BBK12: ಬಿಗ್ ಬಾಸ್ ಕನ್ನಡ  ಅಂತಿಮ ವಾರ: ಕೊನೆ ವಾರ್? ಯಾರು ವಿನ್ನರ್? ಟಾಪ್ 2 ಸ್ಪರ್ಧಿಗಳು ಇವರೇನಾ?

BBK12: ಬಿಗ್ ಬಾಸ್ ಕನ್ನಡ ಅಂತಿಮ ವಾರ: ಕೊನೆ ವಾರ್? ಯಾರು ವಿನ್ನರ್? ಟಾಪ್ 2 ಸ್ಪರ್ಧಿಗಳು ಇವರೇನಾ?

Published : Jan 03, 2026, 03:06 PM IST
ಬಿಗ್ ಬಾಸ್ ಕನ್ನಡ ಸೀಸನ್ 12 ಅಂತಿಮ ಹಂತ ತಲುಪಿದ್ದು, ಕೊನೆಯ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಧನುಷ್ ನಿಯಮ ಮುರಿದು ಗೆದ್ದಿದ್ದಾರೆ. ಈ ನಡುವೆ, ಪ್ರಶಸ್ತಿ ಗೆಲ್ಲುವ ರೇಸ್‌ನಲ್ಲಿರುವ ಗಿಲ್ಲಿ ಮತ್ತು ಅಶ್ವಿನಿ ನಡುವಿನ ಜಗಳ ಮತ್ತೊಮ್ಮೆ ತಾರಕಕ್ಕೇರಿದೆ. ಇದು ವಿನ್ನರ್ ಯಾರು ಎಂಬ ಕುತೂಹಲವನ್ನು ಹೆಚ್ಚಿಸಿದೆ.

ಬಿಗ್ ಬಾಸ್ ಕನ್ನಡ ಸೀಸನ್ 12 ಮುಕ್ತಾಯಕ್ಕೆ ಇನ್ನೊಂದು ವಾರ ಮಾತ್ರ ಬಾಕಿ ಇದೆ. ಈ ಸೀಸನ್​ನ ಕೊನೆ ಕ್ಯಾಪ್ಟನ್ ಆಗಲಿಕ್ಕೆ ದೊಡ್ಡ ಜಟಾಪಟಿ ನಡೆದಿದೆ. ಅಷ್ಟೇ ಅಲ್ಲ ಕ್ಯಾಪ್ಟನ್ಸಿ ಟಾಸ್ಕ್ ಹೊರತಾಗಿ ಗೆಲ್ಲೋ ರೇಸ್​ನಲ್ಲಿ ಟಾಪ್ ನಲ್ಲಿರೋ ಗಿಲ್ಲಿ ಮತ್ತು ಅಶ್ವಿನಿ ನಡುವೆ ಮತ್ತೆ ವಾಗ್ಯುದ್ಧ ನಡೆದಿದೆ. ಕಳೆದ ವಾರದ ಕ್ಯಾಪ್ಟನ್ ಮತ್ತು ಧನುಷ್ ನಡುವೆ ದೊಡ್ಡ ಹಣಾಹಣಿ ನಡೆದಿದೆ. ಅಂತಿಮವಾಗಿ ಧನುಷ್ ಟಾಸ್ಕ್​ನಲ್ಲಿ ಗೆದ್ದಿದ್ದಾರೆ. ಇನ್ನೂ ಧನುಷ್ ಮತ್ತು ಅಶ್ವಿನಿ ನಡುವೆ ಅಂತಿಮ ಹಂತದ ಹಣಾಹಣಿ ನಡೆದಿದ್ದು ಅದ್ರಲ್ಲೂ ಧ್ರನುಷ್ ಗೆದ್ದಿದ್ದಾರೆ. ಆದ್ರೆ ಆಡುವ ವೇಗದಲ್ಲಿ ನಿಯಮವೊಂದನ್ನ ಮುರಿದಿದ್ದು, ಧನುಷ್ ಮೋಸದಿಂದ ಕ್ಯಾಪ್ಟನ್ ಆದಂತೆ ಆಗಿದೆ.

ಈ ವಾರ ಮತ್ತೆ ಗಿಲ್ಲಿ ಮತ್ತು ಅಶ್ವಿನಿ ನಡುವೆ ಮಾತಿನ ಸಮರ ನಡೆದಿದೆ. ಇಬ್ಬರೂ ಅಂತಿಮ ಹಣಾಹಣಿ ಅನ್ನುವಂತೆ ಕಿರುಚಾಡಿ ಅರಚಾಡಿ ಕಿತ್ತಾಡಿಕೊಂಡಿದ್ದಾರೆ. ಅಸಲಿಗೆ ಈ ಸೀಸನ್ ಆರಂಭದಿಂದಲೂ ಬಿಗ್ ಬಾಸ್​​ನಲ್ಲಿ ಹೆಚ್ಚು ಸುದ್ದಿ-ಸದ್ದು ಮಾಡಿದ್ದೇ ಗಿಲ್ಲಿ Vs ಅಶ್ವಿನಿ ವಾರ್. ವಾರ ವಾರವೂ ಇವರ ಕಿತ್ತಾಟದ ಚರ್ಚೆ ಮಾಡೋದೇ ಕಿಚ್ಚನ ಪಾಲಿಗೆ ಬಿಗ್ ಟಾಸ್ಕ್ ಆಗಿತ್ತು. ಹೇಗೆ ನೋಡಿದ್ರೂ ಈ ಸೀಸನ್​ನಲ್ಲಿ ಟಾಪ್ 1 & 2 ನಲ್ಲಿ ಅಶ್ವಿನಿ ಮತ್ತು ಗಿಲ್ಲಿ ಇದ್ದಾರೆ. ಅಂತಿಮವಾಗಿ ಯಾರು ತಮ್ಮತನ ಪ್ರೂವ್ ಮಾಡ್ತಾರೋ ಅವರು ಗೆದ್ದು ಬೀಗ್ತಾರೆ ಸೋ, ಕೊನೆ ವಾರವೂ ಇಬ್ಬರ ನಡುವೆ ಅಸ್ಥಿತ್ವದ ಕದನ ನಡೆದಿದೆ. ಒಟ್ಟಾರೆ ಬಿಗ್ ಬಾಸ್ ಅಂತಿಮ ಹಂತಕ್ಕೆ ಬಂದಿದೆ. ಕೊನೆ ವಾರ.. ಕೊನೆ ವಾರ್.. ಯಾರಾಗ್ತಾರೆ ವಿನ್ನರ್ ಅನ್ನೋ ಕುತೂಹಲ ಹೆಚ್ಚಾಗಿದೆ.

05:17ತೃಪ್ತಿ ದಿಮ್ರಿ ಜೊತೆಗೆ ಡಾರ್ಲಿಂಗ್ ಪ್ರಭಾಸ್‌ ರಗಡ್ ಪೋಸ್, ಕಿಕ್ಕೇರಿಸಿದ ‘ಸ್ಪಿರಿಟ್’ ಮಾದಕ ಪೋಸ್ಟರ್!
24:19ನಟಿ ನಂದಿನಿಗೆ ಕಲೆ ಜನ್ಮಗತ ರಕ್ತದಲ್ಲೇ ಬಂದಿತ್ತು; ಸರ್ಕಾರಿ ಕೆಲಸ ಇಷ್ಟವಿಲ್ಲದೆ ನಟನೆಗಾಗಿಯೇ ಜೀವಬಿಟ್ಟಳು!
04:36ಕಾವ್ಯಾ ಶೈವ ಪರ ಗಿಲ್ಲಿ ಫೆವರಿಸಂ; ಇಷ್ಟು ದಿನ ಚೆನ್ನಾಗಿ ಆಡಿ, ಈಗ ಪಕ್ಷಪಾತ ಮಾಡಿದ್ರಾ Bigg Boss ಗಿಲ್ಲಿ ನಟ?
05:09ಗಿಲ್ಲಿಗಿಂತ ನನಗೆ ಹೆಚ್ಚು ಫ್ಯಾನ್ಸ್ ಇದ್ದಾರೆ; ಅವನು Bigg Boss ಶೋನಲ್ಲಿ ವ್ಯಕ್ತಿತ್ವವೇ ತೋರಿಸಿಲ್ಲ: ಮಾಳು ನಿಪನಾಳ
24:18ಬಿಗ್ ಬಾಸ್​ನಲ್ಲಿ ಮಂಡ್ಯದ ಗಂಡು ಗಿಲ್ಲಿಗೆ ಕಿಚ್ಚನ ಮೆಚ್ಚುಗೆ: ಬಿಗ್​ ಸ್ಕ್ರೀನ್​ನಲ್ಲಿ ಗಿಲ್ಲಿ ನಟನಿಗೆ ದಾಸನ ಅಪ್ಪುಗೆ!
07:26ರವಿಮಾಮನ ಎದುರು ಗಿಲ್ಲಿ ಲವ್ ಸ್ಟೋರಿ: ರಾಜಾಹುಲಿ ಕಥೆ ಹೇಳಿ ಯಾಮಾರಿಸಿದ್ನಾ ಗಿಲ್ಲಿ?
04:49ದೊಡ್ಮನೆಯಲ್ಲಿ ಪ್ರೇಮ, ಜಗಳ, ಡ್ರಾಮಾ: ಸೇರಿಗೆ ಸವಾ ಸೆರ್.. ಕಾವ್ಯಗೆ ಗಿಲ್ಲಿ ಕೌಂಟರ್!
06:49ಕ್ಯಾಪ್ಟನ್ಸಿ ಟಾಸ್ಕ್‌ಗಾಗಿ ರಕ್ತ ಹರಿಸಿದ ಸ್ಪರ್ಧಿಗಳು: ರಜತ್-ಚೈತ್ರಾ ನಡುವೆ ತಂದಿಕ್ಕಿ ತಮಾಷೆ ನೋಡಿದ ಗಿಲ್ಲಿ
23:12ಬೀದಿಗೆ ಬಂತು ಕನ್ನಡದ ಮತ್ತೊಬ್ಬ ಸೀರಿಯಲ್ ನಟಿಯ ಕುಟುಂಬ; ಮದುವೆಗೂ ಮುನ್ನವೇ ಬಳಸಿಕೊಂಡಿದ್ದ ಸುರೇಶ!
Read more