Sep 27, 2023, 2:27 PM IST
ಬೆಂಗಳೂರು ಬಂದ್ ಆಯ್ತು. ಶುಕ್ರವಾರ ಕರ್ನಾಟಕ ಬಂದ್(karnataka bandh). ಇಲ್ಲಿ ಕಾವೇರಿ ನೀರಿಗಾಗಿ ಹಾಹಾಕಾರ. ಅಲ್ಲಿ ಹೋರಾಟಗಾರರ ಮಧ್ಯೆ ಅಪಸ್ವರ. ದೆಹಲಿಯಲ್ಲಿ ರಾಜ್ಯಕ್ಕೆ ಮತ್ತೆ ಕಾವೇರಿ ಬರೆ. ಕಾವೇರಿ ನೀರಿಗಾಗಿ ಒಟ್ಟಾಗಿ ಧ್ವನಿ ಎತ್ತಬೇಕಾದವರ ಮಧ್ಯೆ ಬಿಕ್ಕಟ್ಟು ಏರ್ಪಟ್ಟಂತೆ ಕಾಣುತ್ತಿದೆ. ಇದು ಕಾವೇರಿ(Cauvery) ನೀರಿರಾಗಿ, ತಮಿಳುನಾಡಿಗೆ ಹರಿದು ಹೋಗುತ್ತಿರುವ ಕಾವೇರಿಯನ್ನು ಉಳಿಸಿಕೊಳ್ಳೋದಕ್ಕಾಗಿ ರಾಜಧಾನಿ ಬೆಂಗಳೂರಿನಲ್ಲಿ ಮಂಗಳವಾರ ಮೊಳಗಿದ ಕಾವೇರಿ ಕಹಳೆ. “ಕರ್ನಾಟಕ ಜಲ ಸಂರಕ್ಷಣಾ ಸಮಿತಿ ಬೆಂಗಳೂರು” ಈ ಸಂಘಟನೆಯ ನೇತೃತ್ವದಲ್ಲಿ ಬೆಳಗ್ಗೆ 6ರಿಂದ ಸಂಜೆ 6ವರೆಗೆ ಬೆಂಗಳೂರು ಬಂದ್ ನಡೀತು. ಕನ್ನಡಪರ ಸಂಘಟನೆಗಳು, ರೈತ ಸಂಘಟನೆಗಳು, ಸಾರಿಗೆ, ಶಿಕ್ಷಕರ ಸಂಘಟನೆಗಳು ಸೇರಿದಂತೆ 150ಕ್ಕೂ ಹೆಚ್ಚಿನ ಸಂಘಟನೆಗಳು ರಾಜಧಾನಿ ಬಂದ್'ಗೆ ಬೆಂಬಲ ಕೊಟ್ಟಿದ್ವು. ಆದ್ರೆ ಕನ್ನಡದ ಪರ, ಕರ್ನಾಟಕದ ಪರ, ನಾಡು ನುಡಿ, ನೆಲ ಜಲದ ವಿಚಾರದಲ್ಲಿ ಧ್ವನಿ ಎತ್ತುವ ಕನ್ನಡ ಹೋರಾಟಗಾರರು ಬೆಂಗಳೂರು ಬಂದ್"ನಿಂದ ದೂರ ಉಳಿದಿದ್ರು. ಆದರೆ ಕನ್ನಡಪರ ಸಂಘಟನೆಗಳ ಒಕ್ಕೂಟ, ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣ ಗೌಡ ಬಣ.. ಹೀಗೆ ರಾಜ್ಯದ ಪ್ರಮುಖ ಸಂಘಟನೆಗಳು ಮಂಗಳವಾರ ಪ್ರತ್ಯೇಕ ಪ್ರತಿಭಟನೆ ನಡೆಸಿದ್ವೇ ಹೊರತು, ಬಂದ್‌ಗೆ ಬೆಂಬಲ ಕೊಡ್ಲಿಲ್ಲ. ಅದ್ರಲ್ಲೂ ಹಿರಿಯ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದ ಕನ್ನಡಪರ ಸಂಘಟನೆಗಳ ಒಕ್ಕೂಟ ಶುಕ್ರವಾರ ಕರ್ನಾಟಕ ಬಂದ್‌ಗೆ ಕರೆ ಕೊಟ್ಟಿದೆ. ಇದು ಕನ್ನಡಪರ ಸಂಘಟನೆಗಳು, ರೈತ ಸಂಘಟನೆಗಳ ಮಧ್ಯೆ ಇರೋ ಪ್ರತಿಷ್ಠೆಯ ಪರಿಣಾಮ. ಮಂಗಳವಾರ ನಡೆದ ಬೆಂಗಳೂರು ಬಂದ್'ಗೆ ಎಲ್ಲಾ ಸಂಘಟನೆಗಳು ಬೆಂಬಲ ಕೊಟ್ಟಿರ್ಲಿಲ್ಲ. ಸಂಘಟನೆಗಳ ನಡುವಿನ ತಿಕ್ಕಾಟದ ಕಾರಣ ಒಗ್ಗಟ್ಟಿರಬೇಕಾದ ಜಾಗದಲ್ಲಿ ಬಿಕ್ಕಟ್ಟು ಎದುರಾಯ್ತು.
ಇದನ್ನೂ ವೀಕ್ಷಿಸಿ: ಮಧ್ಯಪ್ರದೇಶದಲ್ಲಿ ಚುನಾವಣೆ ಬಳಿಕ ಸಿಎಂ ಆಯ್ಕೆ.. ಶಾ ಕಟ್ಟಾಜ್ಞೆ..!