಯಲ್ಲಿ ರಕ್ಷಿತಾ ಶೆಟ್ಟಿ ಮತ್ತು ರಾಶಿಕಾ ಶೆಟ್ಟಿ ನಡುವೆ ತಳ್ಳಾಟ ನಡೆದರೆ, ರಘು ಮತ್ತು ಧ್ರುವಂತ್ ನಡುವೆಯೂ ಜಗಳ ನಡೆದಿದೆ.

ಬಿಗ್ ಬಾಸ್ ಕನ್ನಡ ಸೀಸನ್ -12 ಮುಕ್ತಾಯಕ್ಕೆ ಇನ್ನೊಂದೇ ವಾರ ಬಾಕಿ ಇದೆ. ಸೋ ದೊಡ್ಮನೆಯಲ್ಲಿ ಈ ವಾರ ನಡೀತಾ ಇರೋದು ಫೈನಲ್ ವಾರ್. ವಾರಾಂತ್ಯದ ಅಕ್ಟಿವಿಟಿಯಲ್ಲಿ ಮುಖದ ಮೇಲೆ  ಪಂಚ್ ಮಾಡಿದ್ದ ಸ್ಪರ್ಧಿಗಳು, ಈ ವಾರದ ಕೊನೆ ನಾಮಿನೇಷನ್​ನಲ್ಲಿ ಕಿಕ್ ಮಾಡಿ ಯಾರು ಔಟಾಗಬೇಕು ಅಂತ ನಿರ್ಧಾರ ಮಾಡಿದ್ದಾರೆ. ಇದು ಸಹಜವಾಗೇ ಜಗಳಕ್ಕೆ ಕಾರಣವಾಗಿದ್ದು ಬಿಗ್ ಬಾಸ್ ಮನೆಯಲ್ಲೀಗ ಹೊಡಿ ಮಗ ಹೊಡಿ ಮಗ ಹಾಡು ಕೇಳಿ ಬರ್ತಾ ಇದೆ.

ಯೆಸ್ ಬಿಗ್ ಬಾಸ್​​ ಕನ್ನಡ ಸೀಸನ್ 12 ಫಿನಾಲೆಗೆ ದಿನಗಣನೆ ಶುರುವಾಗಿದೆ. ಈ ವಾರವೊಂದೇ ದೊಡ್ಮನೆ ಸ್ಪರ್ಧಿಗಳ ಆಟ ತೋರಿಸಲಿಕ್ಕೆ ಇರೋದು. ಮುಂದಿನ ವಾರವೇ ಫಿನಾಲೆ ನಡೆಯಲಿದೆ. ಸೋ ಉಳಿದಿರುವ ಎಂಟು ಸ್ಪರ್ಧಿಗಳ ನಡುವೆ ಬಿಗ್ ಬಾಸ್ ವಿನ್ನರ್ ಪಟ್ಟಕ್ಕೆ ಕಾಳಗ ನಡೆಯಲಿದೆ.

ವೀಕೆಂಡ್​ನಲ್ಲಿ ಕಿಚ್ಚ ಸುದೀಪ್ ಆಕ್ಟಿವಿಟಿವೊಂದನ್ನ ಕೊಟ್ಟಿದ್ರು. ಯಾರ ಮುಖಕ್ಕೆ ಏನ್ ಹೇಳಬೇಕೋ ಅದನ್ನ ಹೇಳಿ ಬೊಂಬೆಗೆ ಪಂಚ್ ಮಾಡಿ ಅಂತ. ದೊಡ್ಮನೆ ಸ್ಪರ್ಧಿಗಳು ತುಸು ಹೆಚ್ಚೇ ಸೀರಿಯಸ್ ಆಗಿ ತೆಗೆದುಕೊಂಡು ಹೊಡಿ ಮಗ ಹೊಡಿ ಮಗ ಅಂತ ಪಂಚ್ ಮಾಡಿದ್ದಾರೆ.ಈ ಆಕ್ಟಿವಿಟಿಯಲ್ಲಿ ರಾಶಿಕಾ ಅಶ್ವಿನಿ ಬಗ್ಗೆ ಸೂಕ್ತ ಕಾರಣ ಕೊಟ್ಟು ಪಂಚ್ ಮಾಡಿದ್ರು. ಆದ್ರೆ ಅಶ್ವಿನಿ ಅಂತೂ ರಾಶಿಕಾ ಬಗ್ಗೆ ಕೆಟ್ಟದಾಗಿ ಮಾತನಾಡ್ತಾ ಪಂಚ್ ಮಾಡಿದ್ದಾರೆ.

ನಾಮಿನೇಷನ್​ ನೆಪದಲ್ಲಿ ರಾಶಿಕಾ ಶೆಟ್ಟಿ ಮತ್ತು ರಕ್ಷಿತಾ ಶೆಟ್ಟಿ ನಡುವೆ ದೊಡ್ಡ ಜಗಳ ನಡೆದಿದೆ. ಆಗ ಫ್ಯಾಮಿಲಿ ವಿಷ್ಯ ತೆಗೆದಿದ್ದಕ್ಕೆ ಕೋಪಗೊಂಡ ರಾಶಿಕಾ,  ರಕ್ಷಿತಾ ಮೇಲೆ ಕೈ ಮಾಡೋದಕ್ಕೆ ಹೋಗಿದ್ದಾರೆ. ಇಬ್ಬರೂ ಪರಸ್ಪರ ತಳ್ಳಾಡಿದ್ದು ಮನೆಮಂದಿ ಇಬ್ಬರ ಜಗಳವನ್ನ ತಡೆದಿದ್ದಾರೆ.

ಹೌದು ಅತ್ತ ರಕ್ಷಿತಾ - ರಾಶಿ ನಡುವೆ ಕಿತ್ತಾಟ ನಡೆದ್ರೆ, ಇತ್ತ ನಾಮಿನೇಷನ್​ ನೆಪದಲ್ಲಿ ರಘು ಧ್ರುವಂತ್ ನಡುವೆನೂ ದೊಡ್ಡ ಫೈಟ್ ನಡೆದಿದೆ. ಒಂದು ಹಂತದಲ್ಲಿ ತಾಳ್ಮೆ ಕಳೆದುಕೊಂಡ ರಘು, ಧ್ರುವಂತ್​ ಮೇಲೆ ಕೈ ಎತ್ತೋದಕ್ಕೆ ಹೋಗಿದ್ದಾರೆ ಧನು ಅವರನ್ನ ತಡೆದಿದ್ದಾರೆ.

ಬಿಗ್ ಬಾಸ್ ಕೊನೆ ಕೊನೆಗೆ ಬರ್ತಾ, ಆಟ ರಂಗೇರೋದು ಸಹಜ. ಆದ್ರೆ ಈ ಸಾರಿ ತುಸು ಹೆಚ್ಚೇ ಕಾವೇರ್ತಾ ಇದೆ. ಸಹಸ್ಪರ್ಧಿಗಳ ನಡುವೆ ಮಾರಾಮಾರಿ ನಡೀತಾ ಇವೆ. ಈ ಜಟಾಪಟಿ, ರಾಗ, ದ್ವೇಷದ ನಡುವೆನೂ ಕೊನೆವರೆಗೂ ತಾಳ್ಮೆಯಿಂದ ಆಡಿದವರು ಮಾತ್ರ ಕಪ್ ಎತ್ತಿ ಹಿಡಿಯಲಿದ್ದಾರೆ.

02:52ಈಗ ಮತ್ತೊಂದು ಸರ್ಪ್ರೈಸ್‌ ಕೊಟ್ಟ ಶಿವರಾಜ್‌ಕುಮಾರ್‌, ಉಪೇಂದ್ರ, ಅರ್ಜುನ್‌ ಜನ್ಯ 45 Movie!
05:25ಜನವರಿ 8ಕ್ಕೆ ಕಾದಿದೆಯಾ Toxic Movie​​ ಸೂಪರ್​ ಸರ್​​ಪ್ರೈಸ್..? ಇನ್ಮುಂದೆ ನಡೆಯೋದು ಏನಿದ್ರೂ ಯಶ್ ಆಟ..!
04:41ನಿನಗಿದು ಬೇಕಿತ್ತಾ ಗಿಲ್ಲಿ..? ಆಟದಲ್ಲಿ ಗಿಲ್ಲಿ ನಟನ ಕಳ್ಳಾಟ..! ಗಿಲ್ಲಿಗೆ ವಿಲನ್​ ಆಗುತ್ತಿದೆಯಾ ಅವರ ಕಾಮಿಡಿ?
05:53BBK12: ಬಿಗ್ ಬಾಸ್ ಕನ್ನಡ ಅಂತಿಮ ವಾರ: ಕೊನೆ ವಾರ್? ಯಾರು ವಿನ್ನರ್? ಟಾಪ್ 2 ಸ್ಪರ್ಧಿಗಳು ಇವರೇನಾ?
05:17ತೃಪ್ತಿ ದಿಮ್ರಿ ಜೊತೆಗೆ ಡಾರ್ಲಿಂಗ್ ಪ್ರಭಾಸ್‌ ರಗಡ್ ಪೋಸ್, ಕಿಕ್ಕೇರಿಸಿದ ‘ಸ್ಪಿರಿಟ್’ ಮಾದಕ ಪೋಸ್ಟರ್!
24:19ನಟಿ ನಂದಿನಿಗೆ ಕಲೆ ಜನ್ಮಗತ ರಕ್ತದಲ್ಲೇ ಬಂದಿತ್ತು; ಸರ್ಕಾರಿ ಕೆಲಸ ಇಷ್ಟವಿಲ್ಲದೆ ನಟನೆಗಾಗಿಯೇ ಜೀವಬಿಟ್ಟಳು!
04:36ಕಾವ್ಯಾ ಶೈವ ಪರ ಗಿಲ್ಲಿ ಫೆವರಿಸಂ; ಇಷ್ಟು ದಿನ ಚೆನ್ನಾಗಿ ಆಡಿ, ಈಗ ಪಕ್ಷಪಾತ ಮಾಡಿದ್ರಾ Bigg Boss ಗಿಲ್ಲಿ ನಟ?
05:09ಗಿಲ್ಲಿಗಿಂತ ನನಗೆ ಹೆಚ್ಚು ಫ್ಯಾನ್ಸ್ ಇದ್ದಾರೆ; ಅವನು Bigg Boss ಶೋನಲ್ಲಿ ವ್ಯಕ್ತಿತ್ವವೇ ತೋರಿಸಿಲ್ಲ: ಮಾಳು ನಿಪನಾಳ
24:18ಬಿಗ್ ಬಾಸ್​ನಲ್ಲಿ ಮಂಡ್ಯದ ಗಂಡು ಗಿಲ್ಲಿಗೆ ಕಿಚ್ಚನ ಮೆಚ್ಚುಗೆ: ಬಿಗ್​ ಸ್ಕ್ರೀನ್​ನಲ್ಲಿ ಗಿಲ್ಲಿ ನಟನಿಗೆ ದಾಸನ ಅಪ್ಪುಗೆ!
Read more