ಕನ್ನಡದ ನಟ, ಬಿಗ್ ಬಾಸ್ ಮಾಜಿ ಸ್ಪರ್ಧಿ ಚಂದನ್ ಕುಮಾರ್ ಮೇಲೆ ಹಲ್ಲೆ ನಡೆದಿದೆ. ತೆಲುಗು ಧಾರಾವಾಹಿ ಸೆಟ್ ನಲ್ಲಿ ಈ ಘಟನೆ ಸಂಭವಿಸಿದೆ. ಕನ್ನಡದ ನಟ ಚಂದನ್ ತೆಲುಗಿನಲ್ಲಿ ಸಾವಿತ್ರಮ್ಮ ಗಾರಿ ಅಬ್ಬಾಯಿ ಎನ್ನುವ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಇದೇ ಧಾರಾವಾಹಿ ಸೆಟ್ ನಲ್ಲಿ ಚಂದನ್‌ಗೆ ಕಪಾಳಮೋಕ್ಷ ಮಾಡಲಾಗಿದೆ.
ಕನ್ನಡದ ನಟ, ಬಿಗ್ ಬಾಸ್ ಮಾಜಿ ಸ್ಪರ್ಧಿ ಚಂದನ್ ಕುಮಾರ್ ಮೇಲೆ ಹಲ್ಲೆ ನಡೆದಿದೆ. ತೆಲುಗು ಧಾರಾವಾಹಿ ಸೆಟ್ ನಲ್ಲಿ ಈ ಘಟನೆ ಸಂಭವಿಸಿದೆ. ಕನ್ನಡದ ನಟ ಚಂದನ್ ತೆಲುಗಿನಲ್ಲಿ ಸಾವಿತ್ರಮ್ಮ ಗಾರಿ ಅಬ್ಬಾಯಿ ಎನ್ನುವ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಇದೇ ಧಾರಾವಾಹಿ ಸೆಟ್ ನಲ್ಲಿ ಚಂದನ್‌ಗೆ ಕಪಾಳಮೋಕ್ಷ ಮಾಡಲಾಗಿದೆ. ನಟ ಚಂದನ್ ಧಾರಾವಾಹಿ ತಂತ್ರಜ್ಞನರಿಗೆ ಅವಾಚ್ಯ ಪದಗಳಿಂದ ನಿಂದಿಸಿದ ಕಾರಣ ಸಿಟ್ಟಿಗೆದ್ದ ತಂತ್ರಜ್ಞರು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಮಾತಿನ ಜಟಾಪಟಿ ವೇಳೆ ಟೆಕ್ನಿಷಿಯನ್ ಚಂದನ್ ಕಪಾಳಕ್ಕೆ ಹೊಡೆದಿದ್ದಾರೆ. ಅಂದಹಾಗೆ ಈ ಘಟನೆ ನಡೆದಿದ್ದು ಒಂದು ತಿಂಗಳ ಹಿಂದೆ. ಆದರೀಗ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಾವಿತ್ರಮ್ಮ ಗಾರಿ ಅಬ್ಬಾಯಿ ತೆಲುಗು ಧಾರಾವಾಹಿಯಲ್ಲಿ ಚಂದನ್ ನಾಯಕನಾಗಿ ಅಭಿನಯ ಮಾಡಿದ್ರು.