ಸಾಕ್ಷಿನಾಶ ಮಾಡಿದ್ರಾ ಬಿಗ್ ಬಾಸ್ ಬ್ಯಾಡ್​ ಬಾಯ್ಸ್?: ಅರೆಸ್ಟ್ ಆದ್ರೂ ತಗ್ಗದ ಧಿಮಾಕು.. ಬುಜ್ಜಿ, ಆನೆಗೆ ಖೆಡ್ಡಾ!

ಸಾಕ್ಷಿನಾಶ ಮಾಡಿದ್ರಾ ಬಿಗ್ ಬಾಸ್ ಬ್ಯಾಡ್​ ಬಾಯ್ಸ್?: ಅರೆಸ್ಟ್ ಆದ್ರೂ ತಗ್ಗದ ಧಿಮಾಕು.. ಬುಜ್ಜಿ, ಆನೆಗೆ ಖೆಡ್ಡಾ!

Published : Mar 26, 2025, 11:25 AM ISTUpdated : Mar 26, 2025, 11:46 AM IST

ಮಚ್ಚು ಹಿಡಿದು ಹುಚ್ಚು ಹುಚ್ಚಾಗಿ ರೀಲ್ಸ್ ಮಾಡಿ ಅರೆಸ್ಟ್ ಆಗಿದ್ದ ವಿನಯ್ ಗೌಡ ಮತ್ತು ರಜತ್ ಬುಜ್ಜಿ ತಾವು ಹಿಡಿದಿದ್ದು ಡಮ್ಮಿ ಮಚ್ಚು ಅಂತ ಹೇಳಿ ಹೊರಬಂದಿದ್ರು. ಆದ್ರೆ ಒನ್ಸ್ ಇವರ ಕಳ್ಳಾಟ ಪತ್ತೆ ಹಚ್ಚಿದ ಪೊಲೀಸರು ಮತ್ತೊಂದು ಕೇಸ್​ನ ಜಡಿದು ಈ ಬ್ಯಾಡ್ ಬಾಯ್ಸ್​​ನ ಜೈಲಿಗಟ್ಟಿದ್ದಾರೆ. 

ಮಚ್ಚು ಹಿಡಿದು ಹುಚ್ಚು ಹುಚ್ಚಾಗಿ ರೀಲ್ಸ್ ಮಾಡಿ ಅರೆಸ್ಟ್ ಆಗಿದ್ದ ವಿನಯ್ ಗೌಡ ಮತ್ತು ರಜತ್ ಬುಜ್ಜಿ ತಾವು ಹಿಡಿದಿದ್ದು ಡಮ್ಮಿ ಮಚ್ಚು ಅಂತ ಹೇಳಿ ಹೊರಬಂದಿದ್ರು. ಆದ್ರೆ ಒನ್ಸ್ ಇವರ ಕಳ್ಳಾಟ ಪತ್ತೆ ಹಚ್ಚಿದ ಪೊಲೀಸರು ಮತ್ತೊಂದು ಕೇಸ್​ನ ಜಡಿದು ಈ ಬ್ಯಾಡ್ ಬಾಯ್ಸ್​​ನ ಜೈಲಿಗಟ್ಟಿದ್ದಾರೆ. ಇರಲಾರದೇ ಇರುವೆ ಬಿಟ್ಟುಕೊಂಡ್ರು ಅಂತಾರಲ್ಲಾ ಹಂಗಾಗಿದೆ ಈ ಬಿಗ್ ಬಾಸ್ ಮನೆಯ ಬ್ಯಾಡ್ ಬಾಯ್ಸ್ ಕಹಾನಿ. ಬಿಗ್ ಬಾಸ್ ಮನೆಯಲ್ಲಿ ಬಿಲ್ಡ್ ಅಪ್ ಕೊಟ್ಟುಕೊಂಡು ಹವಾ ಮೆಂಟೈನ್ಸ್ ಮಾಡಿದ್ದ ರಜತ್, ವಿನಯ್ ಗೌಡ ಸೋಷಿಯಲ್ ಮಿಡಿಯಾದಲ್ಲಿ ಈ ರೀತಿ ಹವಾ ಮಾಡೋಕೆ ಹೋಗಿ ಎಡವಟ್ಟು ಮಾಡಿಕೊಂಡಿದ್ದಾರೆ. ಲಾಂಗು, ಮಚ್ಚು ಹಿಡಿದು ರೀಲ್ಸ್ ಮಾಡಿ ಸೋಷಿಯಲ್ ಮಿಡಿಯಾದಲ್ಲಿ ಅಪ್​​ಲೋಡ್ ಮಾಡಿದ್ದನ್ನ ನೋಡಿ ಇವರ ಮೇಲೆ ಶಸ್ತಾಸ್ತ್ರ ಕಾಯ್ದೆಯಡಿ ದೂರು ದಾಖಲಾಗಿತ್ತು. 

ಬಸವೇಶ್ವರ ನಗರ ಪೊಲೀಸರು ಈ ಇಬ್ಬರನ್ನೂ ಬಂಧಿಸಿದ್ರು. ಆದ್ರೆ ಈ ಬ್ಯಾಡ್ ಬಾಯ್ಸ್ ತಾವು ಬಳಸಿದ್ದು ಡಮ್ಮಿ ಮಚ್ಚು ಅಂತ ಹೇಳಿ ಬೇರೆ ಮಚ್ಚನ್ನ ಪೊಲೀಸರಿಗೆ ಒಪ್ಪಿಸಿ ರಾತ್ರಿ ರಿಲೀಸ್ ಆಗಿದ್ರು. ಆದ್ರೆ ವಿಡಿಯೋದಲ್ಲಿರೋ ಮಚ್ಚೇ ಬೇರೆ.. ಇವರು ಒಪ್ಪಿಸಿರೋ ಮಚ್ಚೇ ಬೇರೆ ಅನ್ನೋದು ಗೊತ್ತಾದ ಮೇಲೆ ಮತ್ತೆ ಠಾಣೆಗೆ ಬುಲಾವ್ ಕೊಟ್ಟಿದ್ರು. ಆದ್ರೆ ಈ ಸೋಷಿಯಲ್ ಮಿಡಿಯಾ ಶೂರರು ಎಸ್ಕೇಪ್ ಆಗಿದ್ರು. ವಕೀಲರ ಸಲಹೆ ಪಡೆದುಕೊಂಡು ಮತ್ತೆ ಠಾಣೆಗೆ ಬಂದವರನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಶಸ್ತ್ರಾಸ್ತ್ರ ಕಾಯ್ದೆ ಜೊತೆಗೆ ಸಾಕ್ಷನಾಶದ ಮತ್ತೊಂದು ಕೇಸ್ ಜಡಿದಿದ್ದಾರೆ. 

ಹೌದು ರಾತ್ರಿ ರಿಲೀಸ್ ಆಗಿ ರಿಲೀಫ್ ಆಗಿದ್ದ ರಜತ್ ಅಂಡ್ ವಿನಯ್ ಗೌಡ ಮರುದಿನ ಮದ್ಯಾಹ್ನದ ಹೊತ್ತಿಗೆ ಮತ್ತೆ ಅಂದರ್ ಆಗಿದ್ದಾರೆ. ಆಧ್ರೆ ಠಾಣೆಗೆ ಬರುವಾಗ ಶರ್ಟ್ ಬಟನ್ ಬಿಚ್ಚಿಕೊಂಡು , ಲೈಟರ್ ಹಿಡಿದುಕೊಂಡು ಸ್ಟೈಲಾಗಿ ಪೋಸ್ ಕೊಟ್ಟುಕೊಂಡು ಬಂದಿರೋ ಇವರನ್ನ ನೋಡಿದ್ರೆ ಈ ಬ್ಯಾಡ್ ಬಾಯ್ಸ್​ಗೆ ಬುದ್ದಿ ಬಂದಂತೆ ಕಾಣ್ತಾ ಇಲ್ಲ. ಇನ್ನೂ ಈ ರೀಲ್ಸ್ ಮಾಡಿದಂಥಾ ಅಕ್ಷಯ್ ಸ್ಟುಡಿಯೋಗೆ ವಿನಯ್ ಗೌಡ ಮತ್ತು ರಜತ್​ ರನ್ನ ಕರೆದುಕೊಂಡು ಹೋಗಿ ಸ್ಥಳ ಮಹಜರು ಮಾಡಲಾಗಿದೆ. ರೀಲ್ಸ್​ನಲ್ಲಿ ಬಳಸಿದ ಅಸಲಿ ಮಚ್ಚಿಗೆ ಹುಡುಕಾಟ ನಡೆದಿದೆ. ಕೋರ್ಟ್ ಮುಂದೆ ಆರೋಪಿಗಳನ್ನ ಹಾಜರುಪಡಿಸಲಾಗ್ತಾ ಇದೆ. ಒಟ್ಟಾರೆ ಈ ಬಿಗ್ ಬಾಸ್ ಮನೆಯ ಬ್ಯಾಡ್ ಬಾಯ್ಸ್​​ ಗೆ ಮುಂದೇನು ಕಂಟಕ ಎದುರಾಗುತ್ತೋ ಅನ್ನೋ ಢವಢವ ಕಾಡ್ತಾ ಇದೆ.

07:26ರವಿಮಾಮನ ಎದುರು ಗಿಲ್ಲಿ ಲವ್ ಸ್ಟೋರಿ: ರಾಜಾಹುಲಿ ಕಥೆ ಹೇಳಿ ಯಾಮಾರಿಸಿದ್ನಾ ಗಿಲ್ಲಿ?
04:49ದೊಡ್ಮನೆಯಲ್ಲಿ ಪ್ರೇಮ, ಜಗಳ, ಡ್ರಾಮಾ: ಸೇರಿಗೆ ಸವಾ ಸೆರ್.. ಕಾವ್ಯಗೆ ಗಿಲ್ಲಿ ಕೌಂಟರ್!
06:49ಕ್ಯಾಪ್ಟನ್ಸಿ ಟಾಸ್ಕ್‌ಗಾಗಿ ರಕ್ತ ಹರಿಸಿದ ಸ್ಪರ್ಧಿಗಳು: ರಜತ್-ಚೈತ್ರಾ ನಡುವೆ ತಂದಿಕ್ಕಿ ತಮಾಷೆ ನೋಡಿದ ಗಿಲ್ಲಿ
23:12ಬೀದಿಗೆ ಬಂತು ಕನ್ನಡದ ಮತ್ತೊಬ್ಬ ಸೀರಿಯಲ್ ನಟಿಯ ಕುಟುಂಬ; ಮದುವೆಗೂ ಮುನ್ನವೇ ಬಳಸಿಕೊಂಡಿದ್ದ ಸುರೇಶ!
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
03:42ಜೀ ಕನ್ನಡದಲ್ಲಿ ಆದಿ ಲಕ್ಷ್ಮೀ ಪುರಾಣ ಆರಂಭ.. ಡೆವಿಲ್​ ಜೊತೆ ಪಿವೋಟ್ ಚಿತ್ರ ರಿಲೀಸ್!
03:58ಬಿಗ್ ​ಬಾಸ್​ನಿಂದ ಬಿಗ್​ ಬಾಸೇ ಔಟ್.. ದೊಡ್ಮನೆಯಲ್ಲಿ ವಿಲನ್ ಟಾಸ್ಕ್‌ಗಳಿಂದ ಬೆಚ್ಚಿಬಿದ್ದ ಸ್ಪರ್ಧಿಗಳು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
05:43ರಣರಂಗವಾದ ದೊಡ್ಮನೆ.. ಜಾಲಿವುಡ್‌ಗೆ ಬಂದ ಅತಿಥಿಗಳ ಜೊತೆ ಗಲಾಟೆ ಮಾಡಿದ ಗಿಲ್ಲಿ!
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
Read more