Aug 11, 2023, 11:43 AM IST
ಮಳೆಯ ಅಬ್ಬರದಿಂದ ಸುಧಾರಿಸಿಕೊಳ್ಳುತ್ತಿರುವ ಜನರಿಗೆ ಮತ್ತೊಂದು ಶಾಕಿಂಗ್ ವಿಷ್ಯ ಹೊರ ಬಿದ್ದಿದೆ. ಕರ್ನಾಟಕದಲ್ಲಿ ಮದ್ರಾಸ್ ಐ ವೈರಸ್(Madras Eye Vrus) ಆರ್ಭಟಿಸುತ್ತಿದೆ. ಒಬ್ಬರಿಂದ ಒಬ್ಬರಿಗೆ ಹರಡುವ ಮದ್ರಾಸ್ ಐ(Madras Eye) ಮಳೆಗಾಲ ಮತ್ತು ಚಳಿಗಾಲದಲ್ಲಿ ಉಲ್ಬಣಿಸುತ್ತದೆ. ರಾಜ್ಯದಲ್ಲಿ ಈಗ ಮದ್ರಾಸ್ ಐ ದೊಡ್ಡ ಮಟ್ಟದಲ್ಲೇ ಹಬ್ಬುತ್ತಿದ್ದು, ಇದುವರೆಗೂ ರಾಜ್ಯದಲ್ಲಿ 40 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಕಳೆದ 20 ವರ್ಷಗಳಿಗೆ ಹೋಲಿಸಿದ್ರೆ ಈ ಬಾರಿ ಮದ್ರಾಸ್ ಐ ಗಂಭೀರ ಸ್ವರೂಪ ಪಡೆದಿದೆ. ಕಣ್ಣಿನ ಉರಿ ಊತದ ಈ ಸೋಂಕು ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತೆ. ಸ್ವಲ್ಪ ಯಾಮಾರಿದ್ರು 2 ರಿಂದ 5 ವರ್ಷಗಳ ಕಾಲ ದೃಷ್ಠಿದೋಷವೂ ಉಂಟಾಗಬಹುದು. ಈ ಕುರಿತು ಸಂಶೋಧನೆ ಕೂಡ ನಡೆಸಲಾಗಿದೆ ಎನ್ನುತ್ತಾರೆ ನಾರಾಯಣ ನೇತ್ರಾಲಯದ ಡಾ.ರೋಹಿತ್ ಶೆಟ್ಟಿ(Rohit Shetty). ಮದ್ರಾಸ್ ಐ ಬಗ್ಗೆ ಜನರಲ್ಲಿ ಆತಂಕ ಬೇಡ. ಸೋಂಕಿತರು ನೋಡಿದ ಮಾತ್ರಕ್ಕೆ ಸೋಂಕು ಇನ್ನೊಬ್ಬರಿಗೆ ಹರಡಲ್ಲ. ಆದ್ರೆ ಸೋಂಕಿತರು ಹಸ್ತಲಾಘವ ಮಾಡಿದ್ರೆ, ಸೋಂಕಿತರ ಸ್ಪರ್ಶದಿಂದ, ಸೋಂಕಿತರು ಬಳಸಿದ ವಸ್ತು ಬಳಕೆಯಿಂದ ಸೋಂಕು ಹರಡುತ್ತೆ. ಸೋಂಕು ಹರಡದಂತೆ ಎಚ್ಚರಿಕೆ ವಹಿಸಿ. ಸ್ವಚ್ಚತೆಯ ಕಡೆ ಗಮನ ಹರಿಸಿ.
ಇದನ್ನೂ ವೀಕ್ಷಿಸಿ: ಕರಾವಳಿಯಲ್ಲಿ ಮತ್ತೊಮ್ಮೆ ಕೇಸರಿ ಪಡೆಗೆ ಮುಖಭಂಗ: ಬಿಜೆಪಿ ಬೆಂಬಲಿತ ಸದಸ್ಯನಿಂದಲೇ ಎಸ್‌ಡಿಪಿಐಗೆ ಸಾಥ್ !