
ಬಿಗ್ಬಾಸ್ ಮನೆಯಲ್ಲಿ ಇರೋರಿಗೆ ಹೊರಜಗತ್ತಿನ ಸಂಪರ್ಕವೇ ಇರೋದಿಲ್ಲ. ತನ್ಮ ಬಗ್ಗೆ ಜನ ಏನು ಅಂದುಕೋತಿದ್ದಾರೆ ಅನ್ನೋ ಊಹೆ ಕೂಡ ಇರೋದಿಲ್ಲ ಅಂತ ಎಲ್ಲರೂ ಅಂದುಕೊಂಡಿರ್ತಾರೆ. ಈ ಬಗ್ಗೆ ಖುದ್ದು ಕಿಚ್ಚ ಹೇಳಿದ್ದೇನು..?
ಬಿಗ್ಬಾಸ್ ಮನೆಯಲ್ಲಿ ಇರೋರಿಗೆ ಹೊರಜಗತ್ತಿನ ಸಂಪರ್ಕವೇ ಇರೋದಿಲ್ಲ. ತನ್ಮ ಬಗ್ಗೆ ಜನ ಏನು ಅಂದುಕೋತಿದ್ದಾರೆ ಅನ್ನೋ ಊಹೆ ಕೂಡ ಇರೋದಿಲ್ಲ ಅಂತ ಎಲ್ಲರೂ ಅಂದುಕೊಂಡಿರ್ತಾರೆ. ಆದ್ರೆ ಈ ಸಾರಿ ಬಿಗ್ಬಾಸ್ ಕನ್ನಡ ಸೀನಸ್ನ ಕೆಲ ಸ್ಪರ್ಧಿಗಳು ಹೊರಜಗತ್ತಿನ ಕೋಡ್ ವರ್ಡ್ ಮೂಲಕ ಸಂಪರ್ಕ ಇಟ್ಟುಕೊಂಡಿದ್ದಾರಾ..? ಈ ಬಗ್ಗೆ ಖುದ್ದು ಕಿಚ್ಚ ಹೇಳಿದ್ದೇನು..? ಆ ರೋಚಕ ಸ್ಟೋರಿ ಇಲ್ಲಿದೆ ನೋಡಿ. ಕನ್ನಡದಲ್ಲಿ ಬಿಗ್ಬಾಸ್ ಶುರುವಾಗಿ 12 ಸೀಸನ್ ಆಯ್ತು. ಇಷ್ಟು ವರ್ಷಗಳಲ್ಲಿ ನಡೆಯದ ಕಳ್ಳಾಟವೊಂದು ಈ ಸಾರಿ ನಡೀತಾ ಇದೆಯಾ,.? ಹೌದು ಸ್ವಾಮಿ ಅಂತಿವೆ ಮೂಲಗಳು. ಖುದ್ದು ಕಿಚ್ಚ ಈ ಸಾರಿಯ ಬಿಗ್ ಬಾಸ್ ಸ್ಪರ್ಧಿಗಳ ಚಾಲಾಕಿತನದ ಬಗ್ಗೆ ಗೊತ್ತಾಗಿ ಶಾಕ್ ಆಗಿದ್ದಾರೆ. ವೀಕೆಂಡ್ನಲ್ಲಿ ಈ ಬಗ್ಗೆ ಸೂಚ್ಯವಾಗಿ ಕೆಲವರಿಗೆ ಎಚ್ಚರಿಕೆ ನೀಡಿದ್ದಾರೆ.
ಬಿಗ್ಬಾಸ್ ವೀಕೆಂಡ್ ಎಪಿಸೋಡ್ ಶೂಟಿಂಗ್ಗೆ ಸ್ಪರ್ಧಿಗಳು ತೊಡುವ ಬಟ್ಟೆಯನ್ನ ಅವರ ಡಿಸೈನರ್ಸ್ ಹೊರಗಿಂದ ಕಳಿಸಿಕೊಡ್ತಾರೆ. ಕೆಲ ಸ್ಪರ್ಧಿಗಳು ತಮ್ಮ ಡಿಸೈನರ್ ಕಳಿಸೋ ಬಟ್ಟೆಯ ಕಲರ್ ಆಧಾರದ ಮೇಲೆ ಹೊರಗೆ ತಮ್ಮ ಬಗ್ಗೆ ಯಾವ ರೀತಿಯ ಇಮೇಜ್ ಸಿಕ್ತಾ ಇದೆ ಅನ್ನೋದರ ಹಿಂಟ್ ಪಡೀತಾ ಇದ್ದಾರಂತೆ. ಹೌದು ತಮ್ಮ ಬಗ್ಗೆ ಹೊರಗಡೆ ನೆಗೆಟಿವ್ ಓಪಿನಿಯನ್ ಬರ್ತಾ ಇದ್ರೆ, ಕೆಂಪು ಬಟ್ಟೆ ಕಳಿಸಿಕೊಡು. ಎಲ್ಲಾ ಸರಿ ಇದೆ. ಪಾಸಿಟಿವ್ ಇದ್ರೆ ಹಸಿರು ಕಳಿಸಿಕೊಡು ಅಂತ ಸೂಚನೆ ಕೊಟ್ಟು ಕೆಲ ಸ್ಪರ್ಧಿಗಳು ಮನೆಯೊಳಗೆ ಬಂದಿದ್ದಾರಂತೆ. ತಮಗೆ ಬರೋ ಬಟ್ಟೆ ಮೂಲಕವೇ ಇವರಿಗೆ ರಹಸ್ಯ ಸಂದೇಶ ಸಿಕ್ತಾ ಇದೆಯಂತೆ. ಕಾಕತಾಳೀಯ ಅಂದ್ರೆ ಸುದೀಪ್ ಈ ಮಾತು ಹೇಳಿದಾಗ ಜಾಹ್ನವಿ ಕೆಂಪು ಬಟ್ಟೆ ತೊಟ್ಟುಕೊಂಡಿದ್ರು. ಕಳ್ಳನ ಮನಸು ಹುಳ್ಳಹುಳ್ಳಗೆ ಅನ್ನುವಂತೆ ಹುಳ್ಳನಗೆ ನಗ್ತಾ ಇದ್ರು.
ಸೋ ಕಳ್ಳಾಟ ಆಡ್ತಿರೋದು ಜಾಹ್ನವಿನೇ ಅಂತ ಜನ ಕಾಮೆಂಟ್ ಮಾಡ್ತಾ ಇದ್ದಾರೆ. ಮೊದಲು ಅಶ್ವಿನಿ ಗೌಡ ಜೊತೆ ಸೇರಿ ಆಟ ಆಡ್ತಿದ್ದ ಜಾಹ್ನವಿ ಬಗ್ಗೆ ಸಿಕ್ಕಾಪಟ್ಟೆ ಟೀಕೆ ವ್ಯಕ್ತವಾಗಿತ್ತು. ಈಗ ಅಶ್ವಿನಿ ಸಂಗ ಬಿಟ್ಟು ಜಾಹ್ನವಿ ಸಿಂಗಲ್ ಆಗಿ ಗೇಮ್ ಆಡ್ತಿದ್ದಾರೆ. ಇವರ ಆಟದ ಬದಲಾವಣೆಗೆ ಹೊರಗಿಂದ ಬಂದ ಕೋಡ್ವರ್ಡ್ ಕಾರಣ ಅನ್ನೋದು ಜನರ ಅನುಮಾನ. ಈ ಅನುಮಾನ ಮೂಡ್ತಾ ಇದ್ದ ಹಾಗೆ ಜಾಹ್ನವಿ ಸೋಷಿಯಲ್ ಮಿಡಿಯಾದಲ್ಲಿ ಕೆಂಪು ಪ್ರೀತಿಯ ಸಂಕೇತ ಹೌದು.. ಅಪಾಯದ ಸೂಚನೆ ಕೂಡ ಹೌದು.. ಉಳಿದಿದ್ದು ಅವರವರ ಕಲ್ಪನೆಗೆ ಬಿಟ್ಟಿದ್ದು ಅಂತ ಪೋಸ್ಟ್ ಹಾಕಲಾಗಿದೆ. ಅಲ್ಲಿಗೆ ಕುಂಬಳಕಾಯಿ ಕಳ್ಳ ಯಾರು ಅನ್ನೋದು ಎಲ್ಲರಿಗೂ ಗೊತ್ತಾಗಿದೆ. ಒಟ್ನಲ್ಲಿ ಇಷ್ಟು ದಿನ ನಡೀತಿದ್ದ ಬಿಗ್ ಬಾಸ್ ಆಟವೇ ಬೇರೆ. ಈಗ ನಡಿತಿರೋ ಆಟವೇ ಬೇರೆ. ಈ ಟೆಕ್ನಾಲಿಜಿ ಕಾಲದಲ್ಲಿ ಬಿಗ್ಬಾಸ್ ನೇ ಆಟ ಆಡಿಸೋ ಲೆವೆಲ್ಗೆ ಸ್ಪರ್ಧಿಗಳು ಗೇಮ್ ಪ್ಲಾನ್ ಮಾಡಿಕೊಂಡಿದ್ದಾರೆ. ಬಿಟ್ರೆ ಇವರು ಬಿಗ್ಬಾಸ್ನೂ ಯಾಮಾರಿಸ್ತಾರೆ.. ಜನರನ್ನೂ ಯಾಮಾರಿಸ್ತಾರೆ..!