Aug 10, 2023, 11:03 AM IST
ನಾಡಹಬ್ಬ ದಸರಾಗೆ ಸೊಬಗು ಹೆಚ್ಚಿಸುವ ಗಜಪಡೆ ಸೆಪ್ಟೆಂಬರ್ 1ಕ್ಕೆ ಅರಮನೆ ನಗರಿ ಮೈಸೂರು(Mysore) ಪ್ರವೇಶಿಸಲಿವೆ. ದಸರಾಗೆ(Dasara) ಎರಡು ಹಂತದಲ್ಲಿ ಆನೆಗಳು ಮೈಸೂರಿಗೆ ಬರಲಿದ್ದು, ಮೊದಲ ಹಂತದಲ್ಲಿ ಬರುವ 9 ಆನೆಗಳ ಪಟ್ಟಿಯನ್ನ ಅರಣ್ಯ ಇಲಾಖೆ(forest department) ಬಿಡುಗಡೆ ಮಾಡಿದೆ. ನಾಗರಹೊಳೆಯ ಮತ್ತಿಗೋಡು ಅರಣ್ಯ ಶಿಬಿರದ ಕ್ಯಾಪ್ಟನ್ ಅಭಿಮನ್ಯು, ಭೀಮ, ಮಹೇಂದ್ರ ಆಗಮಿಸಲಿದ್ದು. ಬಳ್ಳೆ ಆನೆ ಶಿಬಿರದಿಂದ ಅರ್ಜುನ, ದುಬಾರೆ ಆನೆ ಶಿಬಿರದಿಂದ ಧನಂಜಯ, ಗೋಪಿ, ಬಂಡೀಪುರದ ರಾಮಪುರ ಶಿಬಿರದಿಂದ ಪಾರ್ಥ ಸಾರತಿ, ದುಬಾರೆ ಶಿಬಿರದಿಂದ ವಿಜಯ, ಭೀಮನಕಟ್ಟೆ ಶಿಬಿರದಿಂದ ವರಲಕ್ಷ್ಮೀ ಆನೆ ಮೊದಲ ತಂಡದಲ್ಲಿ ಬರಲಿವೆ. ಈ ಬಾರಿಯ ದಸರೆಯಲ್ಲಿ ಒಟ್ಟು 14 ಆನೆಗಳು(Elephants) ಭಾಗವಹಿಸಲಿದ್ದು, 5 ಹೊಸ ಆನೆಗಳು ಮೊದಲ ಬಾರಿಗೆ ದಸರಾಗೆ ಬರಲಿವೆ. ಎರಡನೇ ಹಂತದಲ್ಲಿ ಯಾವ ಆನೆಗಳನ್ನು ಕಳುಹಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವರೊಟ್ಟಿಗೆ ಚರ್ಚೆ ಮಾಡಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ. ಇದೇ ಮೊದಲ ಬಾರಿಗೆ ಶಿವಮೊಗ್ಗದ ಸಕ್ಕರೆಬೈಲು ಆನೆ ಶಿಬಿರದಿಂದ ಹೊಸ ಆನೆ ತರಲು ಚಿಂತನೆ ಮಾಡಿದ್ದು, ಹೊಸ ಆನೆಗಳ ಹೆಲ್ತ್ ಕಾರ್ಡ್ ಹಾಗೂ ಆನೆಗಳ ಚಲನವಲನ ಶಬ್ಧಗಳ ಪರಿಚಯಿಸಲಾಗುತ್ತಿದೆ. ಅಂತಿಮವಾಗಿ ಆನೆಗಳ ಚಲನವಲನ ಗಮನಿಸಿ ಆಯ್ಕೆ ಮಾಡಲಾಗುತ್ತದೆ.
ಇದನ್ನೂ ವೀಕ್ಷಿಸಿ: ಚಾಕೊಲೇಟ್ ಪ್ರಿಯರೇ ಎಚ್ಚರ..ಎಚ್ಚರ..!: ಕರಾವಳಿ ಚಾಕೋಲೇಟ್ ಪ್ರಿಯರಿಗೆ ಶಾಕಿಂಗ್ ನ್ಯೂಸ್..!