Oct 12, 2023, 10:55 AM IST
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯದಲ್ಲಿ 7 ಹೊಸ ವಿವಿಗಳನ್ನ ಸ್ಥಾಪನೆ ಮಾಡಿತ್ತು. ಕಳೆದ ವರ್ಷ ನವೆಂಬರ್ನಲ್ಲಿ ಉಪ ಕುಲಪತಿಗಳನ್ನೂ ನೇಮಕ ಮಾಡಿತ್ತು. ಆಗ ಆವರ್ತಕ ವೆಚ್ಚವಾಗಿ 2 ಕೋಟಿ ಹಣ ಬಿಡುಗಡೆ ಮಾಡುವುದಾಗಿ ಹೇಳಿದ್ದ ಬಿಜೆಪಿ(BJP) ಸರ್ಕಾರ ಬಿಡುಗಡೆ ಮಾಡಿರಲಿಲ್ಲ. ಈಗ ಅಧಿಕಾರದಲ್ಲಿರೋ ಕಾಂಗ್ರೆಸ್(Congress) ಸರ್ಕಾರ ಕೂಡ ಹೊಸ ವಿವಿಗಳಿಗೆ ಅಗತ್ಯ ಹಣ ಬಿಡುಗಡೆ ಮಾಡಿಲ್ಲ. ವಿಸಿಗಳಿಗೂ 7 ತಿಂಗಳಿಂದ ಸಂಬಳ ಸಿಕ್ಕಿಲ್ಲ. ಹೊಸ ವಿವಿಗಳಿಗೆ ವಿಸಿಗಳ ನೇಮಕಾತಿ ವೇಳೆ ಹೊಸ ವಾಹನ , ಹೊಸ ಕಟ್ಟಡ ನಿರ್ಮಾಣ, ಹುದ್ದೆಗಳ ನೇಮಕ ಮಾಡಿಕೊಳ್ಳುವಂತಿಲ್ಲ ಅನ್ನೋ ಷರತ್ತು ಹಾಕಿ ನೇಮಕ ಮಾಡಲಾಗಿದೆ. ಕಳೆದ 7 ತಿಂಗಳಿನಿಂದ ಸಂಬಳ ಇಲ್ಲ, ಓಡಾಡಲು ಕಾರು ಸಹ ಇಲ್ಲ.ತಮ್ಮ ಕಷ್ಟವನ್ನ ನೇರವಾಗಿ ಮಾಧ್ಯಮಗಳ ಮುಂದೆಯೂ ಹೇಳಿಕೊಳ್ಳಲಾಗದ ವಿಸಿಗಳು ಪರದಾಡುತ್ತಿದ್ದಾರೆ. ಆಗಿನ ಸರ್ಕಾರ ಅವೈಜ್ಞಾನಿಕವಾಗಿ ಹೊಸ ವಿವಿಗಳನ್ನ ಸ್ಥಾಪನೆ ಮಾಡಿದೆ. ಈಗ ಏನು ಮಾಡಬೇಕು ಅಂತ ಸಿಎಂ ಜೊತೆ ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳುವುದಾಗಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಹೇಳ್ತಿದ್ದಾರೆ. ಈಗಾಗಲೇ ಸಿದ್ದರಾಮಯ್ಯ(Siddaramaiah) ಸರ್ಕಾರ ಗ್ಯಾರಂಟಿಗಳಿಗೇ ಹಣ ಹೊಂದಿಸಲು ಹೆಣಗಾಡುತ್ತಿದೆ. ಹೀಗಿರುವಾಗ ಹೊಸ ವಿವಿಗಳಿಗೆ ಹಣ ಬಿಡುಗಡೆ ಆಗುತ್ತಾ..? ವಿಸಿಗಳಿಗೆ ಸಂಬಳ ನೀಡುತ್ತಾ ಅನ್ನೋ ಪ್ರಶ್ನೆ ಎದ್ದಿದೆ... ಸಂಬಳ ನೀಡದಿದ್ದರೆ ವಿವಿಗಳ ಸ್ಥಾಪನೆ ಮಾಡಿದ್ಯಾಕೆ..? ಸಂಬಳವಿಲ್ಲದ ವಿಸಿಗಳು ಏನ್ ಮಾಡಬೇಕು ಅನ್ನೋದಕ್ಕೆ ಸರ್ಕಾರವೇ ಉತ್ತರಿಸಬೇಕಿದೆ.
ಇದನ್ನೂ ವೀಕ್ಷಿಸಿ: ಲೋಕಸಭೆ ಗೆಲ್ಲೋಕೆ ಜೆಡಿಎಸ್ ಶಕ್ತಿಪ್ರದರ್ಶನ: ವಿಜಯಪುರದಲ್ಲಿ ‘ಪುನರ್‌ಚೇತನ ಪರ್ವ’ ಸಂಭ್ರಮ