Mar 5, 2024, 11:22 AM IST
ಫೆಬ್ರುವರಿ 27ರಂದು ವಿಧಾನಸಭೆಯಲ್ಲಿ ರಾಜ್ಯಸಭೆ ಚುನಾವಣೆ ನಡೆದಿತ್ತು. ಈ ಚುನಾವಣೆಯಲ್ಲಿ ಕಾಂಗ್ರೆಸ್(Congress) ಅಭ್ಯರ್ಥಿ ನಾಸೀರ್ ಹುಸೇನ್ ಗೆಲುವು ಸಾಧಿಸಿದ್ದರು. ಈ ಹಿನ್ನೆಲೆ ವಿಧಾನಸಭೆಯಲ್ಲಿ ನಾಸೀರ್ ಹುಸೇನ್(Naseer Hussain) ವಿಜಯೋತ್ಸವದ ಸಂಭ್ರಮ ನಡೆಯುತ್ತಿತ್ತು. ಈ ವೇಳೆ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೂಗಲಾಗಿತ್ತು. ಈ ಸಂಬಂಧ ವಿಧಾಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ಘಟನೆ ವಿಡಿಯೋ ಆಧರಿಸಿ ನಾಸೀರ್ ಬೆಂಬಲಿಗರ ಮೇಲೆ FIR ಸಹ ದಾಖಲಾಗಿತ್ತು. ಪ್ರಕರಣ ಸಂಬಂಧ ಶಫಿ ನಾಶಿಪುಡಿ, ಇಲ್ತಾಜ್, ಮುನಾವರ್‌ಗೆ ಪೊಲೀಸರು(Police) ನೊಟೀಸ್ ನೀಡಿದ್ದರು. ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಪೋಸರು ವಿಚಾರಣೆ ನಡೆಸಿದ್ದರು. ಎಫ್‌ಎಸ್‌ಎಲ್ ವರದಿಯಲ್ಲಿ(FSL report) ಪಾಕಿಸ್ತಾನ ಪರ ಘೋಷಣೆ(Pak pro slogan) ಕೂಗಿರುವುದು ದೃಢ ಪಟ್ಟಿದ್ದು, FSL ವರದಿ ಬಳಿಕ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ ರಾತ್ರೋ ರಾತ್ರಿ ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿದೆ.
ಇದನ್ನೂ ವೀಕ್ಷಿಸಿ: Aaradhya New Hairstyle: ಕೊನೆಗೂ ಐಶ್ವರ್ಯಾ ಮಗಳ ಹಣೆ ನೋಡಾಯ್ತು: ಹೇರ್ ಸ್ಟೈಲ್ ಬದಲಿಸಿದ ಆರಾಧ್ಯ ಬಚ್ಚನ್ !