ರಾಜ್ಯಾದ್ಯಂತ ನಾಗರಪಂಚಮಿ ಸಗಡರ: ಈ ಹಬ್ಬದ ಮಹತ್ವ ಏನು ಗೊತ್ತಾ?

ರಾಜ್ಯಾದ್ಯಂತ ನಾಗರಪಂಚಮಿ ಸಗಡರ: ಈ ಹಬ್ಬದ ಮಹತ್ವ ಏನು ಗೊತ್ತಾ?

Published : Aug 21, 2023, 10:22 AM IST

ನಾಗರ ಪಂಚಮಿ ಹಬ್ಬವನ್ನು ಪ್ರತಿ ವರ್ಷ ಶ್ರಾವಣ ಮಾಸದ ಶುಕ್ಲ ಪಕ್ಷದ ಐದನೇ ದಿನದಂದು ಆಚರಿಸಲಾಗುತ್ತದೆ. ಈ ದಿನ ನಾಗದೇವತೆಯನ್ನು ಪೂಜಿಸಲಾಗುತ್ತದೆ.
 

ನಾಗರ ಪಂಚಮಿಯ ದಿನದಂದು ನಾಗ ದೇವರನ್ನು ಪೂಜಿಸುವುದರಿಂದ ಕಾಳಸರ್ಪ ದೋಷಗಳಿಂದ ಮುಕ್ತಿ ದೊರೆಯುತ್ತದೆ. ಸರ್ಪ ದೇವರನ್ನು ಮನೆಯ ರಕ್ಷಕ ಎಂದೂ ಪರಿಗಣಿಸಲಾಗುತ್ತದೆ. ಈ ದಿನ ನಾಗ ದೇವರನ್ನು ಪೂಜಿಸುವುದರಿಂದ ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸುತ್ತದೆ ಎಂದು ಹೇಳಲಾಗುತ್ತದೆ. ಇದಲ್ಲದೇ ನಾಗರ ಪಂಚಮಿಯಂದು(Nagara Panchami) ಪೂಜೆ ಮಾಡುವುದರಿಂದ ಜಾತಕದಲ್ಲಿ ಕಾಳ ಸರ್ಪದೋಷದ ಪ್ರಭಾವವೂ ಕಡಿಮೆಯಾಗುತ್ತದೆ. ನಾಗರ ಪಂಚಮಿ ಮಾಂಗಲ್ಯಪ್ರದ ಹಾಗೂ ಸಂತಾನಪ್ರದ ಎಂಬ ನಂಬಿಕೆ. ಉತ್ತರ ಕರ್ನಾಟಕದಲ್ಲಿ ನಾಗರಪಂಚಮಿ ವಿಶೇಷತೆಗಳಿಂದ ಕೂಡಿರುತ್ತದೆ. ತವರಿಗೆ ಹೆಣ್ಣುಮಕ್ಕಳನ್ನು ಆಹ್ವಾನಿಸಿ, ಉಡುಗೊರೆ ನೀಡಿ ಗೌರವಿಸಲಾಗುತ್ತದೆ. ಪೂಜೆಯ ಅಂಗವಾಗಿ ದೇವಸ್ಥಾನ(Temple) ಹಾಗೂ ಹುತ್ತಗಳಿರುವ ಜಾಗಕ್ಕೆ ಹೋಗಿ ತಮ್ಮನ್ನು ರಕ್ಷಿಸಲೆಂದು ಬೇಡಿಕೊಂಡು ಜನರು ಹಾಲು ಮತ್ತು ಬೆಳ್ಳಿ ಆಭರಣಗಳನ್ನು ಅರ್ಪಿಸುತ್ತಾರೆ. ಈ ಹಬ್ಬವು ಅಣ್ಣ -ತಂಗಿ ಇಬ್ಬರೂ ಸೇರಿ ಪೂಜಿಸಲ್ಪಡುವ ಹಬ್ಬವೆಂದು ಪ್ರತೀತಿ ಸಹ ಇದೆ. ನಾಗರಪಂಚಮಿಯಂದು ಮಾಡಿದ ಉಪವಾಸದ ಮಹತ್ವವೆಂದರೆ ಈ ಹಿಂದೆ ಸತ್ಯೇಶ್ವರೀ ಎಂಬ ಹೆಸರಿನ ದೇವಿಯಿದ್ದಳು. ಸತ್ಯೇಶ್ವರನು ಅವಳ ಸಹೋದರನಾಗಿದ್ದನು. ಸತ್ಯೇಶ್ವರನು ನಾಗರಪಂಚಮಿಯ ಹಿಂದಿನ ದಿನ ಮೃತ ಹೊಂದಿದನು. ಆಗ ಸಹೋದರನ ಸಾವಿನಿಂದ ಶೋಕದಲ್ಲಿ ಸತ್ಯೇಶ್ವರಿಯು ಆಹಾರವನ್ನು ಸ್ವೀಕರಿಸಲಿಲ್ಲ. ಅದಕ್ಕೆ ಸತ್ಯೇಶ್ವರಿಗೆ ಅವಳ ಸಹೋದರನು ನಾಗರೂಪದಲ್ಲಿ ಕಂಡನು. ಅದಕ್ಕೆ ಆ ದಿನ ಮಹಿಳೆಯರು ಸಹೋದರನ ಹೆಸರಿನಲ್ಲಿ ಉಪವಾಸ ಮಾಡುತ್ತಾರೆ. 

ಇದನ್ನೂ ವೀಕ್ಷಿಸಿ:  ಯುಪಿ ಸಿಎಂ ಕಾಲಿಗೆ ಬಿದ್ದ ಸೂಪರ್ ಸ್ಟಾರ್..! ಸ್ವಾಭಿಮಾನವನ್ನು ಯೋಗಿ ಕಾಲಡಿ ಇಟ್ರಾ ತಲೈವಾ ?

25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:39ರೇಷ್ಮೆ ಹುಳುವಿನ ಸೂಪ್, ಜಿರಳೆ ಪಕೋಡ ಈ ಸಲದ ಜಿಕೆವಿಕೆ ಕೃಷಿಮೇಳದ ಹೈಲೈಟ್ಸ್!
24:25NDA ದಿಗ್ವಿಜಯ.. ಸಿದ್ದರಾಮಯ್ಯ ಸಿಂಹಾಸನ ಭದ್ರ? ಕರುನಾಡ ಪಟ್ಟ ಕದನದ ದಿಕ್ಕು ಬದಲು?
07:51ವಂಚನೆ ಕೇಸ್ ತನಿಖೆ ವಿಳಂಬ: SP ಕಚೇರಿ ಮುಂದೆ ವಿಷ ಕುಡಿದು ಆತ್ಮಹ*ತ್ಯೆಗೆ ಯತ್ನಿಸಿದ ಉದ್ಯಮಿ
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
Read more