ಬಿಗ್ ​ಬಾಸ್​ನಿಂದ ಬಿಗ್​ ಬಾಸೇ ಔಟ್.. ದೊಡ್ಮನೆಯಲ್ಲಿ ವಿಲನ್ ಟಾಸ್ಕ್‌ಗಳಿಂದ ಬೆಚ್ಚಿಬಿದ್ದ ಸ್ಪರ್ಧಿಗಳು!

ಬಿಗ್ ​ಬಾಸ್​ನಿಂದ ಬಿಗ್​ ಬಾಸೇ ಔಟ್.. ದೊಡ್ಮನೆಯಲ್ಲಿ ವಿಲನ್ ಟಾಸ್ಕ್‌ಗಳಿಂದ ಬೆಚ್ಚಿಬಿದ್ದ ಸ್ಪರ್ಧಿಗಳು!

Published : Dec 09, 2025, 12:11 PM ISTUpdated : Dec 09, 2025, 12:12 PM IST

ಬಿಗ್​ಬಾಸ್ ಕನ್ನಡ ಸೀಸನ್ 12 ಕ್ಲೈಮ್ಯಾಕ್ಸ್​​ಗೆ ಇನ್ನೂ ಜಸ್ಟ್ 4 ವಾರಗಳು ಮಾತ್ರ ಬಾಕಿ ಇವೆ. ಕೊನೆ ಕೊನೆಗೆ ಬರ್ತಾ ಬಿಗ್ ಬಾಸ್ ಆಟ ರೋಚಕವಾಗ್ತಾ ಇದೆ. ಅದ್ರಲ್ಲೂ ಈ ವಾರ ಬಿಗ್​​ಬಾಸ್​​ನಲ್ಲಿ ಬಿಗ್ ಬಾಸೇ ಇರೋದಿಲ್ಲ.. ಬದಲಾಗಿ ವಿಲನ್ ಇರ್ತಾರೆ.

ಬಿಗ್​ಬಾಸ್ ಕನ್ನಡ ಸೀಸನ್  12 ಕ್ಲೈಮ್ಯಾಕ್ಸ್​​ಗೆ ಇನ್ನೂ ಜಸ್ಟ್ 4 ವಾರಗಳು ಮಾತ್ರ ಬಾಕಿ ಇವೆ. ಕೊನೆ ಕೊನೆಗೆ ಬರ್ತಾ ಬಿಗ್ ಬಾಸ್ ಆಟ ರೋಚಕವಾಗ್ತಾ ಇದೆ. ಅದ್ರಲ್ಲೂ ಈ ವಾರ ಬಿಗ್​​ಬಾಸ್​​ನಲ್ಲಿ ಬಿಗ್ ಬಾಸೇ ಇರೋದಿಲ್ಲ.. ಬದಲಾಗಿ ವಿಲನ್ ಇರ್ತಾರೆ. ಆ ಮೋಜಿನ  ಮಸ್ತಿ ಆಟ ವೀಕ್ಷಕರಿಗೆ ಸಖತ್ ಫನ್ ಕೊಡೋದು ಖಾತ್ರಿ. ಯೆಸ್ ಬಿಗ್​ಬಾಸ್ ಮನೆಯಲ್ಲಿ ಎಲ್ಲವೂ ನಡೆಯೋದು ಬಿಗ್ ಬಾಸ್ ಆದೇಶದ ಮೇರೆಗೆ. ಆದ್ರೆ ಬಿಗ್​ಬಾಸೇ ಮಾಯವಾಗಿ ಮತ್ತೊಬ್ರು ಎಂಟ್ರಿ ಕೊಟ್ಟು ಬಿಗ್​ಬಾಸ್ ನಡೆಸೋದಕ್ಕೆ ಶುರುಮಾಡಿದ್ರೆ ಹೇಗಿರುತ್ತೆ, ಇಂಥದ್ದೊಂದು ವಿಭಿನ್ನ ಟಾಸ್ಕ್ ಮೂಲಕ ಶುರುವಾಗಿದೆ ಈ ವಾರದ ಬಿಗ್ ಬಾಸ್ ಆಟ.

ಬಿಗ್ ಬಾಸ್ ಬದಲು ವಿಲನ್ ಕೊಡುವ ಟಾಸ್ಕ್ ಪಾಲಿಸಬೇಕಿರೋ ದೊಡ್ಮನೆ ಮಂದಿ ಕನ್​ಫ್ಯೂಸ್ ಆಗಿದ್ದಾರೆ. ಅದ್ರಲ್ಲೂ ಬಿಗ್​ಬಾಸ್ ತರಹ ನೇರ ಟಾಸ್ಕ್ ಕೊಡದೇ ಬರೀ ನೆಗೆಟಿವ್ ಡೀಲ್ ಕೊಡ್ತಿದ್ದಾರೆ ವಿಲನ್. ಸ್ಪಂದನಾ ಕೈಯಿಂದ ಕ್ಯಾಪ್ಟನ್ಸಿ ಕಿತ್ತುಕೊಳ್ಳೋ ಟಾಸ್ಕ್ ಚೈತ್ರಾಗೆ ನೀಡಲಾಗಿದೆ. ಮನೆಮಂದಿಯೆಲ್ಲಾ ವಿಲನ್ ಸೂಚನೆಯಂತೆ ಡೆವಿಲ್ ಅವತಾರ ತಾಳಿದ್ದಾರೆ.  ಈ ವಾರ ಫುಲ್ ಬಿಗ್ ಬಾಸ್ ಆಟದಲ್ಲಿ ಸಖತ್ ಮಸ್ತಿ ಇರೋದು ಖಾತ್ರಿಯಾಗಿದೆ. ಹೌದು ಬಿಗ್​ಬಾಸ್​ ನಲ್ಲಿ 70 ದಿನಗಳು ಕಂಪ್ಲೀಟ್ ಆಗಿದ್ದು, ಇನ್ನೂ ಮುಂದೆ ನಡೆಯೋದೇ ಅಸಲಿ ಆಟ ಅಂದ್ರೆ ತಪ್ಪಾಗಲ್ಲ. ಈಗೇನಿದ್ರೂ ಸ್ಪರ್ಧಿಗಳ ನಡುವೆ ಟ್ರೋಫಿಗಾಗಿ ನೇರಾನೇರ ಹಣಾಹಣಿ ನಡೆಯಲಿದೆ.

ಅಶ್ವಿನಿ ಮೊದಲಿನ ಆಟ ಬಿಟ್ಟು ಸೈಲೆಂಟ್ ಆಗಿ ಗೇಮ್ ಆಡ್ತಿದ್ದಾರೆ. ಕಾವ್ಯಾ ತನ್ನ ಪಾಲಿಗೆ ಗಿಲ್ಲಿ ಏಣಿನೂ ಹೌದು.. ಹಾವು ಕೂಡ ಹೌದು ಅಂತ ಹೇಳಿದ್ದು , ಗಿಲ್ಲಿಯಿಂದ ಹೊರಬಂದು ತನ್ನದೇ ಆಟ ಆಡ್ಲಿಕ್ಕೆ ಸಜ್ಜಾಗಿದ್ದಾರೆ. ಇನ್ನೂ ಜನಪ್ರೀಯತೆ ವಿಚಾರದಲ್ಲಿ ಟಾಪ್​ನಲ್ಲಿರೋ ಗಿಲ್ಲಿಯನ್ನ ಹಣಿಯೋದಕ್ಕೆ ಮನೆಮಂದಿಯೆಲ್ಲಾ ಮಸಲತ್ತು ಮಾಡ್ತಾ ಇದ್ದಾರೆ. ರಕ್ಷಿತಾ ಗಿಲ್ಲಿ ನಡುವೆ ಅಗ್ರಪಟ್ಟಕ್ಕಾಗಿ ಕಾದಾಟ ಶುರುವಾಗಿದೆ. ಇದೆಲ್ಲದರ ನಡುವೆ ಕಳೆದ ಸೀಸನ್ ಸ್ಪರ್ಧಿಗಳಾದ ರಜತ್, ಚೈತ್ರಾ ಕೂಡ ದೊಡ್ಮನೆಯಲ್ಲಿದ್ದಾರೆ. ಜೊತೆಗೆ ಈ ವಾರ ವಿಲನ್ ಆಟ ಬೇರೆ ಶುರುವಾಗಿದೆ. ಇದೆಲ್ಲದರ ನಡುವೆ ಕೊನೆತನಕ ಉಳಿದು ಕಪ್ ಗೆಲ್ಲೋ ಹೀರೋ ಯಾರಾಗ್ತಾರೆ ಕಾದುನೋಡಬೇಕು.

02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
05:43ರಣರಂಗವಾದ ದೊಡ್ಮನೆ.. ಜಾಲಿವುಡ್‌ಗೆ ಬಂದ ಅತಿಥಿಗಳ ಜೊತೆ ಗಲಾಟೆ ಮಾಡಿದ ಗಿಲ್ಲಿ!
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
03:12BBK 12: ಅಂಥಂಥ ಮಾತಾಡಿ ಅಶ್ವಿನಿ ಗೌಡಗೆ ಕ್ಯಾಪ್ಟನ್ಸಿ ಸಿಗದಂತೆ ಮಾಡಿದ ಗಿಲ್ಲಿ ನಟ!
05:26ಮರ್ಯಾದೆ ಪ್ರಶ್ನೆ..? ಅಶ್ವಿನಿ ‘ಬಿಗ್’​ಡ್ರಾಮಾ: ಕಣ್ಣೀರಿಟ್ಟು ಮನೆಯಿಂದ ಹೊರಟುನಿಂತ ಅಶ್ವಿನಿ..!
06:04ಬಿಗ್​ಬಾಸ್ ಅಗ್ನಿ ಪರೀಕ್ಷೆ, ಬಿಗ್​ ಬಾಸ್ ಮನೆಯಲ್ಲಿ ಗಿಲ್ಲಿಯ ಪ್ರೇಮಕಾವ್ಯ..!
06:01ಗಿಲ್ಲಿ ಮೇಲೆ ಹಲ್ಲೆ ಮಾಡಿಯೂ ಬಚಾವ್ ಆದ್ರಾ ರಿಷಾ ಗೌಡ? ಕಿಚ್ಚ ಸುದೀಪ್ ಎದುರೇ ಕಿಕ್​ ಔಟ್?
05:38ಅಂದು ಒಳ್ಳೆ ಹುಡುಗ ಪ್ರಥಮ್‌ ಸೀಸನ್‌ನಲ್ಲಿ ನಡೆದ ಘಟನೆ ಈಗ Bigg Boss Kannada 12 ಶೋನಲ್ಲಿ ನಡೆದುಹೋಯ್ತು!
02:28ಆಡಿಕೊಳ್ಳೋರಿಗೆ ಒಂದೇ ಒಂದು ಫೋಟೋದಲ್ಲಿ ಬಾಯಿ ಮುಚ್ಚಿಸಿದ Bollywood Actor Salman Khan
Read more