'ನಾನೀಗಲೂ ಪವಿತ್ರಾ ಗೌಡನ ಪ್ರೀತಿಸ್ತೀನಿ..ನನ್ನ ಜೊತೆ ಬಂದ್ರೆ ಜೀವನ ನಡೆಸಲು ರೆಡಿ'

'ನಾನೀಗಲೂ ಪವಿತ್ರಾ ಗೌಡನ ಪ್ರೀತಿಸ್ತೀನಿ..ನನ್ನ ಜೊತೆ ಬಂದ್ರೆ ಜೀವನ ನಡೆಸಲು ರೆಡಿ'

Published : Dec 18, 2024, 03:57 PM IST

ಪವಿತ್ರಾ ಗೌಡ ಅವರ ಮಾಜಿ ಪತಿ ಸಂಜಯ್ ಸಿಂಗ್ ಅವರು ಪವಿತ್ರಾ ಅವರೊಂದಿಗೆ ಮತ್ತೆ ಜೀವನ ನಡೆಸಲು ಸಿದ್ಧರಿದ್ದಾರೆ ಎಂದು ಹೇಳಿದ್ದಾರೆ. ದರ್ಶನ್ ಜೊತೆಗಿನ ಸಂಬಂಧದ ಬಗ್ಗೆ ತಮಗೆ ತಿಳಿದಿಲ್ಲ ಎಂದೂ ಅವರು ಹೇಳಿದ್ದಾರೆ. ರೇಣುಕಾಸ್ವಾಮಿ ಕೊಲೆಯಲ್ಲಿ ಪವಿತ್ರಾ ಗೌಡ ಅವರ ಪಾತ್ರದ ಬಗ್ಗೆಯೂ ಅವರು ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರು (ಡಿ.18): ನಾನು ಪವಿತ್ರಾನ ಈಗಲೂ ಪ್ರೀತಿ ಮಾಡ್ತೇನೆ. ಆಕೆ ನನ್ನ ಜೊತೆ ಬಂದ್ರೆ ನಾನು ಜೀವನ ನಡೆಸೋಕೆ ರೆಡಿ. ದರ್ಶನ್ ಜೊತೆ ಲಿವ್ ಇನ್ ನಲ್ಲಿ ಇರೋದನ್ನು ನಾನು ಯಾವತ್ತೂ ನೋಡಿಲ್ಲ. ಜನರ ಬಾಯನ್ನು ಮುಚ್ಚಿಸೋಕೆ ಆಗೋದಿಲ್ಲ ಎಂದು ಪವಿತ್ರಾ ಗೌಡ ಮೊದಲ ಪತಿ ಸಂಜಯ್‌ ಸಿಂಗ್‌ ಹೇಳಿದ್ದಾರೆ.

ಕಾಕತಾಳೀಯ ಎಂಬಂತೆ ಇವತ್ತು ನಾನು ಬೆಂಗಳೂರಿನಲ್ಲಿ ಇದ್ದೇನೆ. ಇವತ್ತೇ ಪವಿತ್ರಾ ಗೌಡಗೆ ಬೇಲ್ ಸಿಕ್ಕಿ ಹೊರಗಡೆ ಬಂದಿದ್ದಾಳೆ. ನನಗೆ ಬಂದ ತಕ್ಷಣ ಒಳ್ಳೆ ಸುದ್ದಿ ಸಿಕ್ಕಿದೆ. ಕಾಕತಾಳೀಯ ಇದು. ಪವಿತ್ರಾಗೌಡ ಅರೆಸ್ಟ್ ಆಗಿದ್ದು, ಕೇಸ್ ಬಗ್ಗೆ ನಾನು ಯೂಟ್ಯೂಬ್ ನಲ್ಲಿ  ನೋಡ್ತಾ ಇದ್ದೆ. ನಾನು ಈ ವಿಚಾರಕ್ಕೆ ಇವತ್ತು ಬಂದಿದ್ದಲ್ಲ. ನಾನು ಡಿವೋರ್ಸ್ ಆದ್ಮೇಲೆ ಫೋನಲ್ಲೂ ಮಾತಾಡಿಲ್ಲ. ಜೈಲಿಗೆ ಹೋದಾಗ ಅನೇಕರು ನನಗೆ ಫೋನ್ ಮಾಡಿದ್ದರು. ನಾವು ಮದುವೆ ಆಗಿದ್ದು 2009ನಲ್ಲಿ ಡಿವೋರ್ಸ್ 2013ನಲ್ಲಿ ಸಿಕ್ಕಿತ್ತು. ನಮ್ಮದು ಡಿವೋರ್ಸ್ ಆಗಿದೆ, ಪೇಪರ್ನಲ್ಲಿ ಆಗಿದೆ. ಅವರು ಎಲ್ಲಿದ್ದರೂ ಚೆನ್ನಾಗಿರಲಿ ಅಂತ ಬಯಸ್ತೀನಿ. ಡಿವೋರ್ಸ್ ಆಗೋದಕ್ಕೆ ಹಲವು ಕಾರಣವಿತ್ತು. ನಮಗೆ ಟೈಮಿಂಗ್ ಮಿಸ್ ಮ್ಯಾಚ್ ಆಗ್ತಿತ್ತು. ಸಾಕಷ್ಟು ವಿಚಾರದಲ್ಲಿ ಭಿನ್ನಾಭಿಪ್ರಾಯ ಇತ್ತು. ದರ್ಶನ್ ಜೊತೆ ರಿಲೇಶನ್ ಶಿಪ್  ಬಗ್ಗೆ ನನಗೆ ಗೊತ್ತಿಲ್ಲ. ನಾನು ಇರೋ ಟೈಂನಲ್ಲಿ ದರ್ಶನ್ ಯಾವತ್ತೂ ಬಂದಿಲ್ಲ ಎಂದು ಹೇಳಿದ್ದಾರೆ.

ಹೈಕೋರ್ಟ್‌ಗೆ ಸೂಪರ್‌ಹಿಟ್‌ 'ಸರ್ಜರಿ' ಫಿಲ್ಮ್‌ ತೋರಿಸಿದ್ದ ಆರೋಪಿ ದರ್ಶನ್‌ ಡಿಸ್ಚಾರ್ಜ್.!

ರೇಣುಕಾಸ್ವಾಮಿ ಕೊಲೆಯಲ್ಲಿ ಪವಿತ್ರಾಗೌಡ ಇನ್ವಾಲ್ಮೆಂಟ್ ಇದೆ ಅಂತ ನಾನು ಹೇಳಲ್ಲ. ಈ ಕೊಲೆ ಆಕ್ಸಿಡೆಂಟಲ್ ಆಗಿ ಆಗಿದೆ. ಪವಿತ್ರಾ ಇನ್ವಾಲ್ಮೆಂಟ್ ಇದ್ರಲ್ಲಿ ಜಾಸ್ತಿ ಇಲ್ಲ. ಆದರೂ ಎ1 ಮಾಡಿದ್ದಾರೆ. ದರ್ಶನ್ ಜೊತೆ ರಿಲೇಶನ್ ಶಿಪ್ ಬಗ್ಗೆ ಸುಮಾರು ಜನ ಹೇಳ್ತಾರೆ, ನಾನು ಕಣ್ಣಾರೆ ನೋಡಿಲ್ಲ.ಕೋರ್ಟ್ ನಲ್ಲಿ ಲಿವ್ ಇನ್ ಬಗ್ಗೆ ಹೇಳಿರೋದು ನಂಗೆ ಗೊತ್ತಿಲ್ಲ. ನಾನು ನನ್ನ ಮಗಳ ಜೊತೆ ಮುಂಚೆ ಮಾತಾಡಿದ್ದೆ. ಪವಿತ್ರಾ ಜೈಲು ಹೋಗೋ ಟೈಂಲ್ಲಿಯೂ ಮಾತಾಡಿದ್ದೆ. ಮಗಳು ಸ್ಟ್ರಾಂಗ್ ಆಗಿ ತಗೊಂಡಿದಾಳೆ, ಶಿ ಈಸ್ ಬೋಲ್ಡ್ ಗರ್ಲ್. ಎಷ್ಟಾದ್ರೂ ಅವಳು ನನ್ ಮಗಳಲ್ವಾ? ಎಂದು ಸಂಜಯ್‌ ಸಿಂಗ್‌ ಹೇಳಿದ್ದಾರೆ.
 

20:04ಕುರ್ಚಿ ಕಾಳಗದಲ್ಲಿ ಕನಕಪುರ ಬಂಡೆಗೆ ಸ್ನೇಹಿತರ ಶಕ್ತಿ! ಕನಕಾಧಿಪತಿ ಡಿಕೆಗೆ ಸಂ‘ಕ್ರಾಂತಿ’, ಯುಗಾದಿ ಸಿಹಿ!
24:55ಪೊಲೀಸರು ತೋರಿಸಿದ ಫೋಟೋ ನೋಡಿ ಪ್ರೇಮಿ ಕಟ್ಟಿದ ತಾಳಿ ಕಿತ್ತೆಸೆದು ಪೋಷಕರೊಂದಿಗೆ ಬಂದ ಯುವತಿ
23:22ಕೋಗಿಲು to ಕೇರಳ, ಸಿಂಹಾಸನ ಸೀಕ್ರೆಟ್! ದೇವರ ನಾಡಿನ ದಂಗಲ್​ ಗೆಲ್ಲೋಕೆ ಸಿದ್ದಾಸ್ತ್ರ ಪ್ರಯೋಗ..!
25:27ಕಳ್ಳರ ಗೋಲ್ಡ್ ಬ್ಯುಸಿನೆಸ್​​: ಕಳ್ಳರು ಸಿಗಲ್ಲ, ಸಿಕ್ಕಿದ್ರೂ ಮಾಲು ಇರೊಲ್ಲ! 5 ರಾಬರಿ ಕೇಸ್, ಪೊಲೀಸರು ತನಿಖೆ ಠುಸ್!
20:43ಸಿಎಂ ಪಟ್ಟದ ಪಗಡೆಯಾಟದಲ್ಲಿ ಡಿಕೆಶಿ ವೈರಾಗ್ಯದ ನುಡಿ: ಸಿದ್ದು ಅಹಿಂದ ಬ್ರಹ್ಮಾಸ್ತ್ರಕ್ಕೆ ಸಿಂಹಾಸನ ದಿಗ್ಬಂಧನ?
22:34ರಾಹುಕಾಲ ರಹಸ್ಯ..! ಸಿದ್ದು ಆಪ್ತನ ಪತ್ರವ್ಯೂಹ.. ರಾಹುಲ್ ಕೈಯಲ್ಲಿ ಡಿ.ಕೆ.ಶಿವಕುಮಾರ್ ಪಟ್ಟ ಭವಿಷ್ಯ!
21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
Read more