ಮತ್ತೆ ಶುರುವಾಯ್ತು ಪಂಚಮಸಾಲಿ ಮೀಸಲಾತಿ ಕಿಚ್ಚು: ಲೋಕಸಭೆ ಚುನಾವಣೆ ಹೊತ್ತಲ್ಲಿ ‘ಬಸವ’ ಶ್ರೀ ರಣಕಹಳೆ

Sep 25, 2023, 12:05 PM IST

ಕರುನಾಡಿನಲ್ಲಿ ಮತ್ತೆ ಪಂಚಮಸಾಲಿ 2ಎ ಮೀಸಲಾತಿ ಹೋರಾಟದ ಕಿಚ್ಚೆದ್ದಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾರ್ಧನಿಸಿದ್ದ ಹೋರಾಟ. 3ಡಿ ಮೀಸಲಾತಿ ಪಡೆಯುವಲ್ಲಿ ಯಶಸ್ವಿಯಾಗಿತ್ತು. ಕಾರ್ಯರೂಪಕ್ಕೆ ಬರುವಷ್ಟರಲ್ಲಿ ಮೀಸಲಾತಿ ಕೋರ್ಟ್ ಮೆಟ್ಟಿಲೇರಿತ್ತು. ಈಗ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕೊಡಿಸಲೇಬೇಕೆಂದು ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಪಣತೊಟ್ಟಿದ್ದು, ಹೋರಾಟದ ಕಹಳೆ ಮೊಳಗಿಸಿದ್ದಾರೆ. ವಿಜಯಪುರದ ಭೀಮಾತೀರದ ಚಡಚಣ ಹಾಗೂ ಝಳಕಿಯಲ್ಲಿ ಹೋರಾಟಕ್ಕೆ ಚಾಲನೆ ಸಿಕ್ಕಿದೆ.. ಮೊದಲು ಚಡಚಣ ಸಂಗಮೇಶ್ವರ ಕಲ್ಯಾಣ ಮಂಟಪದಲ್ಲಿ ಬಸವಜಯ ಮೃತ್ಯುಂಜಯ ಶ್ರೀಗಳು ಮೀಸಲಾತಿ ಹೋರಾಟದ ಸಮಾವೇಶ ನಡೆಸಿದ್ರು.. ನಂತರ ಮಹಾರಾಷ್ಟ್ರ ಸಂಪರ್ಕಿಸುವ ಝಳಕಿ ರಾಷ್ಟ್ರೀಯ ಹೆದ್ದಾರಿಯವರೆಗೆ ಬೃಹತ್ ಬೈಕ್ ರ್ಯಾಲಿ ನಡೆಸಿದ್ರು.. ಪಂಚಮಸಾಲಿ ಶ್ರೀಗಳು ಹಾಗೂ ಮುಖಂಡರು ಹೆದ್ದಾರಿ ಬಂದ್‌ ಮಾಡಿದ್ರು.. ಈ ವೇಳೆ ಹೆದ್ದಾರಿಯಲ್ಲೇ ಶ್ರೀಗಳು ಇಷ್ಟಲಿಂಗ ಪೂಜೆ ಮಾಡಿ ಸರ್ಕಾರದ ಗಮನ ಸೆಳೆದರು.

ಇದನ್ನೂ ವೀಕ್ಷಿಸಿ:  ಕಾವೇರಿ ಹೋರಾಟ ಅಖಾಡಕ್ಕಿಳಿದಿದ್ದ ಪುನೀತ್,ಶಿವಣ್ಣ: ತಮಿಳುನಾಡಿನ ವಿರುದ್ಧ ಆಕ್ರೋಶಗೊಂಡಿದ್ದ ಸ್ಟಾರ್‌ಗಳು