ರಾಮನಗರದ ಸರ್ಕಾರಿ ಶಾಲೆಯಲ್ಲಿ 'ಭಾಗ್ಯಲಕ್ಷ್ಮಿ' ಅತ್ತೆ-ಸೊಸೆ

Jul 9, 2023, 4:47 PM IST

ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ 'ಭಾಗ್ಯಲಕ್ಷ್ಮಿ' ಕೂಡ ಒಂದು. ಭಾಗ್ಯ ಲಕ್ಷ್ಮಿಯ ಅತ್ತಿ ಸೊಸೆ ರಾಮನಗರದ ಸರ್ಕಾರಿ ಶಾಲೆಗೆ ಎಂಟ್ರಿ ಕೊಟ್ಟಿದ್ದರು. ಅಡುಗೆ ಮನೆಯಿಂದ ಕ್ಲಾಸ್ ರೂಮ್‌ಗೆ ಬಂದ ಭಾಗ್ಯಲಕ್ಷ್ಮಿ ಕಾರ್ಯಕ್ರಮಕ್ಕಾಗಿ ನಟಿ ಸುಷ್ಮಾ ಮತ್ತು ಪದ್ಮಜಾ ರಾವ್ ಇಬ್ಬರೂ ಶಾಲೆಗೆ ಎಂಟ್ರಿ ಕೊಟ್ಟಿದ್ದರು. ಶಾಲೆಗೆ ಆಗಮಿಸಿದ ಅಭಿಮಾನಿಗಳು ಹಾಗೂ ಮಕ್ಕಳ ಜೊತೆ ನಟಿ ಸುಷ್ಮಾ ಮತ್ತು ಪದ್ಮಜಾ ರಾವ್ ಸಂವಾದ ನಡೆಸಿದರು. ಬಳಿಕ ಅಭಿಮಾನಿಗಳು ಹಾಗೂ ಮಕ್ಕಳ ಜೊತೆ ಆಟವಾಡಿ ಸಂಭ್ರಮಿಸಿದರು.