ಬಿಗ್​ಬಾಸ್ ಅಗ್ನಿ ಪರೀಕ್ಷೆ, ಬಿಗ್​ ಬಾಸ್ ಮನೆಯಲ್ಲಿ ಗಿಲ್ಲಿಯ ಪ್ರೇಮಕಾವ್ಯ..!

ಬಿಗ್​ಬಾಸ್ ಅಗ್ನಿ ಪರೀಕ್ಷೆ, ಬಿಗ್​ ಬಾಸ್ ಮನೆಯಲ್ಲಿ ಗಿಲ್ಲಿಯ ಪ್ರೇಮಕಾವ್ಯ..!

Published : Nov 09, 2025, 09:45 AM IST

ಯೆಸ್ ಬಿಗ್​ಬಾಸ್ ಮನೆಯಲ್ಲಿ ಈ ಸಾರಿ ಎಲ್ಲರ ಫೆವರೀಟ್ ಸ್ಪರ್ಧಿ ಗಿಲ್ಲಿ. ಇನ್ನೂ ಕಾವ್ಯಾ ಜೊತೆಗಿನ ಗಿಲ್ಲಿಯ ಪ್ರೇಮಕಾವ್ಯ ಕೂಡ ಎಲ್ಲರ ಮನಗೆದ್ದಿದೆ. ಈ ಜೋಡಿಯ ಆಟ, ತುಂಟಾಟ, ಕೋಪ, ಮುನಿಸು ಎಲ್ಲವೂ ವೀಕ್ಷಕರಿಗೆ ಇಷ್ಟವಾಗ್ತಾ ಇದೆ.

ಬಿಗ್​ಬಾಸ್ ಮನೆಯಲ್ಲಿ ಈ ಸಾರಿ ಎಲ್ಲರ ಫೆವರೀಟ್ ಸ್ಪರ್ಧಿ ಅನ್ನಿಸಿಕೊಂಡಿರೋದು ಗಿಲ್ಲಿ ನಟ. ಅದ್ರಲ್ಲೂ ಗಿಲ್ಲಿ ಌಂಡ್ ಕಾವ್ಯ ಜೋಡಿಯ ಮೋಡಿ ವೀಕ್ಷರಿಗೆ ಇಷ್ಟವಾಗ್ತಾ ಇದೆ. ಆದ್ರೆ ಈ ವಾರ ಗಿಲ್ಲಿ-ಕಾವ್ಯ ನಡುವೆ ಬಿಗ್​ಬಾಸ್ ಒಂದು ಅಗ್ನಿಪರೀಕ್ಷೆ ಇಟ್ಟಿದ್ರು. ಆ ಪರೀಕ್ಷೆಯಲ್ಲೂ ಈ ಜೋಡಿ ಪಾಸ್ ಆಗಿದೆ.

ಕಾವ್ಯಾಗಾಗಿ ತ್ಯಾಗ ಮಾಡಿ ಎಲ್ಲರ ಮನಗೆದ್ದ ಗಿಲ್ಲಿ..!
ಯೆಸ್ ಬಿಗ್​ಬಾಸ್ ಮನೆಯಲ್ಲಿ ಈ ಸಾರಿ ಎಲ್ಲರ ಫೆವರೀಟ್ ಸ್ಪರ್ಧಿ ಗಿಲ್ಲಿ. ಇನ್ನೂ ಕಾವ್ಯಾ ಜೊತೆಗಿನ ಗಿಲ್ಲಿಯ ಪ್ರೇಮಕಾವ್ಯ ಕೂಡ ಎಲ್ಲರ ಮನಗೆದ್ದಿದೆ. ಈ ಜೋಡಿಯ ಆಟ, ತುಂಟಾಟ, ಕೋಪ, ಮುನಿಸು ಎಲ್ಲವೂ ವೀಕ್ಷಕರಿಗೆ ಇಷ್ಟವಾಗ್ತಾ ಇದೆ.

ಈ ವಾರ ಬಿಗ್​ಬಾಸ್ ಮನೆಯಲ್ಲಿ ಟಾಸ್ಕ್ ಇಲ್ಲ. ಬದಲಾಗಿ ಕಿಚ್ಚ ಹೇಳಿದಂತೆ ಎಲ್ಲರೂ ನಾಮಿನೇಟ್ ಆಗಿದ್ದಾರೆ. ಆದ್ರೆ ಬಿಗ್​ ಬಾಸ್​​ವೊಂದು ಟ್ವಿಸ್ಟ್ ಕೊಟ್ಟಿದ್ದಾರೆ.  ಸ್ಪರ್ಧಿಗಳಿಗೆ ಅವರವರ ಮನೆಗಳಿಂದ ಪತ್ರಗಳು ಬಂದಿವೆ. ಸ್ಪರ್ಧಿಗಳು ತಮ್ಮ ಮನೆಯ ಪತ್ರಗಳನ್ನು ಓದಬೇಕಾದರೆ ಬಿಗ್ ಬಾಸ್ ಕೊಡುವ ಟಾಸ್ಕ್ ಕೂಡ ಪೂರ್ಣಗೊಳಿಸಬೇಕು. ಇಬ್ಬಿಬ್ಬರು ಸ್ಪರ್ಧಿಗಳನ್ನ ಆಯ್ಕೆ ಮಾಡಿ ಟಾಸ್ಕ್ನೀಡಲಾಗಿದೆ. ಗೆದ್ದವರು ತಮ್ಮ ಮನೆಯಿಂದ ಬಂದ ಪತ್ರವನ್ನ ಓದಬಹುದು. ಆದರೆ, ಸೋತವರು ಪತ್ರವನ್ನ ಕಳೆದುಕೊಂಡು ಕಣ್ಣಿರು ಹಾಕಿದ್ದಾರೆ.

ಗಿಲ್ಲಿ ಕಾವ್ಯಾ ನಡುವಿನ ಅನ್ಯೋನ್ಯತೆ ನೋಡಿ ಅದನ್ನ ಬ್ರೇಕ್ ಮಾಡ್ಲಿಕ್ಕೆ ಅಂತಾನೇ ಬಿಗ್​ಬಾಸ್ ಇಬ್ಬರ ನಡುವೆ ಅಗ್ನಿಪರೀಕ್ಷೆ ಇಟ್ಟಿದ್ರು. ಇಬ್ಬರನ್ನೂ ಪ್ರತ್ಯೇಕವಾಗಿ ಕರೆದು ಟ್ವಿಸ್ಟ್ ವೊಂದನ್ನ ಕೊಟ್ರು.  ಕಾವ್ಯ ಎದುರು ಗಿಲ್ಲಿ ಮನೆಯ ಲೆಟರ್ಹಾಗೂ ಗಿಲ್ಲಿ ಎದುರು ಕಾವ್ಯ ಮನೆಯ ಲೆಟರ್ಇಡಲಾಗಿತ್ತು. ಯಾರಾದರು ಒಬ್ಬರು ಮಾತ್ರ ಲೆಟರ್ನ  ಹೊರಗೆ ತರಬಹುದಿತ್ತು. ಅಪ್ಪಿತಪ್ಪಿ ಇಬ್ಬರೂ ಲೆಟರ್ತಂದರೆ, ಇಬ್ಬರೂ ಕೂಡ ಲೆಟರ್ಕಳೆದುಕೊಂಡು ನಾಮಿನೇಷನ್ನಲ್ಲಿ ಮುಂದುವರಿಯಬೇಕಿತ್ತು. ಈ ಬಗ್ಗೆ ಆಲೋಚನೆಗೆ ಎರಡು ನಿಮಿಷ ಕಾಲಾವಕಾಶ ನೀಡಲಾಗಿತ್ತು.

2 ನಿಮಿಷದ ಬಳಿಕ, ಗಿಲ್ಲಿ ಲೆಟರ್ ತೆಗೆದುಕೊಂಡು ಹೊರಗೆ ಬರುವುದಾಗಿ ಹೇಳಿದ. ಇತ್ತ ಕಾವ್ಯಗೂ ಇದೇ ಪ್ರಶ್ನೆ ಮುಂದಿಡಲಾಯಿತು. ಆದರೆ, ಕಾವ್ಯ ಲೆಟರ್ಹೊರ ತರೋದಿಲ್ಲ ಅಂತ ತಿಳಿಸಿದರು. ಅಲ್ಲದೇ, ಗಿಲ್ಲಿ ಲೆಟರ್ತಂದೇ ತರ್ತಾನೆ ಅನ್ನೊ ಭರವಸೆಯನ್ನ ಕಾವ್ಯ ವ್ಯಕ್ತಪಡಿಸಿದರು. ಒಂದು ವೇಳೆ, ಕಾವ್ಯ ಲೆಟರ್ತಂದರೆ ಹೇಗಪ್ಪ ಅನ್ನೋ ಅಳುಕು ಗಿಲ್ಲಿಯಲ್ಲಿ ಇತ್ತು. ಕೊನೆಗೆ ಗಿಲ್ಲಿ ಮಾತ್ರ ಲೆಟರ್ತಂದರು. ಗಿಲ್ಲಿಯನ್ನ ಕಾವ್ಯ ಎಷ್ಟು ಅರ್ಥ ಮಾಡಿಕೊಂಡಿದ್ದಾರೆ ಅನ್ನೋದು ಮನೆಮಂದಿಗೆ ಆಶ್ವರ್ಯ ಮೂಡಿಸ್ತು.

ಈ ಟಾಸ್ಕ್​ನಿಂದ ಗಿಲ್ಲಿ ಕಾವ್ಯಾನ ಬಚಾವ್ ಮಾಡಿ ತಾನು ನಾಮಿನೇಟ್ ಆಗಿದ್ದಾನೆ. ಅಲ್ಲದೇ ತನ್ನ ಮನೆಯಿಂದ ಬಂದ ಪತ್ರ ಕೂಡ ಕಳೆದುಕೊಂಡಿದ್ದಾನೆ. ಆದ್ರೆ ಈ ಟಾಸ್ಕ್​​ನಿಂದ ಕಾವ್ಯ ಮನಸ್ಸನ್ನಷ್ಟೇ ಅಲ್ಲ ನೋಡುಗರ ಮನಸ್ಸನ್ನೆಲ್ಲಾ ಗೆದ್ದಿದ್ದಾನೆ ಕಿಲಾಡಿ ಗಿಲ್ಲಿ..!
ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ...

05:43ರಣರಂಗವಾದ ದೊಡ್ಮನೆ.. ಜಾಲಿವುಡ್‌ಗೆ ಬಂದ ಅತಿಥಿಗಳ ಜೊತೆ ಗಲಾಟೆ ಮಾಡಿದ ಗಿಲ್ಲಿ!
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
03:12BBK 12: ಅಂಥಂಥ ಮಾತಾಡಿ ಅಶ್ವಿನಿ ಗೌಡಗೆ ಕ್ಯಾಪ್ಟನ್ಸಿ ಸಿಗದಂತೆ ಮಾಡಿದ ಗಿಲ್ಲಿ ನಟ!
05:26ಮರ್ಯಾದೆ ಪ್ರಶ್ನೆ..? ಅಶ್ವಿನಿ ‘ಬಿಗ್’​ಡ್ರಾಮಾ: ಕಣ್ಣೀರಿಟ್ಟು ಮನೆಯಿಂದ ಹೊರಟುನಿಂತ ಅಶ್ವಿನಿ..!
06:04ಬಿಗ್​ಬಾಸ್ ಅಗ್ನಿ ಪರೀಕ್ಷೆ, ಬಿಗ್​ ಬಾಸ್ ಮನೆಯಲ್ಲಿ ಗಿಲ್ಲಿಯ ಪ್ರೇಮಕಾವ್ಯ..!
06:01ಗಿಲ್ಲಿ ಮೇಲೆ ಹಲ್ಲೆ ಮಾಡಿಯೂ ಬಚಾವ್ ಆದ್ರಾ ರಿಷಾ ಗೌಡ? ಕಿಚ್ಚ ಸುದೀಪ್ ಎದುರೇ ಕಿಕ್​ ಔಟ್?
05:38ಅಂದು ಒಳ್ಳೆ ಹುಡುಗ ಪ್ರಥಮ್‌ ಸೀಸನ್‌ನಲ್ಲಿ ನಡೆದ ಘಟನೆ ಈಗ Bigg Boss Kannada 12 ಶೋನಲ್ಲಿ ನಡೆದುಹೋಯ್ತು!
02:28ಆಡಿಕೊಳ್ಳೋರಿಗೆ ಒಂದೇ ಒಂದು ಫೋಟೋದಲ್ಲಿ ಬಾಯಿ ಮುಚ್ಚಿಸಿದ Bollywood Actor Salman Khan
06:42ಬಿಗ್​ ಬಾಸ್ ಮನೆಯೊಳಗೆ ನಡೀತಿದೆಯಾ ಕಳ್ಳಾಟ? ಕಲರ್ ಕಲರ್ ಗೇಮ್ ಆಡ್ತಾ ಇರೋದು ಯಾರು?
Read more