ರಾಜ್ಯದಲ್ಲಿ ಮಿತಿಮೀರಿದ ಖಾಸಗಿ ಫೈನಾನ್ಸ್​​ ಕಿರುಕುಳ: ಸಿಎಂ ಸೂಚನೆಗೂ ಡೋಂಟ್​​ಕೇರ್!

ರಾಜ್ಯದಲ್ಲಿ ಮಿತಿಮೀರಿದ ಖಾಸಗಿ ಫೈನಾನ್ಸ್​​ ಕಿರುಕುಳ: ಸಿಎಂ ಸೂಚನೆಗೂ ಡೋಂಟ್​​ಕೇರ್!

Published : Jan 23, 2025, 08:23 AM IST

ರಾಜ್ಯದಲ್ಲಿ ಖಾಸಗಿ ಫೈನಾನ್ಸ್ ಕಂಪನಿಗಳ​ ಸಿಬ್ಬಂದಿ ದೌರ್ಜನ್ಯಕ್ಕೆ ಬ್ರೇಕ್​ ಬೀಳುವ ಲಕ್ಷಣ ಕಾಣ್ತಿಲ್ಲ. ಸಿಎಂ ಸಿದ್ದರಾಮಯ್ಯ ಸೂಚನೆಗೂ ಫೈನಾನ್ಸ್​ ಸಿಬ್ಬಂದಿ ಕ್ಯಾರೆ ಎನ್ನುತ್ತಿಲ್ಲ. ಸಾಲ ಮರುಪಾವತಿ ಮಾಡಲು ಸ್ವಲ್ಪ ವಿಳಂಬವಾದ್ರೂ ಬಡ ಕುಟುಂಬಗಳ ಮೇಲೆ ಫೈನಾನ್ಸ್​ ಸಿಬ್ಬಂದಿ ಮುಗಿಬೀಳುತ್ತಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿ ಅಮಾನವೀಯವಾಗಿ ನಡೆದುಕೊಳ್ತಿದ್ದಾರೆ. ಸಾಲ ಪಡೆದವರು ಫೈನಾನ್ಸ್ ಸಿಬ್ಬಂದಿ ಟಾರ್ಚರ್​​ ತಡೆಯಲಾಗದೇ ಮಾನ, ಮರ್ಯಾದೆಗೆ ಅಂಜಿ ಊರುಗಳನ್ನೇ ಬಿಡುತ್ತಿದ್ದಾರೆ. 

ಬೆಂಗಳೂರು(ಜ.23):  ರಾಜ್ಯಾದ್ಯಂತ ಖಾಸಗಿ ಫೈನಾನ್ಸ್​ಗಳ ಹಾವಳಿ ಮಿತಿಮೀರಿದೆ. ಖುದ್ದು ಸಿಎಂ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ರೂ ಫೈನಾನ್ಸ್ ಸಿಬ್ಬಂದಿ ಬೆದರಿಕೆ, ಕಿರುಕುಳಕ್ಕೆ ಬ್ರೇಕ್​ ಬಿದ್ದಿಲ್ಲ. ಸಾಲದ ಶೂಲಕ್ಕೆ ಸಿಲುಕಿದ ಜನ ಗ್ರಾಮಗಳನ್ನೇ ಬಿಟ್ಟು ಹೋಗುತ್ತಿದ್ದಾರೆ.

ರಾಜ್ಯದಲ್ಲಿ ಖಾಸಗಿ ಫೈನಾನ್ಸ್ ಕಂಪನಿಗಳ​ ಸಿಬ್ಬಂದಿ ದೌರ್ಜನ್ಯಕ್ಕೆ ಬ್ರೇಕ್​ ಬೀಳುವ ಲಕ್ಷಣ ಕಾಣ್ತಿಲ್ಲ. ಸಿಎಂ ಸಿದ್ದರಾಮಯ್ಯ ಸೂಚನೆಗೂ ಫೈನಾನ್ಸ್​ ಸಿಬ್ಬಂದಿ ಕ್ಯಾರೆ ಎನ್ನುತ್ತಿಲ್ಲ. ಸಾಲ ಮರುಪಾವತಿ ಮಾಡಲು ಸ್ವಲ್ಪ ವಿಳಂಬವಾದ್ರೂ ಬಡ ಕುಟುಂಬಗಳ ಮೇಲೆ ಫೈನಾನ್ಸ್​ ಸಿಬ್ಬಂದಿ ಮುಗಿಬೀಳುತ್ತಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿ ಅಮಾನವೀಯವಾಗಿ ನಡೆದುಕೊಳ್ತಿದ್ದಾರೆ. ಸಾಲ ಪಡೆದವರು ಫೈನಾನ್ಸ್ ಸಿಬ್ಬಂದಿ ಟಾರ್ಚರ್​​ ತಡೆಯಲಾಗದೇ ಮಾನ, ಮರ್ಯಾದೆಗೆ ಅಂಜಿ ಊರುಗಳನ್ನೇ ಬಿಡುತ್ತಿದ್ದಾರೆ. 

News Hour: ಸಂಡೂರು ಸೋಲಿನ ಬೆಂಕಿ: ಬಿಜೆಪಿಯಲ್ಲಿ ಬಂಡಾಯದ ಕಿಡಿ

ಕೊಡಗಿನ ನಂಜರಾಯಪಟ್ಟಣದಲ್ಲಿ ಮೈಕ್ರೋ ಫೈನಾನ್ಸ್​ ಕಿರುಕುಳ ಎಲ್ಲೆ ಮೀರಿದೆ.  ಮೀನುಕೊಲ್ಲಿ ಹಾಡಿ, ದಾಸವಾಳ ಪೈಸಾರಿ, ಬೆಳ್ಳಿಕಾಲೋನಿ ಕಾವೇರಿ ಕಾಲೋನಿಗಳ ಜನರಿಗೆ 24 ರಿಂದ 26 ಪರ್ಸೆಂಟ್ ಮೀಟರ್ ಬಡ್ಡಿಗೆ ಫೈನಾನ್ಸ್​ ಕಂಪನಿಗಳು ಸಾಲ ನೀಡಿವೆ. ಫೈನಾನ್ಸ್ ಸಿಬ್ಬಂದಿ ಕಿರುಕುಳಕ್ಕೆ ಬೇಸತ್ತು ನಾಲ್ಕು ಗ್ರಾಮಗಳ 50ಕ್ಕೂ ಹೆಚ್ಚು ಕುಟುಂಬಗಳು ಮನೆಗಳಿಗೆ ಬೀಗ ಹಾಕಿ ಊರು ಬಿಟ್ಟಿವೆ. 

ರಾಯಚೂರು ಜಿಲ್ಲೆಯಲ್ಲೂ ಖಾಸಗಿ ಫೈನಾನ್ಸ್ ‌ಕಿರುಕುಳ ಹೆಚ್ಚಾಗಿದೆ. ಅದರಲ್ಲೂ ಮಾನ್ವಿ ತಾಲೂಕಿನ ಬೆಟ್ಟದೂರು, ಕಪಗಲ್, ನೀರಮಾನ್ವಿ ಗ್ರಾಮದಲ್ಲಿ ‌ಸಾಲ ಪಡೆದ ಜನ ಹೈರಾಣಾಗಿದ್ದಾರೆ. ಸಾಲದ ಕಂತು ಕಟ್ಟಲು ಸಮಯ ಕೇಳಿದ್ರೂ ಕಾಲಾವಕಾಶ ನೀಡ್ತಿಲ್ಲ ಅಂತಾ ಅಳಲು ತೋಡಿಕೊಂಡಿದ್ದಾರೆ. 

ಖಾಸಗಿ ಫೈನಾನ್ಸ್ ಕಿರುಕುಳಕ್ಕೆ ಬೇಸತ್ತು ರಾಮನಗರದಲ್ಲಿ ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ತಿಮ್ಮಯ್ಯನದೊಡ್ಡಿ ಗ್ರಾಮದಲ್ಲಿ 60 ವರ್ಷದ ಯಶೋಧಮ್ಮ ನೇಣಿಗೆ ಕೊರಳೊಡ್ಡಿದ್ದಾರೆ. ಯಶೋಧಮ್ಮ ಹಲವು ಫೈನಾನ್ಸ್​ ಕಂಪನಿಗಳಲ್ಲಿ 5 ಲಕ್ಷ ಸಾಲ ಪಡೆದಿದ್ದರು. 

ಹಾವೇರಿ ಜಿಲ್ಲೆಯಲ್ಲೂ ಖಾಸಗಿ ಫೈನಾನ್ಸ್ ಸಾಲದ ಸುಳಿ ಜನರ ಜೀವನವನ್ನ ಬರ್ಬಾದ್​ ಮಾಡಿದೆ. ಫೈನಾನ್ಸ್ ಸಿಬ್ಬಂದಿ ಕಿರುಕುಳಕ್ಕೆ ಬೇಸತ್ತ ಮಹಿಳೆಯರು ಮಾಂಗಲ್ಯ ಸರ ಉಳಿಸಿ ಅಭಿಯಾನ ನಡೆಸಿದ್ದಾರೆ. ಸಿಎಂ ಸಿದ್ದರಾಮಯ್ಯಗೆ ಮಾಂಗಲ್ಯ ಸರವನ್ನೇ ಪೋಸ್ಟ್ ಮಾಡಿದ ಮಹಿಳೆಯರು ಫೈನಾನ್ಸ್​​​ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ರು. 

ಸದ್ಯಕ್ಕೆ ನಟ ದರ್ಶನ್ 'ಡೆವಿಲ್' ಸಿನಿಮಾ ಶೂಟಿಂಗ್ ಮಾಡೋಕೆ ಸಾಧ್ಯವೇ ಇಲ್ವಾ?

ರಾಜ್ಯದೆಲ್ಲೆಡೆ ಖಾಸಗಿ ಫೈನಾನ್ಸ್ ಸಿಬ್ಬಂದಿ ಕಿರುಕಳ ಜಾಸ್ತಿಯಾಗಿದ್ರೆ ರಾಜಧಾನಿ ಬೆಂಗಳೂರಲ್ಲಿ ಮೀಟರ್ ಬಡ್ಡಿ ದಂಧೆ ಎಗ್ಗಿಲ್ಲದೇ ಸಾಗಿದೆ. ಮುಮ್ತಾಜ್​​ ಎಂಬಾಕೆ ತಮ್ಮ ಮನೆಯಲ್ಲಿ ಕೆಲಸ ಮಾಡ್ತಿದ್ದ ತಾಹೀರಾ ಎಂಬಾಕೆಗೆ 2022ರಲ್ಲಿ 45 ಸಾವಿರ ರೂಪಾಯಿ ಸಾಲ ನೀಡಿದ್ದಾಳೆ. ಆ ಸಾಲಕ್ಕೆ 45 ಪರ್ಸೆಂಟ್​ ಬಡ್ಡಿ ದರದಲ್ಲಿ 3 ಲಕ್ಷ 42 ಸಾವಿರ ಹಣ ವಾಪಸ್​ ಪಡೆದಿದ್ದಾಳೆ. ಆದ್ರೂ ಕೂಡ ಇನ್ನೂ ಸಾಲ ತೀರಿಲ್ಲ ಬಡ್ಡಿ ಕಟ್ಟುವಂತೆ ಮಮ್ತಾಜ್​ ಹಾಗೂ ಆಕೆ ಮಗಳು ಸೀಮಾ ಕಿರುಕುಳ ನೀಡುತ್ತಿದ್ದಾರೆ. ಸದ್ಯ ತಾಯಿ, ಮಗಳ ವಿರುದ್ಧ ತಾಹೀರಾ ಚಂದ್ರಲೇಔಟ್​ ಪೊಲೀಸ್​ ಠಾಣೆಗೆ ದೂರು ನೀಡಿದ್ದಾಳೆ. 

ಖಾಸಗಿ ಫೈನಾನ್ಸ್​ ಕಿರುಕುಳದ ಬಗ್ಗೆ ಏಷ್ಯಾನೆಟ್​ ಸುವರ್ಣನ್ಯೂಸ್​ ನಿರಂತರ ವರದಿ ಮಾಡ್ತಿದ್ದು, ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ಕಿರುಕುಳ ನೀಡುವವರ ಮೇಲೆ ಕ್ರಮ ಕೈಗೊಳ್ತೇವೆ ಎಂದಿದ್ದಾರೆ. 
ರಾಜ್ಯದಲ್ಲಿ ದಿನೇ ದಿನೆ ಖಾಸಗಿ ಫೈನಾನ್ಸ್ ಸಾಲದ ಬಲೆಗೆ ಸಿಲುಕಿ ಸಿಲುಕಿ ಸಂಕಷ್ಟ ಅನುಭವಿಸುತ್ತಿರೋರ ಸಂಖ್ಯೆ ಹೆಚ್ಚಾಗಿದೆ. ಯಾವುದೇ ಭದ್ರತೆ ಇಲ್ಲದೇ ಲಕ್ಷ ಲಕ್ಷ ಸಾಲ ನೀಡುವ ಫೈನಾನ್ಸ್​ ಸಂಸ್ಥೆಗಳು ಬಡ್ಡಿ ಹೆಸರಲ್ಲಿ ಜನರ ಸುಲಿಗೆಗಿಳಿದಿವೆ. 

20:04ಕುರ್ಚಿ ಕಾಳಗದಲ್ಲಿ ಕನಕಪುರ ಬಂಡೆಗೆ ಸ್ನೇಹಿತರ ಶಕ್ತಿ! ಕನಕಾಧಿಪತಿ ಡಿಕೆಗೆ ಸಂ‘ಕ್ರಾಂತಿ’, ಯುಗಾದಿ ಸಿಹಿ!
24:55ಪೊಲೀಸರು ತೋರಿಸಿದ ಫೋಟೋ ನೋಡಿ ಪ್ರೇಮಿ ಕಟ್ಟಿದ ತಾಳಿ ಕಿತ್ತೆಸೆದು ಪೋಷಕರೊಂದಿಗೆ ಬಂದ ಯುವತಿ
23:22ಕೋಗಿಲು to ಕೇರಳ, ಸಿಂಹಾಸನ ಸೀಕ್ರೆಟ್! ದೇವರ ನಾಡಿನ ದಂಗಲ್​ ಗೆಲ್ಲೋಕೆ ಸಿದ್ದಾಸ್ತ್ರ ಪ್ರಯೋಗ..!
25:27ಕಳ್ಳರ ಗೋಲ್ಡ್ ಬ್ಯುಸಿನೆಸ್​​: ಕಳ್ಳರು ಸಿಗಲ್ಲ, ಸಿಕ್ಕಿದ್ರೂ ಮಾಲು ಇರೊಲ್ಲ! 5 ರಾಬರಿ ಕೇಸ್, ಪೊಲೀಸರು ತನಿಖೆ ಠುಸ್!
20:43ಸಿಎಂ ಪಟ್ಟದ ಪಗಡೆಯಾಟದಲ್ಲಿ ಡಿಕೆಶಿ ವೈರಾಗ್ಯದ ನುಡಿ: ಸಿದ್ದು ಅಹಿಂದ ಬ್ರಹ್ಮಾಸ್ತ್ರಕ್ಕೆ ಸಿಂಹಾಸನ ದಿಗ್ಬಂಧನ?
22:34ರಾಹುಕಾಲ ರಹಸ್ಯ..! ಸಿದ್ದು ಆಪ್ತನ ಪತ್ರವ್ಯೂಹ.. ರಾಹುಲ್ ಕೈಯಲ್ಲಿ ಡಿ.ಕೆ.ಶಿವಕುಮಾರ್ ಪಟ್ಟ ಭವಿಷ್ಯ!
21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
Read more