ರಣರಂಗವಾದ ದೊಡ್ಮನೆ.. ಜಾಲಿವುಡ್‌ಗೆ ಬಂದ ಅತಿಥಿಗಳ ಜೊತೆ ಗಲಾಟೆ ಮಾಡಿದ ಗಿಲ್ಲಿ!

ರಣರಂಗವಾದ ದೊಡ್ಮನೆ.. ಜಾಲಿವುಡ್‌ಗೆ ಬಂದ ಅತಿಥಿಗಳ ಜೊತೆ ಗಲಾಟೆ ಮಾಡಿದ ಗಿಲ್ಲಿ!

Published : Nov 28, 2025, 01:25 PM IST

ಸಾಮಾನ್ಯವಾಗಿ ಅತಿಥಿಗಳು ಮನೆಮಂದಿನ ಗೋಳು ಹೊಯ್ದುಕೊಳ್ತಾರೆ. ಆದ್ರೆ ಗಿಲ್ಲಿ ಮಾತ್ರ ಅತಿಥಿಗಳನ್ನೇ ಗೋಳಾಡಿಸಿ ಬಿಟ್ಟಿದ್ದಾನೆ. ಅದ್ರಲ್ಲೂ ಉಗ್ರಂ ಮಂಜು ಮತ್ತು ರಜತ್, ವೇಟರ್ ಗಿಲ್ಲಿಗೆ ಕಾಟ ಕೊಡೋದಕ್ಕೆ ಪ್ಲಾನ್ ಮಾಡಿದ್ರು. ಆ ಪ್ಲಾನ್​ನೆಲ್ಲಾ ಉಲ್ಟಾ ಮಾಡಿದ ಗಿಲ್ಲಿ ಅತಿಥಿಗಳ ತಿಥಿ ಮಾಡಿದ್ದು ಸುಳ್ಳಲ್ಲ.

ಬಿಗ್​ಬಾಸ್ ಮನೆಯಲ್ಲಿ ಈ ವಾರ ಕಳೆದ ಸೀಸನ್ ನ ಸ್ಪರ್ಧಿಗಳು ಎಂಟ್ರಿ ಕೊಟ್ಟು, ಆಟಕ್ಕೆ ಟ್ವಿಸ್ಟ್ ಕೊಟ್ಟಿದ್ದಾರೆ. ಕಳೆದ ಸೀಸನ್​ನ 5 ಸ್ಪರ್ಧಿಗಳು ಅತಿಥಿಗಳಾಗಿ ಬಂದರೆ ಈ ಸೀಸನ್​ ಸ್ಪರ್ಧಿಗಳು ಅವರಿಗೆ ಆತಿಥ್ಯ ಕೊಡಬೇಕಿತ್ತು. ಆದ್ರೆ ಗಿಲ್ಲಿ ಈ ಅತಿಥಿಗಳ ತಿಥಿ ಮಾಡಿದ್ದು ಸುಳ್ಳಲ್ಲ.

ಬಿಗ್​ಬಾಸ್ ಮನೆಯಲ್ಲಿ ಗಿಲ್ಲಿ Vs ಸೀನಿಯರ್ಸ್..!
ಪ್ಯಾಲೇಸ್​ಗೆ ಬಂದ ಅತಿಥಿಗಳ ತಿಥಿ ಮಾಡಿದ ಗಿಲ್ಲಿ 
ಯೆಸ್ ಈ ವಾರ ಬಿಗ್​ಬಾಸ್ ಆಟಕ್ಕೆ ಒಂದು ಟ್ವಿಸ್ಟ್ ಕೊಡಲಾಗಿತ್ತು. ಕಳೆದ ಸೀಸನ್​ನ ಸ್ಪರ್ಧಿಗಳಾದ  ಉಗ್ರಂ ಮಂಜು, ಮೋಕ್ಷಿತಾ, ಚೈತ್ರಾ ಕುಂದಾಪುರ, ತ್ರಿವಿಕ್ರಮ್ ಮತ್ತು ರಜತ್ ಅತಿಥಿಗಳಾಗಿ ಎಂಟ್ರಿ ಕೊಟ್ಟಿದ್ರು. ಈ ವಾರ ಬಿಗ್​ಬಾಸ್ ಮನೆ ಬಿಗ್​ಬಾಸ್ ಪ್ಯಾಲೇಸ್ ಆಗುತ್ತೆ ಅಂತ ಘೋಷಿಸಲಾಗಿತ್ತು. ಸಿಬ್ಬಂದಿಗಳಾಗಿ ಬಂದ ಅತಿಥಿಗಳನ್ನ ಸತ್ಕಾರ ಮಾಡೋ ಜವಾಬ್ದಾರಿ ಮನೆಮಂದಿಗೆ ವಹಿಸಲಾಗಿತ್ತು.

ಸಾಮಾನ್ಯವಾಗಿ ಅತಿಥಿಗಳು ಮನೆಮಂದಿನ ಗೋಳು ಹೊಯ್ದುಕೊಳ್ತಾರೆ. ಆದ್ರೆ ಗಿಲ್ಲಿ ಮಾತ್ರ ಅತಿಥಿಗಳನ್ನೇ ಗೋಳಾಡಿಸಿ ಬಿಟ್ಟಿದ್ದಾನೆ. ಅದ್ರಲ್ಲೂ ಉಗ್ರಂ ಮಂಜು ಮತ್ತು ರಜತ್,  ವೇಟರ್ ಗಿಲ್ಲಿಗೆ ಕಾಟ ಕೊಡೋದಕ್ಕೆ ಪ್ಲಾನ್ ಮಾಡಿದ್ರು. ಆ ಪ್ಲಾನ್​ನೆಲ್ಲಾ ಉಲ್ಟಾ ಮಾಡಿದ ಗಿಲ್ಲಿ ಅತಿಥಿಗಳ ತಿಥಿ ಮಾಡಿದ್ದು ಸುಳ್ಳಲ್ಲ.

ಈ ಇಡೀ ಟಾಸ್ಕ್ ನುದ್ದಕ್ಕೂ ಮನೆಮಂದಿಯೆಲ್ಲಾ ಸೈಲೆಂಟ್ ಆಗಿ ಬಿಟ್ಟಿದ್ರು. ಸೀನಿಯರ್ಸ್​​ ಜೊತೆಗೆ ಟಕ್ಕರ್ ಕೊಡ್ತಾ ಗಿಲ್ಲಿಯೊಬ್ಬನೇ ಇಡೀ ವಾರ ಹೈಲೈಟ್ ಆಗಿದ್ದು ಸುಳ್ಳಲ್ಲ. ಅದು ಪಾಸಿಟಿವ್ವೋ ನೆಗೆಟಿವ್ವೋ ಒಟ್ನಲ್ಲಿ ಸ್ಕ್ರೀನ್ ತುಂಬಾ ಕಾಣಿಸಿದ್ದು ಒನ್ ಌಂಡ್ ಓನ್ಲಿ ಗಿಲ್ಲಿ.

ಗಿಲ್ಲಿ ಮಾಡಿದ ರೋಸ್ಟ್​​ಗೆ ಸೀನಿಯರ್ಸ್ ಬ್ಲಾಸ್ಟ್..!
ಬಿಗ್​ಬಾಸ್ ಅತಿಥಿಗಳಿಗೆ ಸ್ಪರ್ಧಿಗಳೆಲ್ಲಾ ಮನರಂಜನೆ ಕೊಡಬೇಕು ಅನ್ನೋ ಟಾಸ್ಕ್ ಕೊಟ್ಟಿದ್ರು. ಬೇರೆಯವರೆಲ್ಲಾ ಹಾಡಿ ಕುಣಿದು ಮನರಂಜನೆ ನೀಡಿದ್ರು. ಆದ್ರೆ ಬಿಗ್​ಬಾಸ್ ಗಿಲ್ಲಿಗೆ ಕೊಟ್ಟಿದ್ದು ಸೀನಿಯರ್ಸ್​ನ ರೋಸ್ಟ್ ಮಾಡೋ ಟಾಸ್ಕ್. ಹೇಳಿ ಕೇಳಿ ಗಿಲ್ಲಿ ರೋಸ್ಟ್ ಮಾಡೋದ್ರಲ್ಲಿ ಪಂಟರ್. ಅದನ್ನೇ ಟಾಸ್ಕ್ ಆಗಿ ಕೊಟ್ರೆ ಬಿಡ್ತಾನಾ. ಸೀನಿಯರ್ಸ್ ಬ್ಲಾಸ್ಟ್ ಆಗೋ ರೇಂಜ್​ಗೆ ರೋಸ್ಟ್ ಮಾಡಿದ್ದಾನೆ.
ಫ್ಲೋ..
‘ಜಡ್ಜಸ್ ತಮ್ಮ ಕೆಲಸ ಮಾಡ್ತಿಲ್ಲ. ಅವರು ಇಲ್ಲಿ ನಮಗೆ ಬೂಸ್ಟ್ ಆಗ್ತಾರೆ ಅಂದುಕೊಂಡಿದ್ದೆ. ಆದರೆ ಇಲ್ಲಿ ಬಂದು ನನ್ನ ಕೈಯಲ್ಲಿ ಸಿಕ್ಕಿಕೊಂಡು ಡಿಪ್ರೆಷನ್​​ನಲ್ಲಿ ಇದ್ದಾರೆ’ ಅಂತ ಗಿಲ್ಲಿ ಸೀನಿಯರ್ಸ್​​ನ ರೇಗಿಸಿದ್ದಾನೆ. ಗಿಲ್ಲಿ ಈ ಪರಿ ರೋಸ್ಟ್ ಮಾಡಿದ್ದು ನೋಡಿ ಬಿಗ್ ಬಾಸ್ ಮನೆಯ ಸ್ಪರ್ಧಿಗಳು ಎಂಜಾಯ್ ಮಾಡಿದ್ರು. ಆದರೆ ಅತಿಥಿಗಳಿಗೆ ಸಿಕ್ಕಾಪಟ್ಟೆ ಕಿರಿಕಿರಿ ಆಗಿದೆ.

ಒಟ್ನಲ್ಲಿ ಈ ಬಿಗ್​ಬಾಸ್ ​ ಪ್ಯಾಲೇಸ್​ ಟಾಸ್ಕ್ ನಲ್ಲಿ ಈ ವಾರವಿಡಿ ಗಿಲ್ಲಿ ಸಖತ್ ಹೈಲೈಟ್ ಆಗಿದ್ದಾನೆ. ಈ ಟಾಸ್ಕ್ ಮತ್ತು ಗಿಲ್ಲಿ ನಟನ ರೋಸ್ಟ್ ಬಗ್ಗೆ ವೀಕೆಂಡ್​ನಲ್ಲಿ ಕಿಚ್ಚ ಸುದೀಪ್ ಏನ್ ಹೇಳ್ತಾರೆ ಅಂತ ವೀಕ್ಷಕರು ಕಾಯ್ತಾ ಇದ್ದಾರೆ..!
ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..

05:43ರಣರಂಗವಾದ ದೊಡ್ಮನೆ.. ಜಾಲಿವುಡ್‌ಗೆ ಬಂದ ಅತಿಥಿಗಳ ಜೊತೆ ಗಲಾಟೆ ಮಾಡಿದ ಗಿಲ್ಲಿ!
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
03:12BBK 12: ಅಂಥಂಥ ಮಾತಾಡಿ ಅಶ್ವಿನಿ ಗೌಡಗೆ ಕ್ಯಾಪ್ಟನ್ಸಿ ಸಿಗದಂತೆ ಮಾಡಿದ ಗಿಲ್ಲಿ ನಟ!
05:26ಮರ್ಯಾದೆ ಪ್ರಶ್ನೆ..? ಅಶ್ವಿನಿ ‘ಬಿಗ್’​ಡ್ರಾಮಾ: ಕಣ್ಣೀರಿಟ್ಟು ಮನೆಯಿಂದ ಹೊರಟುನಿಂತ ಅಶ್ವಿನಿ..!
06:04ಬಿಗ್​ಬಾಸ್ ಅಗ್ನಿ ಪರೀಕ್ಷೆ, ಬಿಗ್​ ಬಾಸ್ ಮನೆಯಲ್ಲಿ ಗಿಲ್ಲಿಯ ಪ್ರೇಮಕಾವ್ಯ..!
06:01ಗಿಲ್ಲಿ ಮೇಲೆ ಹಲ್ಲೆ ಮಾಡಿಯೂ ಬಚಾವ್ ಆದ್ರಾ ರಿಷಾ ಗೌಡ? ಕಿಚ್ಚ ಸುದೀಪ್ ಎದುರೇ ಕಿಕ್​ ಔಟ್?
05:38ಅಂದು ಒಳ್ಳೆ ಹುಡುಗ ಪ್ರಥಮ್‌ ಸೀಸನ್‌ನಲ್ಲಿ ನಡೆದ ಘಟನೆ ಈಗ Bigg Boss Kannada 12 ಶೋನಲ್ಲಿ ನಡೆದುಹೋಯ್ತು!
02:28ಆಡಿಕೊಳ್ಳೋರಿಗೆ ಒಂದೇ ಒಂದು ಫೋಟೋದಲ್ಲಿ ಬಾಯಿ ಮುಚ್ಚಿಸಿದ Bollywood Actor Salman Khan
06:42ಬಿಗ್​ ಬಾಸ್ ಮನೆಯೊಳಗೆ ನಡೀತಿದೆಯಾ ಕಳ್ಳಾಟ? ಕಲರ್ ಕಲರ್ ಗೇಮ್ ಆಡ್ತಾ ಇರೋದು ಯಾರು?
Read more