vuukle one pixel image

ಬ್ರಿಟನ್‌ನಿಂದ ರಿಟರ್ನ್‌ ಆದವ್ರಲ್ಲಿ 693 ಮಂದಿ ನಾಪತ್ತೆ; ಪೊಲೀಸರಿಂದ ಮುಂದುವರೆದ ತಲಾಶ್

Dec 27, 2020, 12:04 PM IST

ಬೆಂಗೂರು (ಡಿ. 27): ಬ್ರಿಟನ್ ವೈರಸ್ ಆತಂಕ ಹೆಚ್ಚಾಗುತ್ತಿದ್ದಂತೆ, ರಾಜ್ಯಕ್ಕೆ ಬ್ರಿಟನ್‌ನಿಂದ ಆಗಮಿಸಿದವರ ವಿಚಾರಣೆ ಕೂಡಾ ಜೋರಾಗಿದೆ. 693 ಮಂದಿ ನಾಪತ್ತೆಯಾಗಿದ್ದು ಪೊಲೀಸರು ತಲಾಶ್ ನಡೆಸುತ್ತಿದ್ದಾರೆ. ಇವರಲ್ಲಿ 220 ಮಂದಿ ಬೆಂಗಳೂರಿನವರು. ಕೆಲವರ ಮೊಬೈಲ್ ಸ್ವಿಚ್ ಆಫ್ ಆಗಿದ್ದರೆ, ಇನ್ನು ಕೆಲವರು ಮನೆಗೆ ಬೀಗ ಹಾಕಿ ಬೇರೆ ಊರುಗಳಿಗೆ, ರಾಜ್ಯಗಳಿಗೆ ತೆರಳಿದ್ದಾರೆ. ಇವರನ್ನು ಪತ್ತೆ ಹಚ್ಚಲು ಆರೋಗ್ಯ ಇಲಾಖೆ ಪೊಲೀಸರ ನೆರವು ಕೇಳಿದೆ. 

14 ಜನರಿಗೆ ಕೋವಿಡ್ ಪಾಸಿಟಿವ್, 4 ಜನಕ್ಕೆ ಬ್ರಿಟನ್ ವೈರಸ್ ಶಂಕೆ; ರಾಜ್ಯಕ್ಕೆ ಆತಂಕ ಶುರು

ನಾಪತ್ತೆಯಾಗಿರುವವರು ತಾವಾಗಿಯೇ ಸ್ಥಳೀಯ ಸರ್ಕಾರಿ ಆಸ್ಪತ್ರೆ, ಬಿಬಿಎಂಪಿ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಬೇಕು. ಉದ್ದೇಶಪೂರ್ವಕವಾಗಿ ತಪ್ಪಿಸಿಕೊಂಡರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.