ಡಿಕೆಶಿ ಅವರನ್ನು ಅಧೀರರನ್ನಾಗಿಸುವ ಹಿಂದೆ ಮೀರ್‌ಸಾದಿಕ್‌ ತಂತ್ರವಿದೆಯೇ? ಬಿಜೆಪಿ ಲೇವಡಿ

May 12, 2022, 3:58 PM IST

ಬೆಂಗಳೂರು (ಮೇ. 12): ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ( D Shivakumar) ಅವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಮಾಜಿ ಸಂಸದೆ ರಮ್ಯಾ (Ramya) ಮಾಡಿರುವ ಟ್ವೀಟ್‌ (Tweet War) ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ. ತನ್ಮೂಲಕ ರಾಜ್ಯ ಕಾಂಗ್ರೆಸ್‌ನಲ್ಲಿನ ಮಾಜಿ ಸಂಸದೆ ರಮ್ಯಾ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಕಚೇರಿ ಸಿಬ್ಬಂದಿ ನಡುವಿನ ಮುಸುಕಿನ ಗುದ್ದಾಟದ ರಾದ್ಧಾಂತ ಬಹಿರಂಗಗೊಂಡಿದೆ. ಈ ವಾರ್‌ಗೆ ಬಿಜೆಪಿ ಎಂಟ್ರಿ ಕೊಟ್ಟು, ಡಿಕೆಶಿ ಕಾಲೆಳೆದಿದೆ. 

PSI ಅಕ್ರಮದ ಮತ್ತೊಂದು ಬೇಟೆ, ರುದ್ರಗೌಡ ಪಾಟೀಲನ ರಂಗು ರಂಗಿನ ಅಕ್ರಮದ ಕಹಾನಿ

'ಚುನಾವಣೆಯ ಹೊಸ್ತಿಲಲ್ಲಿ ಡಿಕೆ ಶಿವಕುಮಾರ್ ಜೊತೆ ಎಷ್ಟು ಮಂದಿ ನಿಲ್ಲಬಹುದು ಎಂದು ಕಾಂಗ್ರೆಸಿಗರು ಈಗಲೇ ನಿರ್ಧರಿಸಿರಬಹುದು. ಮೀರ್‌ಸಾದಿಕ್‌ ಬಣದ ಜೊತೆಗೆ ಅಸಹಾಯಕ ಡಿಕೆಶಿ ಅವರ ವಿರೋಧಿಗಳ ಸಾಲಿಗೆ ಈಗ ಮಾಜಿ ಸಂಸದೆ ರಮ್ಯಾ ಕೂಡಾ ಸೇರಿದ್ದಾರೆ. ಡಿಕೆಶಿ ಅವರೇ, ಸಹೋದರ ಡಿ.ಕೆ.ಸುರೇಶ್ ಅವರಾದರೂ ನಿಮ್ಮ ಜೊತೆ ನಿಲ್ಲಬಹುದೇ? ಭ್ರಷ್ಟಾಧ್ಯಕ್ಷ ಡಿಕೆಶಿ ಅವರೇ, ನೀವು ನಿಜಕ್ಕೂ ಕೆಪಿಸಿಸಿ ಅಧ್ಯಕ್ಷರೇ? ಸಾರ್ವಜನಿಕ ಬದುಕಿನಿಂದ ಕಳೆದು ಹೋದವರೆಲ್ಲಈಗ ಬಂದು‌ ಕೆಪಿಸಿಸಿ ಅಧ್ಯಕ್ಷರಿಗೆ ಪಾಠ ಹೇಳುತ್ತಿರುವುದನ್ನು ನೋಡಿದರೆ, ಕನಕಪುರದ ಬಂಡೆ ಎಷ್ಟು ಗಟ್ಟಿ ಎಂದು ಯೋಚಿಸಬೇಕಲ್ಲವೇ? ಡಿಕೆಶಿ ಅವರನ್ನು ಅಧೀರರನ್ನಾಗಿಸುವ ಹಿಂದೆ #ಮೀರ್‌ಸಾದಿಕ್‌ ತಂತ್ರವಿದೆಯೇ?' ಎಂದು ಬಿಜೆಪಿ ಕೆಣಕಿದೆ.