ದೊಡ್ಮನೆಯಲ್ಲಿ ದೊಡ್ಡ ರಣರಂಗ, ಯಜಮಾನಿಕೆಗೆ ಭಾರೀ ಬಡಿದಾಟ, ಮೈಯೆಲ್ಲಾ ಗಾಯ!

ದೊಡ್ಮನೆಯಲ್ಲಿ ದೊಡ್ಡ ರಣರಂಗ, ಯಜಮಾನಿಕೆಗೆ ಭಾರೀ ಬಡಿದಾಟ, ಮೈಯೆಲ್ಲಾ ಗಾಯ!

Published : Oct 23, 2024, 11:54 AM IST

ದೈಹಿಕ ಹಲ್ಲೆಯಿಂದ ದೊಡ್ಡ ಜಗಳ ನಡೆದಿದ್ದು ದೊಡ್ಮನೆ ರಣರಂಗವೇ ಆಗಿ ಹೋಗಿದೆ. ಇದನ್ನೆಲ್ಲಾ ನೋಡಿ ಥಂಡಾ ಹೊಡೆದಿರೋ ಹನುಮಂತ, ನಾನೆಲ್ಲಿಗಪ್ಪಾ ಬಂದುಬಿಟ್ಡೆ ಅಂತ ತಬ್ಬಿಬ್ಬಾಗಿದ್ದಾನೆ. ಅಷ್ಟೇ ಅಲ್ಲ, 'ಒಳಿತು ಮನುಷ.. ನೀನು ಇರೋದು ಮೂರು ದಿವಸ..' 

ಲಾಯರ್ ಜಗದೀಶ್ ಎಕ್ಸಿಟ್ ಆದ ಮೇಲೆ ಎಲ್ಲರೂ ಅಂದುಕೊಂಡಂತೆ ಬಿಗ್ ಬಾಸ್ ಶೋದ  ಗಮ್ಮತ್ತೇನೂ ಕಮ್ಮಿ ಆಗಿಲ್ಲ. ಒಂದು ಕಡೆ ಕುರಿಗಾಹಿ ಸಿಂಗರ್ ಹನುಮಂತ ದೊಡ್ಮನೆಗೆ ಎಂಟ್ರಿಯಾಗಿದ್ದಾನೆ. ಮತ್ತೊಂದು ಕಡೆಗೆ ಕ್ಯಾಪ್ಟನ್ಸಿ ಟಾಕ್ಸ್​ಗಾಗಿ ದೊಡ್ಮನೆಯಲ್ಲಿ ದೊಡ್ಡ ಯುದ್ಧವೇ ನಡೆದುಹೋಗಿದೆ. ದೊಡ್ಮನೆ ಸದಸ್ಯರ ಹೊಡಿ ಬಡಿ ಕಡಿ ಆಟ ನೋಡಿ ಹನುಮಂತ ಹೌಹಾರಿ ಹೋಗಿದ್ದಾನೆ... ಏನ್ ಮಾಡಿದಾರೆ ನೋಡಿ.. 

ಯೆಸ್, ಲಾಯರ್ ಜಗದೀಶ್ ಹೋದ್ರೇನಂತೆ ಬಿಗ್ ಬಾಸ್ ಮನೆ ಏನೂ ಸೈಲೆಂಟ್ ಆಗಿಲ್ಲ. ನಿಜ ಹೇಳಬೇಕಂದ್ರೆ ಮೊದಲಿಗಿಂತ ಹೆಚ್ಚೇ ವೈಲೆಂಟ್ ಅಗಿದೆ. ದೊಡ್ಮನೆಗೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿರೋ ಹನುಮಂತನನ್ನ ಒಳಗೆ ಬರುತ್ತಲೇ ಕ್ಯಾಪ್ಟನ್ ಮಾಡಲಾಗಿತ್ತು. ಕ್ಯಾಪ್ಟನ್ ಆಗಿ ಎಲ್ಲರನ್ನೂ ಹ್ಯಾಂಡಲ್ ಮಾಡೋಕೆ ಗೋಳಾಡಿರೋ ಹನುಮಂತ ನನ್ನನ್ನ ಬಿಟ್ಟು ಬಿಡ್ರಪ್ಪಾ ಅಂತ ಗೋಳಾಡಿದ್ದಾನೆ.

ಯೆಸ್ ಈ ಸಾರಿ ಜೋಡಿ ಕ್ಯಾಪ್ಟನ್ಸಿಯ ಅವಕಾಶವನ್ನ ಬಿಗ್ ಬಾಸ್ ಕೊಡ್ತಾ ಇದ್ದು, ಅದಕ್ಕಾಗಿ ಹದಿನೇಳು ನಿಮಿಷ ಗಡಿಯಾರ ತಿರುಗಿಸೋ ಫಿಸಿಕಲ್ ಟಾಸ್ಕ್ ನೀಡಲಾಗಿದೆ. ಇಬ್ಬರು ಸ್ಫರ್ಧಿಗಳು ಗಡಿಯಾರ ತಿರುಗಿಸೋವಾಗ ಉಳಿದವರು ಅವರಿಗೆ ತೊಂದರೆ ಕೊಟ್ಟು ಕೆಳಗೆ ಬೀಳಿಸಬಹುದು. ಇದನ್ನ ಸಿಕ್ಕಾಪಟ್ಟೆ ಸೀರಿಯಸ್ ಆಗಿ ತೆಗೆದುಕೊಂಡಿರೋ ದೊಡ್ಮನೆ ಮಂದಿ, ಮೈಯೆಲ್ಲಾ ಗಾಯ ಆಗೋ ರೇಂಜ್​ಗೆ ಹೊಡೆದಾಡಿಕೊಂಡಿದ್ದಾರೆ.

ಈ ದೈಹಿಕ ಹಲ್ಲೆಯಿಂದ ದೊಡ್ಡ ಜಗಳ ನಡೆದಿದ್ದು ದೊಡ್ಮನೆ ರಣರಂಗವೇ ಆಗಿ ಹೋಗಿದೆ. ಇದನ್ನೆಲ್ಲಾ ನೋಡಿ ಥಂಡಾ ಹೊಡೆದಿರೋ ಹನುಮಂತ, ನಾನೆಲ್ಲಿಗಪ್ಪಾ ಬಂದುಬಿಟ್ಡೆ ಅಂತ ತಬ್ಬಿಬ್ಬಾಗಿದ್ದಾನೆ. ಅಷ್ಟೇ ಅಲ್ಲ, 'ಒಳಿತು ಮನುಷ.. ನೀನು ಇರೋದು ಮೂರು ದಿವಸ..' ಹಾಡು ಹೇಳಿ, ಮನೆಮಂದಿಗೆ ಸಂದೇಶ ಸಾರಿದ್ದಾನೆ. ಆದ್ರೆ ಈ ಶಾಂತಿಗೀತೆಯೆಲ್ಲಾ ಬಿಗ್ ಬಾಸ್​​ ಮನೆಗೆ ಸೂಟ್ ಆಗಲ್ಲ, ಇಲ್ಲೇನಿದ್ರೂ ಕ್ರಾಂತಿಗೀತೆಯೇ ಸರಿ ಅಂತಿದ್ದಾರೆ ಮನೆಮಂದಿ..!

03:42ಜೀ ಕನ್ನಡದಲ್ಲಿ ಆದಿ ಲಕ್ಷ್ಮೀ ಪುರಾಣ ಆರಂಭ.. ಡೆವಿಲ್​ ಜೊತೆ ಪಿವೋಟ್ ಚಿತ್ರ ರಿಲೀಸ್!
03:58ಬಿಗ್ ​ಬಾಸ್​ನಿಂದ ಬಿಗ್​ ಬಾಸೇ ಔಟ್.. ದೊಡ್ಮನೆಯಲ್ಲಿ ವಿಲನ್ ಟಾಸ್ಕ್‌ಗಳಿಂದ ಬೆಚ್ಚಿಬಿದ್ದ ಸ್ಪರ್ಧಿಗಳು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
05:43ರಣರಂಗವಾದ ದೊಡ್ಮನೆ.. ಜಾಲಿವುಡ್‌ಗೆ ಬಂದ ಅತಿಥಿಗಳ ಜೊತೆ ಗಲಾಟೆ ಮಾಡಿದ ಗಿಲ್ಲಿ!
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
03:12BBK 12: ಅಂಥಂಥ ಮಾತಾಡಿ ಅಶ್ವಿನಿ ಗೌಡಗೆ ಕ್ಯಾಪ್ಟನ್ಸಿ ಸಿಗದಂತೆ ಮಾಡಿದ ಗಿಲ್ಲಿ ನಟ!
05:26ಮರ್ಯಾದೆ ಪ್ರಶ್ನೆ..? ಅಶ್ವಿನಿ ‘ಬಿಗ್’​ಡ್ರಾಮಾ: ಕಣ್ಣೀರಿಟ್ಟು ಮನೆಯಿಂದ ಹೊರಟುನಿಂತ ಅಶ್ವಿನಿ..!
06:04ಬಿಗ್​ಬಾಸ್ ಅಗ್ನಿ ಪರೀಕ್ಷೆ, ಬಿಗ್​ ಬಾಸ್ ಮನೆಯಲ್ಲಿ ಗಿಲ್ಲಿಯ ಪ್ರೇಮಕಾವ್ಯ..!
06:01ಗಿಲ್ಲಿ ಮೇಲೆ ಹಲ್ಲೆ ಮಾಡಿಯೂ ಬಚಾವ್ ಆದ್ರಾ ರಿಷಾ ಗೌಡ? ಕಿಚ್ಚ ಸುದೀಪ್ ಎದುರೇ ಕಿಕ್​ ಔಟ್?
05:38ಅಂದು ಒಳ್ಳೆ ಹುಡುಗ ಪ್ರಥಮ್‌ ಸೀಸನ್‌ನಲ್ಲಿ ನಡೆದ ಘಟನೆ ಈಗ Bigg Boss Kannada 12 ಶೋನಲ್ಲಿ ನಡೆದುಹೋಯ್ತು!
Read more