ಮೈಸೂರು ದಸರಾ ಮುನ್ನವೇ ಮಹಿಷ ದಸರಾಗೆ ಸಿದ್ಧತೆ: ಸರ್ಕಾರ ಅನುಮತಿ ನೀಡದಿದ್ದರೂ ಪುಷ್ಪಾರ್ಚನೆಗೆ ತೀರ್ಮಾನ

Sep 9, 2023, 10:42 AM IST

ಅರಮನೆ ನಗರಿಯಲ್ಲಿ ವಿಶ್ವ ವಿಖ್ಯಾತಿ ಮೈಸೂರು ದಸರಾಗೆ(Dasara) ಭರ್ಜರಿ ತಯಾರಿ ನಡೆಸಿದೆ. ಇದರ ನಡುವೆ ಈ ಬಾರಿ ಚಾಮುಂಡಿ ಬೆಟ್ಟದಲ್ಲಿ(Chamundi Hill) ಮಹಿಷ ದಸರಾ(Mahisha dasara) ವಿವಾದ ಭುಗಿಲೆದ್ದಿದೆ. ಸರ್ಕಾರದಿಮದ ಅನುಮತಿ ದೊರೆಯುವುದಕ್ಕೂ ಮುನ್ನವೇ ಆಚರಣೆಗೆ ಸಿದ್ಧತೆ ಶುರುವಾಗಿದೆ. ಬಿಜೆಪಿ ಅಧಿಕಾರದ ಅವಧಿಯಲ್ಲಿ  ಅನುಮತಿ ನೀಡದ ಕಾರಣ ಸ್ಥಗಿತಗೊಂಡಿದ್ದ  ಮಹಿಷ ದಸರಾವನ್ನು ಈ ಬಾರಿ ಆಚರಿಸಲು ಮಹಿಷ ದಸರಾ ಆಚರಣಾ ಸಮಿತಿ ನಿರ್ಧರಿಸಿದೆ. ಸದ್ಯ ಇದುವರೆಗೂ ಮಹಿಷ ದಸರಾ ಆಚರಣೆಗೆ ಸರ್ಕಾರ ಯಾವುದೇ ಅನುಮತಿ ನೀಡಿಲ್ಲ. ಆದರೆ  ಇದೇ ಅಕ್ಟೋಬರ್ 15 ರಂದು ಸಾಂಪ್ರದಾಯಿಕ ದಸರಾ ಉದ್ಘಾಟನೆ ಆಗುತ್ತಿದ್ದು, ಅದಕ್ಕೂ 2 ದಿನ ಮುನ್ನವೇ ಮಹಿಷ ದಸರಾ ಆಚರಣೆ ಮಾಡುತ್ತಿದ್ದಾರೆ. ಮಹಿಷ ದಸರಾ ಆಚರಣಾ ಸಮಿತಿ ತೀರ್ಮಾನಿಸಿದೆ. ಈ ಸಂಬಂಧ ಕರಪತ್ರವನ್ನೂ ಹಂಚಲಾಗ್ತಿದೆ. ಮಹಿಷ ದಸರ ಆಚರಣೆಗೆ ಸಂಸದ ಪ್ರತಾಪ್ ಸಿಂಹ(Pratap Simha) ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಘರ್ಷಣೆ ಆದರೂ ಸರಿಯೇ ಬೆಟ್ಟದಲ್ಲಿ ಮಹಿಷ ದಸರಾ ಆಚರಣೆಗೆ ಅವಕಾಶ ನೀಡಲ್ಲ ಎಂದು ಕಿಡಿಕಾರಿದ್ದಾರೆ.

ಇದನ್ನೂ ವೀಕ್ಷಿಸಿ:  G20 Summit: ಬಲಾಢ್ಯ ನಾಯಕರ ಆಗಮನ.. ದೆಹಲಿಯಲ್ಲಿ ಬಿಗಿ ಬಂದೋಬಸ್ತ್