
ಯಾವ ತಂದೆ ತಾನೇ ಹೆತ್ತ ಮಗಳ ಮೇಲೆ ಈ ರೀತಿ ಆರೋಪ ಮಾಡ್ಲಿಕ್ಕೆ ಸಾಧ್ಯ. ಇಲ್ಲಿ ಏನೋ ಸಮಸ್ಯೆ ಇದೆ ಅನ್ನೋದು ಎಲ್ಲರಿಗೂ ಅರ್ಥ ಆಗಿತ್ತು. ಈ ನಡುವೆ ಚೈತ್ರಾ ತನ್ನ ತಂದೆ ಒಬ್ಬ ಕುಡುಕ ಅನ್ನೋ ಅರ್ಥದಲ್ಲಿ ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಹಾಕಿದ್ರು. ಚೈತ್ರಾಳ ..
ಇತ್ತೀಚಿಗಷ್ಟೇ ಹಸೆಮಣೆ ಏರಿದ್ದ ಬಿಗ್ ಬಾಸ್ ಸ್ಪರ್ಧಿ ಚೈತ್ರಾ ಕುಂದಾಪುರ (Chiatra Kundapura) ಕುಟುಂಬದಲ್ಲಿ ಬಿರುಗಾಳಿ ಎದ್ದಿದೆ. ಖುದ್ದು ಚೈತ್ರಾಳ ತಂದೆ ತಮ್ಮ ಮಗಳು ವಂಚಕಿ, ಕಳ್ಳಿ ಅಂತ ಆರೋಪ ಮಾಡಿದ್ರೆ, ಚೈತ್ರಾ ತನ್ನ ತಂದೆ ಒಬ್ಬ ಕುಡುಕ ಅಂತಿದ್ದಾರೆ. ಅಪ್ಪ ಮಗಳ ಕದನದ ನಡುವೆ, ಅಕ್ಕ, ಅಮ್ಮ ಕೂಡ ಎಂಟ್ರಿ ಕೊಟ್ಟಿದ್ದಾರೆ. ಮನೆಯೊಂದು ಮೂರು ಬಾಗಿಲು ಅನ್ನೋ ತರಹ ಆಗಿದೆ. ಅಷ್ಟಕ್ಕೂ ಇವರ ಈ ಫ್ಯಾಮಿಲಿ ವಾರ್ ಹಿಂದೆ ಇರೋ ಅಸಲಿಯತ್ತಾದ್ರೂ ಏನು..? ಆ ಕುರಿತ ಸ್ಟೋರಿ ಇಲ್ಲಿದೆ ನೋಡಿ.
ಯೆಸ್ ಬಿಗ್ ಬಾಸ್ ಸ್ಪರ್ಧಿ ಚೈತ್ರಾ ಕುಂದಾಪುರ ಫ್ಯಾಮಿಲಿಯ ಕಿತ್ತಾಟ ಬೀದಿಗೆ ಬಂದಿದೆ. ಅಸಲಿಗೆ ಚೈತ್ರಾ ಕುಂದಾಪುರ ಇತ್ತೀಚಿಗೆ ಶ್ರೀಕಾಂತ್ ಕಶ್ಯಪ್ ಅನ್ನೋ ತನ್ನ ಬಹುಕಾಲದ ಗೆಳೆಯನ ಜೊತೆ ಸಪ್ತಪದಿ ತುಳಿದಿದ್ರು. ಅದ್ದೂರಿಯಾಗಿ ನಡೆದ ಈ ವಿವಾಹದಲ್ಲಿ ಬಿಗ್ ಬಾಸ್ ಸ್ಪರ್ಧಿಗಳೆಲ್ಲಾ ಭಾಗಿಯಾಗಿ ಚೈತ್ರಾಗೆ ಶುಭ ಹಾರೈಸಿದ್ರು.
ಆದ್ರೆ ದುರಂತ ಏನಂದ್ರೆ ಚೈತ್ರಾಳ ಮದುವೆನಲ್ಲಿ ಅವರ ತಂದೆನೇ ಬಂದಿರಲಿಲ್ಲವಂತೆ. ಹೆತ್ತ ತಂದೆಯನ್ನೇ ಕರೆಯದೇ ಚೈತ್ರಾ ಮದುವೆ ಮಾಡಿಕೊಂಡಿದ್ರು. ಇದೀಗ ಚೈತ್ರಾಳ ತಂದೆ ಮಾಧ್ಯಮಗಳ ಮುಂದೆ ಬಂದು ಚೈತ್ರಾ ಒಬ್ಬ ಕಳ್ಳಿ.. ಆಕೆ ಮದುವೆ ಮಾಡಿಕೊಂಡಿರೋ ವ್ಯಕ್ತಿ ಕೂಡ ಕಳ್ಳ. ಇಬ್ಬರೂ ಕಳ್ಳ ನನ್ ಮಕ್ಳು ಅಂತ ತಾರಾಮಾರಾ ಆರೋಪ ಮಾಡಿದ್ರು.
ಯಾವ ತಂದೆ ತಾನೇ ಹೆತ್ತ ಮಗಳ ಮೇಲೆ ಈ ರೀತಿ ಆರೋಪ ಮಾಡ್ಲಿಕ್ಕೆ ಸಾಧ್ಯ. ಇಲ್ಲಿ ಏನೋ ಸಮಸ್ಯೆ ಇದೆ ಅನ್ನೋದು ಎಲ್ಲರಿಗೂ ಅರ್ಥ ಆಗಿತ್ತು. ಈ ನಡುವೆ ಚೈತ್ರಾ ತನ್ನ ತಂದೆ ಒಬ್ಬ ಕುಡುಕ ಅನ್ನೋ ಅರ್ಥದಲ್ಲಿ ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಹಾಕಿದ್ರು. ಚೈತ್ರಾಳ ತಾಯಿ ಮಗಳ ಸಪೋರ್ಟ್ಗೆ ನಿಂತುಕೊಂಡು ನನ್ನ ಗಂಡ ಒಬ್ಬ ಭಂಡ ಅಂತ ಆರೋಪ ಮಾಡಿದ್ರು.
ಆದ್ರೆ ತನ್ನನ್ನ ಕುಡುಕ ಅಂತ ಕರೆದ ಮಗಳ ಮೇಲೆ ಬಾಲಕೃಷ್ಣ ನಾಯ್ಕರು ಮತ್ತಷ್ಟು ಗರಂ ಆಗಿದ್ದಾರೆ. ಯಾವ ಆಸ್ಪತ್ರೆಗೆ ಬೇಕಾದ್ರೂ ಕರೆದುಕೊಂಡು ಚೆಕ್ ಮಾಡ್ಸಿ ಸ್ವಾಮಿ ನಾನು ಕುಡಿಯೋದೇ ಇಲ್ಲ ಅಂದಿದ್ದಾರೆ.
ಇನ್ನೂ ಚೈತ್ರಾಳ ತಾಯಿ ಇದಕ್ಕೆಲ್ಲಾ ನನ್ನ ದೊಡ್ಡ ಮಗಳ ಕುಮ್ಮಕ್ಕು ಕಾರಣ ಅಂದಿದ್ದಾರೆ. ಅಸಲಿಗೆ ಚೈತ್ರಾ ಮತ್ತವರ ತಾಯಿ ಒಂದು ಕಡೆಯಾದ್ರೆ, ಅವರಪ್ಪ-ದೊಡ್ಡಮಗಳು ಒಂದು ಕಡೆ ಅಂತೆ. ಒಟ್ನಲ್ಲಿ ಇವರದ್ದು ಮನೆಯೊಂದು ಮೂರು ಬಾಗಿಲು.
ಅಷ್ಟಕ್ಕೂ ಚೈತ್ರಾ ಮನೆ ಹೀಗೆ ಮೂರು ಬಾಗಿಲು ಆಗೋದಕ್ಕೆ ಕಾರಣ ಕುರುಡು ಕಾಂಚಾಣ ಅಂತಾರೆ ಬಲ್ಲವರು. ಅಸಲಿಗೆ ಹಿಂದೂ ಸಂಘಟನೆಗಳಲ್ಲಿ ಌಕ್ಟಿವ್ ಆಗಿದ್ದ ಚೈತ್ರಾ ಕಳೆದ ಎಲೆಕ್ಷನ್ ಟೈಂ ನಲ್ಲಿ ಉದ್ಯಮಿ ಒಬ್ಬರಿಗೆ ಎಂಎಲ್ಎ ಟಿಕೆಟ್ ಕೊಡಿಸ್ತಿನಿ ಅಂತ್ಹೇಳಿ 5 ಕೋಟಿ ವಚಿಸಿದ್ಳು. ಇದೇ ಕೇಸ್ನಲ್ಲಿ ಚೈತ್ರಾ ಪರಪ್ಪನ ಅಗ್ರಹಾರಕ್ಕೆ ಹೋಗಿ ಬಂದಿದ್ಳು. ಈಗಲೂ ಈ ಕೇಸ್ ನಡೀತಾ ಇದೆ.
ಅಸಲಿಗೆ ಉದ್ಯಮಿಯಿಂದ ಲಪಟಾಯಿಸಿದ ಹಣದಲ್ಲಿ ಚೈತ್ರಾ ಐಷಾರಾಮಿ ಜೀವನ ಮಾಡ್ತಾ ಇದ್ದಾಳೆ. ಈ ನಡುವೆ ಬಿಗ್ ಬಾಸ್ಗೆ ಹೋಗಿ ಬಂದ ಮೇಲೆ ಮತ್ತಷ್ಟು ಸಂಪಾದನೆ ಆಗಿದೆ. ಈಕೆ ಇಲ್ಲಿ ಕೈ ತುಂಬಾ ಕಾಸು ಮಾಡಿಕೊಂಡು ಶೋಕಿ ಮಾಡ್ತಾ ಇದ್ರೆ. ಅಲ್ಲಿ ಅವರಪ್ಪ ಮತ್ತು ಅಕ್ಕ ನೂರು ರೂಪಾಯಿಗೋ ಪರದಾಡೋ ಸ್ಥಿತಿ. ಸಹಜವಾಗೇ ಈ ಹಣದ ವಿಷ್ಯಕ್ಕೆ ಇವರ ನಡುವೆ ಈ ಮನಸ್ತಾಪ ಬಂದಿದೆ. ಅಂತೆಯೇ ಚೈತ್ರಾ ತಂದೆ ನನ್ನ ಮಗಳು ಹೆತ್ತ ತಂದೆಗೆ ಒಂದೊತ್ತು ಊಟ ಹಾಕ್ತಿಲ್ಲ ಅಂತ ದೂರ್ತಾ ಇದ್ದಾರೆ. ಜೊತೆಗೆ ಆಕೆ ಉದ್ಯಮಿಯಿಂದ ಲಪಟಾಯಿಸಿದ ದುಡ್ಡಲ್ಲೇ ಶೋಕಿ ಮಾಡ್ತಾ ಇದ್ದಾಳೆ ಅಂತ ಆರೋಪ ಮಾಡಿದ್ದಾರೆ.
ಒಟ್ನಲ್ಲಿ ಚೈತ್ರಾ ಕುಂದಾಪುರ ಫ್ಯಾಮಿಲಿ ವಿಷ್ಯ ಹೀಗೆ ಹಾದಿ ರಂಪ ಬೀದಿ ರಂಪ ಆಗ್ಲಿಕ್ಕೆ ಕಾರಣ ಕುರುಡು ಕಾಂಚಾಣ ಅನ್ನೋದ್ರಲ್ಲಿ ಎರಡು ಮಾತೇ ಇಲ್ಲ. ಅಕ್ರಮವಾಗಿ ಸಂಪಾದಿಸಿದ ಹಣ ಒಂದು ಕುಟುಂಬವನ್ನೇ ಬೀದಿಗೆ ತಂದು ನಿಲ್ಲಿಸಿದೆ. ಬಿಟ್ಟಿ ಕಾಸು ಆ ಕ್ಷಣಕ್ಕೆ ಸುಖ ಕೊಡಬಹುದು. ಆದ್ರೆ ಶಾಶ್ವತಾಗಿ ನೆಮ್ಮದಿಯನ್ನ ಕಿತ್ತುಕೊಳ್ಳುತ್ತೆ ಅನ್ನೋದಕ್ಕೆ ಚೈತ್ರಾ ಕುಂದಾಪುರ ಪ್ರಕರಣವೇ ಸಾಕ್ಷಿ..!
ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..