ಬಿಗ್​ಬಾಸ್ ಮನೆಯಲ್ಲಿ ಟಾರ್ಗೆಟ್ ಆದ ರಕ್ಷಿತಾ! ಬಡಪಾಯಿ ಹುಡುಗಿ ಮೇಲೆ ದೊಡ್ಮಂದಿಯ ದರ್ಪ!

ಬಿಗ್​ಬಾಸ್ ಮನೆಯಲ್ಲಿ ಟಾರ್ಗೆಟ್ ಆದ ರಕ್ಷಿತಾ! ಬಡಪಾಯಿ ಹುಡುಗಿ ಮೇಲೆ ದೊಡ್ಮಂದಿಯ ದರ್ಪ!

Published : Nov 01, 2025, 04:27 PM IST

ಗ್​ಬಾಸ್​ ಆಟದಲ್ಲಿ ಬಡಪಾಯಿಗಳು ಸಿಕ್ರೆ ಅವರ ಕಥೆ ಅಷ್ಟೇ. ದೊಡ್ಮನೆಯ ದೊಡ್ಮಂದಿ ಅವರನ್ನ ಹುರಿದು ಮುಕ್ಕಿಬಿಡ್ತಾರೆ. ಈ ಸೀಸನ್​ನಲ್ಲಿ ಕರಾವಳಿ ಹುಡುಗಿ ರಕ್ಷಿತಾಳನ್ನ ಇದೇ ರೀತಿ ಟಾರ್ಗೆಟ್ ಮಾಡಲಾಗಿದೆಯಾ? ಈ ಸ್ಟೋರಿ ನೋಡಿ..

 

ಪ್ರತಿಸಾರಿ ಬಿಗ್ ಬಾಸ್​ಮನೆಯಲ್ಲಿ (Bigg Boss Kannada 12) ಒಬ್ಬ ಬಡಪಾಯಿನ ಹುಡುಕಿ ಅವರನ್ನ  ಟಾರ್ಗೆಟ್ ಮಾಡೋದು ಕಾಮನ್. ಈ ಸಾರಿಯ ಬಿಗ್​ಬಾಸ್ ಮನೆಯ ಕಿರೀಯ ಸ್ಪರ್ಧಿ ರಕ್ಷಿತಾ ಶೆಟ್ಟಿ, ಇದೇ ರೀತಿ ಮನೆಮಂದಿಯಿಂದ ಟಾರ್ಗೆಟ್ ಆಗ್ತಾ ಇದ್ದಾರೆ. ರಕ್ಷಿತಾನ ಹಂಗಿಸಿ, ಕುಗ್ಗಿಸ್ತಾ ಇದ್ದಾರೆ. ಆಧ್ರೆ ಜನ ಮಾತ್ರ ರಕ್ಷಿತಾಗೆ ಮನೆಮಗಳ ಪಟ್ಟ ಕೊಟ್ಟಿದ್ದಾರೆ.

ಬಿಗ್​ಬಾಸ್ ಮನೆಯಲ್ಲಿ ಟಾರ್ಗೆಟ್ ಆದ ರಕ್ಷಿತಾ..!
ಯೆಸ್ ಬಿಗ್​ಬಾಸ್​ ಆಟದಲ್ಲಿ ಬಡಪಾಯಿಗಳು ಸಿಕ್ರೆ ಅವರ ಕಥೆ ಅಷ್ಟೇ. ದೊಡ್ಮನೆಯ ದೊಡ್ಮಂದಿ ಅವರನ್ನ ಹುರಿದು ಮುಕ್ಕಿಬಿಡ್ತಾರೆ. ಈ ಸೀಸನ್​ನಲ್ಲಿ ಕರಾವಳಿ ಹುಡುಗಿ ರಕ್ಷಿತಾಳನ್ನ ಇದೇ ರೀತಿ ಟಾರ್ಗೆಟ್ ಮಾಡಿಕೊಳ್ಳಲಾಗಿದೆ.

ಈ ಹಿಂದೆ ರಕ್ಷಿತಾಳ ಬಟ್ಟೆ, ಬರೆ ಬಗ್ಗೆ ಕೆಟ್ಟದಾಗಿ ಟೀಕೆ ಮಾಡಿದ್ದ ಅಶ್ವಿನಿ ಗೌಡಗೆ ಕಿಚ್ಚ ಸುದೀಪ್ ಖಡಕ್ ಪಾಠ ಹೇಳಿದ್ರು. ರಕ್ಷಿತಾ ಬಗ್ಗೆ ಸ್ಲಮ್ ಅನ್ನೋ ಪದ ಬಳಸಿದ್ದಕ್ಕೆ ಅಶ್ವಿನಿ ಗೌಡ ಮೇಲೆ ಪೊಲೀಸ್ ದೂರು ಕೂಡ ದಾಖಲಾಗಿದೆ.

ಆದ್ರೆ ಈಗಲೂ ರಕ್ಷಿತಾಳನ್ನ ಟಾರ್ಗೆಟ್ ಮಾಡಲಾಗ್ತಾ ಇದೆ. ಅಡಿಗೆ ಮಾಡೋದಕ್ಕೆ , ಪಾತ್ರೆ ತೊಳೆಯೋದಕ್ಕೆ ರಕ್ಷಿತಾಗೆ ಯಾರೂ ಸಹಾಯ ಮಾಡ್ತಿಲ್ಲ. ಆ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಬಿಗ್ ಬಾಸ್ ಹೆಂಗಳೆಯರೆಲ್ಲಾ ರಕ್ಷಿತಾಳನ್ನ ಹಿಗ್ಗಾಮುಗ್ಗಾ ನಿಂದಿಸಿದ್ದಾರೆ.

ಚಂದ್ರಪ್ರಭ, ರಘು ಸೇರಿದಂತೆ ಅನೇಕರು ರಕ್ಷಿತಾ ಬಗ್ಗೆ ಕನಿಕರ ವ್ಯಕ್ತಪಡಿಸಿದ್ದಾರೆ. ಅವಳನ್ನ ಮನೆಕೆಲಸದವಳಂತೆ ಇತರ ಮಹಿಳಾ ಸ್ಪರ್ಧಿಗಳು ಟ್ರೀಟ್ ಮಾಡ್ತಾ ಇದ್ದಾರೆ ಅಂತ ಬೇಸರ ವ್ಯಕ್ತಪಡಿಸಿದ್ದಾರೆ.

ಆದ್ರೆ ಇಷ್ಟಾದರೂ ರಕ್ಷಿತಾ ಬೆಂಬಲಕ್ಕೆ ಯಾರೂ ಬಂದಿಲ್ಲ. ಇದ್ದುದರಲ್ಲಿ ಗಿಲ್ಲಿ ನಟ ರಕ್ಷಿತಾ ಪರ ವಹಿಸಿದ್ದು ಬಿಟ್ರೆ ಯಾರೂ ರಕ್ಷಿತಾ ಪರ ಸ್ಟಾಂಡ್ ತೆಗೆದುಕೊಂಡಿಲ್ಲ.

ಬಡಪಾಯಿ ಹುಡುಗಿ ಮೇಲೆ ದೊಡ್ಮಂದಿಯ ದರ್ಪ
ರಕ್ಷಿತಾ ಬಡ ಕುಟುಂಬದಿಂದ ಬಂದ ಹುಡುಗಿ. ಬಿಗ್ ಬಾಸ್ ಮನೆಯ ಉಳಿದ ಸದಸ್ಯರಿಗೆ ಹೋಲಿಸಿದ್ರೆ ವಯಸ್ಸಲ್ಲೂ, ಅನುಭವದಲ್ಲೂ ರಕ್ಷಿತಾ ಕಿರಿಯ ಸ್ಪರ್ಧಿ. ಎಲ್ಲರೂ ಟಾರ್ಗೆಟ್ ಮಾಡಿದ್ರೂ ರಕ್ಷಿತಾ ಮಾತ್ರ ನ್ಯಾಯವಾದ ಆಟ ಆಡ್ತಾ ಇದ್ದಾಳೆ. ಸೋ ವೀಕ್ಷಕರು ಈಕೆಯನ್ನ ಮನೆಮಗಳು ಅಂತ ಕರೀತಾ ಇದ್ದಾರೆ. ಮನೆಮಂದಿ ಕಾಲೆಳೆದರೂ ಜನ ಮಾತ್ರ ಈಕೆಯ ಕೈ ಹಿಡೀತಾ ಇದ್ದಾರೆ.
ಹೆಚ್ಚಿನ ಮಾಹಿತಿಗೆ ವೀಡಿಯೋ ನೋಡಿ..

04:49ದೊಡ್ಮನೆಯಲ್ಲಿ ಪ್ರೇಮ, ಜಗಳ, ಡ್ರಾಮಾ: ಸೇರಿಗೆ ಸವಾ ಸೆರ್.. ಕಾವ್ಯಗೆ ಗಿಲ್ಲಿ ಕೌಂಟರ್!
06:49ಕ್ಯಾಪ್ಟನ್ಸಿ ಟಾಸ್ಕ್‌ಗಾಗಿ ರಕ್ತ ಹರಿಸಿದ ಸ್ಪರ್ಧಿಗಳು: ರಜತ್-ಚೈತ್ರಾ ನಡುವೆ ತಂದಿಕ್ಕಿ ತಮಾಷೆ ನೋಡಿದ ಗಿಲ್ಲಿ
23:12ಬೀದಿಗೆ ಬಂತು ಕನ್ನಡದ ಮತ್ತೊಬ್ಬ ಸೀರಿಯಲ್ ನಟಿಯ ಕುಟುಂಬ; ಮದುವೆಗೂ ಮುನ್ನವೇ ಬಳಸಿಕೊಂಡಿದ್ದ ಸುರೇಶ!
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
03:42ಜೀ ಕನ್ನಡದಲ್ಲಿ ಆದಿ ಲಕ್ಷ್ಮೀ ಪುರಾಣ ಆರಂಭ.. ಡೆವಿಲ್​ ಜೊತೆ ಪಿವೋಟ್ ಚಿತ್ರ ರಿಲೀಸ್!
03:58ಬಿಗ್ ​ಬಾಸ್​ನಿಂದ ಬಿಗ್​ ಬಾಸೇ ಔಟ್.. ದೊಡ್ಮನೆಯಲ್ಲಿ ವಿಲನ್ ಟಾಸ್ಕ್‌ಗಳಿಂದ ಬೆಚ್ಚಿಬಿದ್ದ ಸ್ಪರ್ಧಿಗಳು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
05:43ರಣರಂಗವಾದ ದೊಡ್ಮನೆ.. ಜಾಲಿವುಡ್‌ಗೆ ಬಂದ ಅತಿಥಿಗಳ ಜೊತೆ ಗಲಾಟೆ ಮಾಡಿದ ಗಿಲ್ಲಿ!
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
03:12BBK 12: ಅಂಥಂಥ ಮಾತಾಡಿ ಅಶ್ವಿನಿ ಗೌಡಗೆ ಕ್ಯಾಪ್ಟನ್ಸಿ ಸಿಗದಂತೆ ಮಾಡಿದ ಗಿಲ್ಲಿ ನಟ!
Read more