ಗಿಲ್ಲಿ ಮೇಲೆ ಹಲ್ಲೆ ಮಾಡಿಯೂ ಬಚಾವ್ ಆದ್ರಾ ರಿಷಾ ಗೌಡ? ಕಿಚ್ಚ ಸುದೀಪ್ ಎದುರೇ ಕಿಕ್​ ಔಟ್?

ಗಿಲ್ಲಿ ಮೇಲೆ ಹಲ್ಲೆ ಮಾಡಿಯೂ ಬಚಾವ್ ಆದ್ರಾ ರಿಷಾ ಗೌಡ? ಕಿಚ್ಚ ಸುದೀಪ್ ಎದುರೇ ಕಿಕ್​ ಔಟ್?

Published : Nov 05, 2025, 04:40 PM IST

ಬಿಗ್​ಬಾಸ್ ಮನೆಯಲ್ಲಿ ಗಿಲ್ಲಿ ಮೇಲೆ ರಿಷಾ ಗೌಡ ಹಲ್ಲೆ ಮಾಡಿದ್ದನ್ನ ನೋಡಿದ ವೀಕ್ಷಕರು, ರಿಷಾಳನ್ನ ಬಿಗ್​ಬಾಸ್ ಮನೆಯಿಂದ ಆಚೆ ಹಾಕಲಾಗುತ್ತೆ ಅಂದುಕೊಂಡಿದ್ರು. ಆದ್ರೆ ಅಚ್ಚರಿ ಅಂದ್ರೆ ರಿಷಾ ಇನ್ನೂ ಬಿಗ್​ಬಾಸ್​​ನಲ್ಲೇ ಉಳಿದುಕೊಂಡಿದ್ದಾರೆ.

ಬಿಗ್​ಬಾಸ್ ಮನೆಯಲ್ಲಿ ಗಿಲ್ಲಿ ಮೇಲೆ ರಿಷಾ ಗೌಡ ಹಲ್ಲೆ ಮಾಡಿದ್ದನ್ನ ನೋಡಿದ ವೀಕ್ಷಕರು, ರಿಷಾಳನ್ನ ಬಿಗ್​ಬಾಸ್ ಮನೆಯಿಂದ ಆಚೆ ಹಾಕಲಾಗುತ್ತೆ ಅಂದುಕೊಂಡಿದ್ರು. ಆದ್ರೆ ಅಚ್ಚರಿ ಅಂದ್ರೆ ರಿಷಾ ಇನ್ನೂ ಬಿಗ್​ಬಾಸ್​​ನಲ್ಲೇ ಉಳಿದುಕೊಂಡಿದ್ದಾರೆ. ಹಾಗಾದ್ರೆ ಹಲ್ಲೆ ಮಾಡಿನೂ ರಿಷಾ ಬಚಾವ್ ಆದ್ರಾ..? ಬಾಕ್ಸಿಂಗ್ ಆಡಿಕೊಳ್ಳಿ ಬಿಗ್​ಬಾಸ್ ಸುಮ್ಮನಾಗಿಬಿಟ್ರಾ..? ಆ ಕುರಿತ ಸ್ಟೋರಿ ಇಲ್ಲಿದೆ ನೋಡಿ. ಯೆಸ್ ಸೋಮವಾರದ ಬಿಗ್​ಬಾಸ್ ಎಪಿಸೋಡ್​ನಲ್ಲಿ ರಿಷಾ ಗೌಡ ಗಿಲ್ಲಿ ಮೇಲೆ ಕೈ ಮಾಡಿದ್ದನ್ನ ತೋರಿಸಲಾಗುತ್ತೆ. ಸಿಟ್ಟಿನ ಭರದಲ್ಲಿ ರಿಷಾ ಸರಿಯಾಗಿ ಗಿಲ್ಲಿ ಮೇಲೆ ಹಲ್ಲೆ ಮಾಡಿದ್ದಾರೆ. ಆದ್ರೆ ಅಷ್ಟಾಗಿಯೂ ಅವರು ಬಿಗ್​ಬಾಸ್ ಮನೆಯಲ್ಲಿ ಮುಂದುವರೆದಿದ್ದಾರೆ.

ಅದೇನೆ ಜಗಳ ಮಾಡಿದ್ರೂ ಇನ್ನೊಬ್ಬ ಸ್ಪರ್ಧಿ ಮೇಲೆ ಕೈ ಮಾಡುವಂತಿಲ್ಲ ಅನ್ನೋದು ಬಿಗ್​ಬಾಸ್ ಮನೆಯ ಮೂಲ ನಿಯಮ. ಹಾಗೊಂದು ವೇಳೆ ಯಾರಾದ್ರೂ ಯಾವುದೇ ಸ್ಪರ್ಧಿ ಮೇಲೆ ಹಲ್ಲೆ ನಡೆಸೋಕೆ ಮುಂದಾದ್ರೆ ಅವರನ್ನ ತಕ್ಷಣ ಮನೆಯಿಂದ ಆಚೆ ಹಾಕಲಾಗುತ್ತೆ. ಆದ್ರೆ ಈ ಸಾರಿ ಮಾತ್ರ ಖುಲ್ಲಂ ಖುಲ್ಲಾ ಹಲ್ಲೆ ಮಾಡಿದ್ರೂ ಬಿಗ್​ಬಾಸ್ ಸುಮ್ಮನಾಗಿದ್ದೇಕೆ..? ಈ ಸಾರಿ ಮನೆಯೊಳಗೆ ಬಾಕ್ಸಿಂಗ್ ಆಡಿಕೊಳ್ಳಿ ಅಂತ ಬಿಗ್​ಬಾಸ್ ಸುಮ್ಮನಾಗಿ ಬಿಟ್ಟಿದ್ದಾರಾ ಅಂತ ಜನ ಪ್ರಶ್ನೆ ಮಾಡ್ತಾ ಇದ್ದಾರೆ. ಈ ಹಿಂದೆ ಬಿಗ್​​ಬಾಸ್ ಇತಿಹಾಸದಲ್ಲಿ ಮೂರು ಸಾರಿ ಇಂಥಾ ಘಟನೆ ನಡೆದಿವೆ.

ಬಿಗ್​ಬಾಸ್ ಸೀಸನ್ -3 ಸ್ಪರ್ಧಿಯಾಗಿದ್ದ ಹುಚ್ಚ ವೆಂಕಟ್, ವೀಕೆಂಡ್ ಎಪಿಸೋಡ್ ಶೂಟಿಂಗ್ ವೇಳೆ ಕಿಚ್ಚನ ಮುಂದೆಯೇ ಸಹ ಸ್ಪರ್ಧಿ ಮೂರುರು ರವಿ ಮೇಲೆ ಹಲ್ಲೆ ಮಾಡಿ ಹೊರಹಾಕಲ್ಪಟ್ಟಿದ್ರು. ಸೀಸನ್​-4ನಲ್ಲಿ ಇದೇ ಹುಚ್ಚ ವೆಂಕಟ್​ನನ್ನ ಅತಿಥಿಯಾಗಿ ಕರೆಸಲಾಗಿತ್ತು. ಆಗಲೂ ಹಳೆ ಚಾಳಿ ಮುಂದುವರೆಸಿದ್ದ ವೆಂಕಟ್, ಪ್ರಥಮ್ ಮೇಲೆ ಹಲ್ಲೆ ನಡೆಸಿದ್ರು. . ಬೌನ್ಸರ್ಸ್ ಹುಚ್ಚ ವೆಂಕಟ್​ನ ತಕ್ಷಣ ಆಚೆಗೆ ಕರೆದೊಯ್ದಿದ್ರು. ಬಿಗ್​ಬಾಸ್ ಸೀಸನ್​-5 ನಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದ ಸಂಯುಕ್ತಾ ಹೆಗಡೆ ಸಹಸ್ಪರ್ಧಿ  ಸಮೀರ್ ಆಚಾರ್ಯ ಕಪಾಳಕ್ಕೆ ಹೊಡೆದು ದೊಡ್ಮನೆಯಿಂದ ಇಜೆಕ್ಟ್ ಆಗಿದ್ಳು. ಇವರಿಗೆಲ್ಲಾ ಅಪ್ಲೈ ಆದ ನಿಯಮ ರಿಷಾ ಗೌಡಗೆ ಇಲ್ವಾ..? ಅಥವಾ ಗಿಲ್ಲಿಗೆ ಗೌರವ ಇಲ್ವಾ.. ಆತನ ಮೇಲೆ ಹಲ್ಲೆ ಮಾಡಿದ್ರೆ  ನಡೆಯುತ್ತಾ ಅಂತ ಜನ ಪ್ರಶ್ನೆ ಮಾಡ್ತಾ ಇದ್ದಾರೆ.

ಹೌದು ಬಿಗ್​ ಬಾಸ್​ ಈ ವಿಚಾರದಲ್ಲಿ ಸುಮ್ಮನಾಗಿಲ್ಲ. ರಿಷಾ ಗೌಡನ ಮನೆಯಿಂದ ಹೊರಹಾಕೋದು ಫಿಕ್ಸ್. ಆದ್ರೆ ವೀಕೆಂಡ್​ನಲ್ಲಿ ಕಿಚ್ಚ ಸುದೀಪ್ ಸಮ್ಮುಖದಲ್ಲೇ ಈ ಪ್ರಹಸನ ನಡೆಯಲಿದೆ. ಅದಕ್ಕೆ ಸಾಕ್ಷಿ ಅನ್ನುವಂತೆ ಬಿಗ್​ಬಾಸ್ ಎಪಿಸೋಡ್​ನಲ್ಲಿ ಒಂದು ಸೂಚನೆ ಹಾಕಲಾಗಿದೆ. ಈ ಎಪಿಸೋಡ್​ನಲ್ಲಿ ಕೆಲ ಸ್ಪರ್ಧಿಗಳು ಬಿಗ್ ಬಾಸ್ ನಿಯಮ ಉಲ್ಲಂಘಿಸಿದ್ದಾರೆ. ಅದಕ್ಕೆ ವಾರಾಂತ್ಯದ ಪಂಚಾಯತಿಯಲ್ಲಿ ಕಿಚ್ಚ ನ್ಯಾಯ ಒದಗಿಸ್ತಾರೆ ಅಂತ ವೀಕ್ಷಕರಿಗೆ ಸೂಚನೆ ಕೊಟ್ಟಿದ್ದಾರೆ. ಅಲ್ಲಿಗೆ ಈ ವಾರಾಂತ್ಯ ಸುದೀಪ್ ಈ ಕುರಿತು ವಾದ ವಿವಾದ ಆಲಿಸಿ ಆ ಬಳಿಕ ರಿಷಾಗೆ ತಕ್ಕ ಶಾಸ್ತಿ ಮಾಡಲಿದ್ದಾರೆ ಎನ್ನಲಾಗ್ತಾ ಇದೆ. ವಾರಾಂತ್ಯಕ್ಕೆ ರಿಷಾ ಎಲಿಮಿನೇಷನ್ ಪಕ್ಕಾ ಎನ್ನಲಾಗ್ತಾ ಇದೆ.

05:43ರಣರಂಗವಾದ ದೊಡ್ಮನೆ.. ಜಾಲಿವುಡ್‌ಗೆ ಬಂದ ಅತಿಥಿಗಳ ಜೊತೆ ಗಲಾಟೆ ಮಾಡಿದ ಗಿಲ್ಲಿ!
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
03:12BBK 12: ಅಂಥಂಥ ಮಾತಾಡಿ ಅಶ್ವಿನಿ ಗೌಡಗೆ ಕ್ಯಾಪ್ಟನ್ಸಿ ಸಿಗದಂತೆ ಮಾಡಿದ ಗಿಲ್ಲಿ ನಟ!
05:26ಮರ್ಯಾದೆ ಪ್ರಶ್ನೆ..? ಅಶ್ವಿನಿ ‘ಬಿಗ್’​ಡ್ರಾಮಾ: ಕಣ್ಣೀರಿಟ್ಟು ಮನೆಯಿಂದ ಹೊರಟುನಿಂತ ಅಶ್ವಿನಿ..!
06:04ಬಿಗ್​ಬಾಸ್ ಅಗ್ನಿ ಪರೀಕ್ಷೆ, ಬಿಗ್​ ಬಾಸ್ ಮನೆಯಲ್ಲಿ ಗಿಲ್ಲಿಯ ಪ್ರೇಮಕಾವ್ಯ..!
06:01ಗಿಲ್ಲಿ ಮೇಲೆ ಹಲ್ಲೆ ಮಾಡಿಯೂ ಬಚಾವ್ ಆದ್ರಾ ರಿಷಾ ಗೌಡ? ಕಿಚ್ಚ ಸುದೀಪ್ ಎದುರೇ ಕಿಕ್​ ಔಟ್?
05:38ಅಂದು ಒಳ್ಳೆ ಹುಡುಗ ಪ್ರಥಮ್‌ ಸೀಸನ್‌ನಲ್ಲಿ ನಡೆದ ಘಟನೆ ಈಗ Bigg Boss Kannada 12 ಶೋನಲ್ಲಿ ನಡೆದುಹೋಯ್ತು!
02:28ಆಡಿಕೊಳ್ಳೋರಿಗೆ ಒಂದೇ ಒಂದು ಫೋಟೋದಲ್ಲಿ ಬಾಯಿ ಮುಚ್ಚಿಸಿದ Bollywood Actor Salman Khan
06:42ಬಿಗ್​ ಬಾಸ್ ಮನೆಯೊಳಗೆ ನಡೀತಿದೆಯಾ ಕಳ್ಳಾಟ? ಕಲರ್ ಕಲರ್ ಗೇಮ್ ಆಡ್ತಾ ಇರೋದು ಯಾರು?
Read more