ಮತ್ತೆ ಕನ್ನಡ ಬಣ್ಣದ ಜಗತ್ತಿಗೆ 'ಕರ್ಪೂರದ ಗೊಂಬೆ' ಎಂಟ್ರಿ: 'ಚೈತ್ರದ ಪ್ರೇಮಾಂಜಲಿ' ಬ್ಯೂಟಿ ಶ್ವೇತಾ ಕಮ್‌ಬ್ಯಾಕ್!

ಮತ್ತೆ ಕನ್ನಡ ಬಣ್ಣದ ಜಗತ್ತಿಗೆ 'ಕರ್ಪೂರದ ಗೊಂಬೆ' ಎಂಟ್ರಿ: 'ಚೈತ್ರದ ಪ್ರೇಮಾಂಜಲಿ' ಬ್ಯೂಟಿ ಶ್ವೇತಾ ಕಮ್‌ಬ್ಯಾಕ್!

Published : Jan 17, 2024, 01:39 PM IST

ಚೈತ್ರದ ಪ್ರೇಮಾಂಜಲಿ ಸಿನಿಮಾ ಖ್ಯಾತಿಯ ನಟಿ ಶ್ವೇತಾ ಈಗ ಕನ್ನಡದ ಲಕ್ಷ್ಮೀ ನೀವಾಸ ಧಾರವಾಹಿ ಮೂಲಕ ಕನ್ನಡಕ್ಕೆ ಮತ್ತೆ ಕಮ್ ಬ್ಯಾಕ್ ಆಗುತ್ತಿದ್ದಾರೆ.  ಅಂದಹಾಗೆ, ಶ್ವೇತಾ ಕರಿಯರ್‌ ಆರಂಭಿಸಿದ್ದು ತಮಿಳು ಚಿತ್ರಗಳ ಮೂಲಕ. 

ಎಸ್ ನಾರಾಯಣ್ ನಿರ್ದೇಶನದ 'ಚೈತ್ರದ ಪ್ರೇಮಾಂಜಲಿ' ಸಿನಿಮಾ ಯಾರಿಗೆ ತಾನೇ ನೆನಪಿಲ್ಲ ಹೇಳಿ? ಆ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಶ್ವೇತಾ. 'ಚೈತ್ರದ ಪ್ರೇಮಾಂಜಲಿ' ಬಳಿಕ ಸ್ಯಾಂಡಲ್‌ವುಡ್‌ನಲ್ಲಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದ ಶ್ವೇತಾ, ಆನಂತರ ಕಾಣೆಯಾಗಿದ್ದರು. 2004ರಲ್ಲಿ ತೆರೆಕಂಡ 'ಕುಟುಂಬ' ಸಿನಿಮಾವೇ ಕೊನೇ. ಮತ್ತೆ ಶ್ವೇತ ಸ್ಯಾಂಡಲ್ವುಡ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿಲ್ಲ. ಈಗ ಮತ್ತೆ ಕನ್ನಡ ಬಣ್ಣದ ಜಗತ್ತಿನಲ್ಲಿ ಶ್ವೇತಾ ಮೆರುಗು ಶುರುವಾಗ್ತಿದೆ. ಶ್ವೇತಾ ಈ ಭಾರಿ ಕನ್ನಡ ಧಾರವಾಹಿ ಲೋಕಕ್ಕೆ ಕಾಲಿಟ್ಟಿದ್ದಾರೆ. 

ಚೈತ್ರದ ಪ್ರೇಮಾಂಜಲಿ ಸಿನಿಮಾ ಖ್ಯಾತಿಯ ನಟಿ ಶ್ವೇತಾ ಈಗ ಕನ್ನಡದ ಲಕ್ಷ್ಮೀ ನೀವಾಸ ಧಾರವಾಹಿ ಮೂಲಕ ಕನ್ನಡಕ್ಕೆ ಮತ್ತೆ ಕಮ್ ಬ್ಯಾಕ್ ಆಗುತ್ತಿದ್ದಾರೆ.  ಅಂದಹಾಗೆ, ಶ್ವೇತಾ ಕರಿಯರ್‌ ಆರಂಭಿಸಿದ್ದು ತಮಿಳು ಚಿತ್ರಗಳ ಮೂಲಕ. ಬಾಲ ನಟಿಯಾಗಿ, ನಂತರ ನಾಯಕಿಯಾಗಿ ತಮಿಳು ಸಿನಿಮಾ ಲೋಕದಲ್ಲಿ ಮಿಂಚಿದ ಶ್ವೇತಾ, 'ಚೈತ್ರದ ಪ್ರೇಮಾಂಜಲಿ' ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ್ರು. ಶ್ವೇತಾಗೆ ಕನ್ನಡದಲ್ಲಿ ಯಾವ ಮಟ್ಟಿಗಿನ ಬೇಡಿಕೆ ಇತ್ತಂದ್ರೆ  1996ರಲ್ಲಿ ಒಂದೇ ವರ್ಷ ಅವರ ನಾಲ್ಕು ಕನ್ನಡ ಸಿನಿಮಾಗಳು ತೆರೆ ಕಂಡಿದ್ವು. ಗೆಜ್ಜೆನಾದ, ಕರ್ಪೂರದ ಗೊಂಬೆ, ಲಕ್ಷ್ಮೀ ಮಹಾಲಕ್ಷ್ಮೀ, ಹೆತ್ತವರು, ಕೋಟಿಗೊಬ್ಬ, ಕುಟುಂಬ ಸಿನಿಮಾಗಳಲ್ಲಿ ಶ್ವೇತಾ ಕನ್ನಡಿಗರ ಮನೆ ಗೆದ್ದಿದ್ದಾರೆ. ಈಗ ಧಾರವಾಹಿ ಲೋಕಕ್ಕೂ ಎಂಟ್ರಿ ಕೊಟ್ಟು ಕಿರುತೆರೆ ಪ್ರೇಕ್ಷಕರ ಮನ ಗೆಲ್ಲೋಕೆ ಸಜ್ಜಾಗಿದ್ದಾರೆ. 

25:41ನಟಿ ಸೌಮ್ಯಾ ಶೆಟ್ಟಿ ಗಂಡ ಕರಾವಳಿ ಉದ್ಯಮಿ ಸುದೀಪ್ ಶೆಟ್ಟಿ ಮದುವೆಯಾಗಿ ಒಂದೇ ತಿಂಗಳಲ್ಲಿ ಸತ್ತಿದ್ದು ಹೇಗೆ?
07:48ನಟಿ ಸೌಮ್ಯಾ ಶೆಟ್ಟಿ ಗಂಡ ಸುದೀಪ್ ಶೆಟ್ಟಿ ಆತ್ಮ*ಹತ್ಯೆ ಪ್ರಕರಣ: ಪೊಲೀಸ್ ಠಾಣೆಗೆ ಕಂಪ್ಲೇಂಟ್ ಕೊಟ್ಟ ಮಾವ!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
05:19ದೊಡ್ಮನೆಯಲ್ಲಿ ಹೊಡಿ ಮಗ ಹೊಡಿ ಮಗ: ರಕ್ಷಿತಾ ಶೆಟ್ಟಿ ಮೇಲೆ ಕೈ ಎತ್ತಿದ ರಾಶಿಕಾ ಶೆಟ್ಟಿ
02:52ಈಗ ಮತ್ತೊಂದು ಸರ್ಪ್ರೈಸ್‌ ಕೊಟ್ಟ ಶಿವರಾಜ್‌ಕುಮಾರ್‌, ಉಪೇಂದ್ರ, ಅರ್ಜುನ್‌ ಜನ್ಯ 45 Movie!
05:25ಜನವರಿ 8ಕ್ಕೆ ಕಾದಿದೆಯಾ Toxic Movie​​ ಸೂಪರ್​ ಸರ್​​ಪ್ರೈಸ್..? ಇನ್ಮುಂದೆ ನಡೆಯೋದು ಏನಿದ್ರೂ ಯಶ್ ಆಟ..!
04:41ನಿನಗಿದು ಬೇಕಿತ್ತಾ ಗಿಲ್ಲಿ..? ಆಟದಲ್ಲಿ ಗಿಲ್ಲಿ ನಟನ ಕಳ್ಳಾಟ..! ಗಿಲ್ಲಿಗೆ ವಿಲನ್​ ಆಗುತ್ತಿದೆಯಾ ಅವರ ಕಾಮಿಡಿ?
05:53BBK12: ಬಿಗ್ ಬಾಸ್ ಕನ್ನಡ ಅಂತಿಮ ವಾರ: ಕೊನೆ ವಾರ್? ಯಾರು ವಿನ್ನರ್? ಟಾಪ್ 2 ಸ್ಪರ್ಧಿಗಳು ಇವರೇನಾ?
05:17ತೃಪ್ತಿ ದಿಮ್ರಿ ಜೊತೆಗೆ ಡಾರ್ಲಿಂಗ್ ಪ್ರಭಾಸ್‌ ರಗಡ್ ಪೋಸ್, ಕಿಕ್ಕೇರಿಸಿದ ‘ಸ್ಪಿರಿಟ್’ ಮಾದಕ ಪೋಸ್ಟರ್!
24:19ನಟಿ ನಂದಿನಿಗೆ ಕಲೆ ಜನ್ಮಗತ ರಕ್ತದಲ್ಲೇ ಬಂದಿತ್ತು; ಸರ್ಕಾರಿ ಕೆಲಸ ಇಷ್ಟವಿಲ್ಲದೆ ನಟನೆಗಾಗಿಯೇ ಜೀವಬಿಟ್ಟಳು!
Read more