ಸತ್ಯ-ಮಿಥ್ಯಗಳ ಮಧ್ಯೆ ಏನಿದು ಮಹಿಷ ದಸರಾ..? ಏನಿದರ ಮರ್ಮ..?

ಸತ್ಯ-ಮಿಥ್ಯಗಳ ಮಧ್ಯೆ ಏನಿದು ಮಹಿಷ ದಸರಾ..? ಏನಿದರ ಮರ್ಮ..?

Published : Sep 14, 2023, 02:33 PM IST

ದಸರಾ ಸಂಭ್ರಮದಲ್ಲೇ ಈ ಬಾರಿ ನಡೆಯುತ್ತಾ ಮಹಿಷ ದಸರಾ..?
ಮಹಿಷಮರ್ಧಿನಿಯ ಸನ್ನಿಧಿಯಲ್ಲಿ ಮಹಿಷ ದಸರಾ ಸಂಘರ್ಷ..!
ಸರ್ಕಾರ ಬದಲಾಗುತ್ತಿದ್ದಂತೆ ಭುಗಿಲೆದ್ದ ಮಹಿಷ ದಸರಾ ಸಂಘರ್ಷ..!

ದಸರಾ ಸಂಭ್ರಮ ಹತ್ತಿರ ಬರ್ತಾ ಇದ್ದಂತೆ ಭುಗಿಲೆದ್ದು ನಿಂತ ಮಹಿಷ ದಸರಾ (Mahisha Dasara) ಸಂಘರ್ಷ. ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಮತ್ತೆ ಶುರುವಾಯ್ತು ಮಹಿಷ ಯುದ್ಧ. ಚಾಮುಂಡಿ ಮಿಥ್ಯ, ಮಹಿಷನೇ ಸತ್ಯ ಅಂದ್ರು ಪ್ರಗತಿಪರರು. ಮಹಿಷ ದಸರಾ ಪರ ನಿಂತಿರುವವರಿಗೆ ಬಿಜೆಪಿ ಸಂಸದ ಓಪನ್ ಚಾಲೆಂಜ್ ಹಾಕಿದ್ದಾರೆ. ಮೈಸೂರು ದಸರಾ(Mysore Dasara) ಅಂದ್ರೆ ಇಡೀ ಜಗತ್ತಿಗೇ ಫೇಮಸ್. ದಸರಾ ಬಂತು ಅಂದ್ರೆ ಇಡೀ ಮೈಸೂರಲ್ಲಿ ಹಬ್ಬ. ಇದನ್ನು ನಾಡಹಬ್ಬ ಅಂತಾನೂ ಕರೆಯಲಾಗತ್ತೆ. ಮೈಸೂರು ದಸರಾ ಈ ನಾಡಿನ ಅಸ್ಮಿತೆ. ಮಹಿಷಾಸುರನನ್ನು ತಾಯಿ ಚಾಮುಂಡಿ ಸಂಹಾರ ಮಾಡಿದ ದಿನವನ್ನು ವಿಜಯದಶಮಿಯನ್ನಾಗಿ ಆಚರಿಸೋದು, ಆ ದಿನ ಚಾಮುಂಡೇಶ್ವರಿಯನ್ನು ಅಂಬಾರಿಯಲ್ಲಿಟ್ಟು ವಿಜೃಂಭಣೆಯಿಂದ ಮೆರವಣಿಗೆ ಮಾಡೋದು. ಇದೇ ಮೈಸೂರು ದಸರಾದ ಸೆಂಟರ್ ಆಫ್ ಅಟ್ರಾಕ್ಷನ್. ಇಡೀ ನಾಡೇ ಎದುರು ನೋಡ್ತಾ ಇರೋ ಮೈಸೂರು(Mysore) ದಸರಾ ಹತ್ತಿರ ಬರ್ತಾ ಇದೆ. ದಸರಾ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ನಾಡಿಗೆ ನಾಡೇ ಸಜ್ಜಾಗ್ತಿರೋ ಹೊತ್ತಲ್ಲೇ, ಮಹಿಷ ದಸರ ಸಂಘರ್ಷ ಸದ್ದು ಮಾಡ್ತಾ ಇದೆ. ಅಕ್ಟೋಬರ್ 13ರಂದು ಚಾಮುಂಡಿ ಬೆಟ್ಟದಲ್ಲಿರೋ(Chamundi hill) ಮಹಿಷಾಸುರನ ಪ್ರತಿಮೆಯ ಬಳಿ ಮಹಿಷ ದಸರಾ ಆಚರಿಸಲು ಪ್ರಗತಿಪರರ ಸಂಘಟನೆಗಳು ಸಿದ್ಧತೆ ನಡೆಸ್ತಾ ಇವೆ. ಇದಕ್ಕಾಗಿ ಮಹಿಷ ದಸರ ಆಚರಣೆ ಸಮಿತಿಯನ್ನೂ ರಚಿಸಲಾಗಿದ್ದು, ಮಹಿಷ ದಸರಾ ಆಚರಿಸಿಯೇ ಸಿದ್ಧ ಅಂತ ಸವಾಲ್ ಹಾಕಿ ನಿಂತಿದ್ದಾರೆ. ಆದ್ರೆ ಇದಕ್ಕೆ ಪ್ರತಿ ಸವಾಲ್ ಹಾಕಿರೋ ಮೈಸೂರು-ಕೊಡಗು ಕ್ಷೇತ್ರದ ಬಿಜೆಪಿ ಸಂಸದ ಪ್ರತಾಪ್ ಸಿಂಹ, ಅದ್ಹೇಗೆ ಮಹಿಷ ದಸರಾ ಆಚರಿಸ್ತಾರೋ ನೋಡೇ ಬಿಡ್ತೀನಿ ಅಂತ ಅಬ್ಬರಿಸಿದ್ದಾರೆ.

ಇದನ್ನೂ ವೀಕ್ಷಿಸಿ:  ಬಿ.ಕೆ.ಹರಿಪ್ರಸಾದ್ ಬೇಸರಗೊಂಡಿರುವುದೇಕೆ ? ಕಾಂಗ್ರೆಸ್‌ ನಾಯಕನ ಮುಂದಿನ ನಡೆ ಏನು..?

23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
19:50Suvarna Special: 151/5 ಬಂಡೆಯಾಟವಯ್ಯಾ! ಮೊದಲ ಅಗ್ನಿಪರೀಕ್ಷೆ..ಶತ್ರುಪಡೆಯನ್ನೇ ಒಡೆದ ಕನಕಪುರ ಬಂಡೆ!
20:09Suvarna Special: ಆರೆಸ್ಸೆಸ್​ Vs ಖರ್ಗೆ ರಣರಂಗ, 100 ವರ್ಷ ಇತಿಹಾಸದ RSS​​​ ವಿರುದ್ಧ ಖರ್ಗೆ ‘ಸಂಘ’ರ್ಷ..!
19:20Suvarna Special: ಯಾರಿಗುಂಟು ಲಕ್ಷ್ಮೀ?ಯಾರಿಗಿಲ್ಲ ಜ್ಯೋತಿ? ಕಾಸು, ಕರೆಂಟು, ಲಕ್ಷ್ಮೀ, ಜ್ಯೋತಿ..ಇದು ಆಪರೇಷನ್ ಗ್ಯಾರಂಟಿ
47:03RSS ನೋಂದಣಿ ಯಾವಾಗ..? ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸಾಲು ಸಾಲು ಪ್ರಶ್ನೆಯಿಂದ ಶುರುವಾದ ಚರ್ಚೆ
25:24ಧರ್ಮಸ್ಥಳ ಬುರುಡೆ ಕೇಸ್‌ಗೆ ಬಿಗ್ ಟ್ವಿಸ್ಟ್: ಸಾಥ್ ಕೊಟ್ಟವರ ₹200 ಕೋಟಿ ಷಡ್ಯಂತ್ರ ಬಿಚ್ಚಿಟ್ಟ ಮಾಸ್ಕ್‌ ಮ್ಯಾನ್!
23:20ಧರ್ಮಸ್ಥಳ ವಿರುದ್ಧ ಕೇರಳ ಫಂಡಿಂಗ್, ಚಿತ್ರದುರ್ಗ ಕನೆಕ್ಷನ್, 200 ಕೋಟಿ ಡೀಲ್ ಸೀಕ್ರೆಟ್ ಬಿಚ್ಚಿಟ್ಟ ಮಾಸ್ಕ್ ಮ್ಯಾನ್
21:25DK Shivakumar: ಸಿದ್ದು ಸಂಪ್ರದಾಯ ಮುರಿದ ಡಿಕೆಶಿ: ಗಾಂಧಿಗಿರಿ ಹಿಂದಿನ ರಣತಂತ್ರವೇನು?
21:34ಡಿಫರೆಂಟ್ ಡಿಕೆ: ವಿದುರ ನೀತಿ.. ಚಾಣಕ್ಯ ತಂತ್ರ.. ರಾಜ್ಯ ರಾಜಕಾರಣದಲ್ಲಿ 'ಬಂಡೆ'ಯ ಹೊಸ ಚದುರಂಗದಾಟ!
Read more