vuukle one pixel image

ಬಿಗ್ ಬಾಸ್ ಮನೆಗೆ ಬಂದ ವಿಕಟಕವಿ 'ಬೊಂಬೆ ಆಡ್ಸೋನು', ಕೊಟ್ಟ ಪಂಚ್ ಎಂಥದ್ದು?

Shriram Bhat  | Published: Oct 27, 2024, 2:46 PM IST

ಅಮ್ಮನ ಅಗಲಿಕೆ ನೋವಲ್ಲಿರೋ ಕಿಚ್ಚ ಸುದೀಪ್ ಈ ವಾರದ ಬಿಗ್ ಬಾಸ್ ಪಂಚಾಯತಿಗೆ ಅಬ್ಸೆಂಟ್ ಆಗಿದ್ದಾರೆ. ಕಿಚ್ಚನ ಬದಲು ಈ ಬಾರಿ ಪಂಚಾಯತಿ ನಡೆಸಿಕೊಡೋಕೆ ಬಂದಿದ್ದಾರೆ ವಿಕಟಕವಿ ಯೋಗರಾಜ್ ಭಟ್ರು. ಭಟ್ಟರ ಪಂಚಾಯತಿ ನೋಡಿದವರು ಇವ್ರು ಮುಂದಿನ ಸಾರಿಯಿಂದ ಕಿಚ್ಚನ ಜಾಗ ತುಂಬಬಲ್ಲ ಹೋಸ್ಟ್ ಆಗಬಹುದು ಅಂತಿದ್ದಾರೆ.

ನಿರ್ದೇಶಕ, ಚಿತ್ರಸಾಹಿತಿ ಯೋಗರಾಜ್ ಭಟ್ಟರ ಹಾಸ್ಯಪ್ರಜ್ಞೆ ಎಂಥದ್ದು ಅನ್ನೋದು ಎಲ್ಲರಿಗೂ ಗೊತ್ತಿದೆ. ಮನೆಯೊಳಗೆ ಬರ್ತಾನೆ 'ಗಳು', 'ಗಳು' ಅಂತ ಹೇಳ್ತಾ ಹಾಸ್ಯದ ಹೊಳೆಯನ್ನೇ ಹರಿಸಿರೋ ಭಟ್ರು ಆ ನಗುವಿನ ಜೊತೆ ಜೊತೆಗೆ ಮನೆ ಮಂದಿಗೆ ಮಾತಿನ ಪಂಚ್ ಕೊಟ್ಟಿದ್ದಾರೆ. ಯಾರಿಗೆ ಏನ್ ಹೇಳಬೇಕೋ ಅದನ್ನ ಹೇಳಿ ಮುಗಿಸಿದ್ದಾರೆ.

ಹನುಮಂತನಿಗೆ ನೀನು ಕಂಟೆಂಸ್ಟೆಂಟಾ.. ಇಲ್ಲಾ ಆಡಿಯನ್ಸಾ ಅಂತ ಪ್ರಶ್ನೆ ಕೇಳಿರೋ ಭಟ್ರು , ಹನುಮನಿಗೆ ವೀಕ್ಷಕನಾಗಬೇಡ ಸ್ಪರ್ಧಿಯಾಗು ಅಂತ ಎಚ್ಚರಿಸಿದ್ದಾರೆ. ಇನ್ನೂ ಮಾನಸಾಗೇ ಬಾಯಿತಪ್ಪಿ ಗಂಡ್ಸು ಅಂದಿರೋ ಭಟ್ರು, ನಿಮ್ಮನ್ನ ಹೊರಗಡೇ ಹಾಗೇ ಕರೀತಿದ್ದಾರೆ ಅಂತಾ ಎಚ್ಚರಿಸಿದ್ದಾರೆ. ಇನ್ನೂ ಏನೇನು ಅಂದಿದಾರೆ ಅಂತ ವಿಡಿಯೋ ನೋಡಿ!