Sep 28, 2023, 12:05 PM IST
ತಮಿಳುನಾಡಿಗೆ 3 ಸಾವಿರ ಕ್ಯೂಸೆಕ್ ನೀರು ಬಿಡುವಂತೆ CWRC ಆದೇಶ ನೀಡಿದೆ. ಆದ್ರೆ ಇದಕ್ಕೆ ತಮಿಳುನಾಡು ಸರ್ಕಾರದ ಅಪಸ್ವರ ಎತ್ತಿದೆ. 3 ಸಾವಿರ ಕ್ಯೂಸೆಕ್ ನೀರು ಸಾಕಾಗಲ್ಲ ಎಂದು ತಮಿಳುನಾಡು ಹೇಳಿದೆ. ಅಲ್ಲದೇ CWRC ಶಿಫಾರಸು ಪ್ರಶ್ನಿಸಿ ಪ್ರಾಧಿಕಾರಕ್ಕೆ ತಮಿಳುನಾಡು (Tamilnadu) ಅರ್ಜಿಯನ್ನು ಸಲ್ಲಿಸಿದೆ. ನಮ್ಮ ರೈತರ ಬೆಳೆ ಕೈ ಸೇರುವ ಹೊತ್ತಲ್ಲಿ ನೀರು ಕಡಿತ ಸರಿಯಲ್ಲ ಎಂದು ಹೇಳುವ ಮೂಲಕ ಹೆಚ್ಚಿನ ನೀರು ಹರಿಸುವಂತೆ ಪ್ರಾಧಿಕಾರಕ್ಕೆ ತಮಿಳುನಾಡು ಮನವಿ ಮಾಡಿದೆ. ಇತ್ತ ಕರ್ನಾಟಕದಿಂದಲೂ CWMA ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿದೆ. ಅಲ್ಲದೇ ನೀರು ಬಿಡಲು ಆಗಲ್ಲ ಎಂದು ಪ್ರಾಧಿಕಾರಕ್ಕೆ ಕರ್ನಾಟಕ(Karnataka) ಅರ್ಜಿ ಹಾಕಿದೆ. ತಮಿಳುನಾಡಿಗೆ ವಾಯುವ್ಯ ಮಾರುತಗಳು ಬರಲಿವೆ. ನಮಗೆ ಕುಡಿಯುವ ನೀರಿಗೆ ಸಮಸ್ಯೆ ಇದೆ. ತಮಿಳುನಾಡಿಗೆ ಒಂದು ಹನಿ ನೀರು ಬಿಡಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೇಳುತ್ತಿದೆ. ನಾಳೆ ಕಾವೇರಿ ಪ್ರಾಧಿಕಾರದ ಸಭೆ ನಡೆಯಲಿದೆ.
ಇದನ್ನೂ ವೀಕ್ಷಿಸಿ: ಆಟ ಆಡೋ ವಯಸ್ಸಲ್ಲಿ ದಾಖಲೆ ಬರೆದ ಬಾಲಕ: ಸ್ಕೇಟಿಂಗ್ ಆಡುತ್ತಾ ನಿಮಿಷದಲ್ಲೇ ಸಾಲ್ವ್ ಆಗುತ್ತೆ ರೂಬಿಕ್ಸ್ ಕ್ಯೂಬ್ !