ಪತ್ರಕರ್ತರ ಮೇಲೆ ದೌರ್ಜನ್ಯ ತಡೆಯಲು ಟ್ರೈನಿಂಗ್: ಸರ್ಕಾರಿ ಅಭಿಯೋಜಕರು, ಜರ್ನಲಿಸ್ಟ್‌ಗೆ ತರಬೇತಿ

Nov 5, 2023, 11:38 AM IST


ಪತ್ರಕರ್ತರು ಮತ್ತು ಮಿಡಿಯಾ ಸಂಸ್ಥೆಗಳ ಮೇಲೆ ದೌರ್ಜನ್ಯ ಹೆಚ್ಚಾಗ್ತಿದೆ. ಈ ದೌರ್ಜನ್ಯ ತಡೆಯುವ ನಿಟ್ಟಿನಲ್ಲಿ ಸರ್ಕಾರಿ ಅಭಿಯೋಜಕರಿಗೆ ಮತ್ತು ಆಯ್ದ ಪತ್ರಕರ್ತರಿಗೆ (Journalists) ತರಬೇತಿ ಕಾರ್ಯಗಾರ(Training workshop) ನಡೆಸಲಾಯಿತು. ಯುನೆಸ್ಕೋ(UNESCO) & ರಾಜ್ಯ ಸರ್ಕಾರ(State government) ಈ ತರಬೇತಿ ಕಾರ್ಯಗಾರ ಆಯೋಜಿಸಿತ್ತು. ಪತ್ರಕರ್ತರ ರಕ್ಷಣೆ & ಮೀಡಿಯಾ ಹೌಸ್ ಗಳ ಮೇಲೆ ಹಾಕುವ ಪ್ರಕರಣಗಳಿಂದ ರಕ್ಷಣೆ ಮಾಡೋದು ಹೇಗೆ..? ದೌರ್ಜನ್ಯ ತಡೆಗಟ್ಟುವ ಬಗ್ಗೆ ತರಬೇತಿ ನೀಡಲಾಯ್ತು. ಇದರಲ್ಲಿ ಯುನೆಸ್ಕೋ ಸಂಸ್ಥೆಯ ಮೆಹದಿ ಬಂಚಲ, ಸಿಮನ್ ಕ್ಲೈಮೆಟ್ & ಸಿಐಡಿ ಕಾನೂನು ಸಲಹೆಗಾರ ಮಹೇಶ್ ವೈದ್ಯ ಸೇರಿದಂತೆ ಹಲವು ಕಾನೂನು ತಜ್ಞರು ತರಬೇತಿ ಕೊಟ್ರು. ಪತ್ರಕರ್ತರಿಗೆ ಇರುವ ಕಾನೂನು, ವರದಿಗಾರಿಕೆ, ಸ್ಟೀಂಗ್ ಅಪರೇಷನ್ ವೇಳೆ ಅನುಸರಿಸಬೇಕಾದ ನಿಯಮಗಳ ಬಗ್ಗೆ ಅರಿವು ಮೂಡಿಸಿದ್ರು. ಯುನೆಸ್ಕೋ ರಕ್ಷಣೆ ಬಗ್ಗೆ ಕಾಳಜಿಯಿಂದ ವಿವಿಧ ದೇಶಗಳಲ್ಲಿ ಟ್ರೈನಿಂಗ್ ನೀಡುತ್ತಿದ್ದು ಭಾರತದಲ್ಲಿ ನಡೆದ ಮೊದಲ ತರಬೇತಿ ಕಾರ್ಯಗಾರ ಇದಾಗಿತ್ತು. ರಾಜ್ಯದ ವಿವಿಧ ಜಿಲ್ಲೆ 20ಕ್ಕೂ ಹೆಚ್ಚು ಸರ್ಕಾರಿ ಅಭಿಯೋಜಕರು, ಪತ್ರಕರ್ತರು ಕಾರ್ಯಗಾರದಲ್ಲಿ ಭಾಗವಹಿಸಿದ್ರು. ಈ ಮೂಲಕ ಪತ್ರಕರ್ತರ ರಕ್ಷಣೆಗೆ ಯುನೆಸ್ಕೋ ತೆಗೆದುಕೊಂಡಿರುವ ನಿರ್ಧಾರ ಸ್ವಾಗತಾರ್ಹ. ಜೊತೆಗೆ ಪತ್ರಕರ್ತರ ರಕ್ಷಣೆ ಕಾನೂನು ಜಾರಿಗೆ ತರಲು ಆಯೋಜಕರು ಸರ್ಕಾರಕ್ಕೆ ಶಿಫಾರಸ್ಸು ಕೂಡ ಮಾಡಲಿದ್ದಾರೆ.

ಇದನ್ನೂ ವೀಕ್ಷಿಸಿ: Weekly Horoscope: ಈ ರಾಶಿಯವರಿಗೆ ಆರೋಗ್ಯದಲ್ಲಿ ವ್ಯತ್ಯಾಸವಾಗಲಿದ್ದು, ಉದ್ಯೋಗದಲ್ಲಿ ಸ್ವಲ್ಪ ಅತಂತ್ರತೆ ಉಂಟಾಗಲಿದೆ..