2015ರ ಗೆಜೆಟೆಡ್ ಪ್ರೊಬೇಷನರಿ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಆರೋಪ ಕೇಳಿ ಬಂದಿತ್ತು. ಪರೀಕ್ಷಾರ್ಥಿಗಳು ಕಾನೂನು ಹೋರಾಟಕ್ಕೆ ನಿಂತಿದ್ರು. ಆದ್ರೆ ಪರೀಕ್ಷಾರ್ಥಿಗಳಲ್ಲಿ ಯಾವುದೇ ದಾಖಲೆಗಳು ಇರಲಿಲ್ಲ. ಸದ್ಯ ದಾಖಲಾತಿಗಳು ಸಿಕ್ಕಿದ್ದು ಮತ್ತೊಂದು ಕಾನೂನು ಹೋರಾಟಕ್ಕೆ ಸಿದ್ಧತೆ ನಡೆಸ್ತಿದ್ದಾರೆ.
ಸರ್ಕಾರಿ ಉದ್ಯೋಗಕ್ಕಾಗಿ ಹತ್ತಾರು ವರ್ಷ ಪರಿಶ್ರಮ ಪಡ್ತಾರೆ. ಹಗಲು ರಾತ್ರಿ ಎನ್ನದೆ, ಅರ್ಧ ಹೊಟ್ಟೆಯಲ್ಲೇ ದೂರದ ಊರುಗಳಲ್ಲಿ ಅಭ್ಯಾಸ ಮಾಡ್ತಾರೆ. ಆದ್ರೆ ಪರೀಕ್ಷೆಯಲ್ಲೇ ಅಕ್ರಮ ನಡೆದ್ರೆ ಪ್ರತಿಭಾನ್ವಿತ ಅಭ್ಯರ್ಥಿಗಳಿಗೆ(Candidates) ಅದೆಷ್ಟು ನೋವಾಗುತ್ತೆ ಅಲ್ವಾ. ಇಂಥದ್ದೆ ಘಟನೆ ಇದೀಗ ಧಾರವಾಡದಲ್ಲಿ ನಡೆದಿದೆ. ಇಲ್ನೋಡಿ ಈತನ ಹೆಸರು ರಮೇಶ್, ಕೈಯಲ್ಲಿ ದಾಖಲಾತಿ ಹಿಡಿದು ಕೆಪಿಎಸ್‌ಸಿ(KPSc) ವಿರುದ್ಧ ಬೇಸರ ವ್ಯಕ್ತಪಡಿಸ್ತಿದ್ದಾರೆ. ಅಂದುಕೊಂಡತೆ ಆಗಿದ್ರೆ ಇಷ್ಟೊತ್ತಿಗೆ ಉನ್ನತ ಸರ್ಕಾರಿ ಹುದ್ದೆಯಲ್ಲಿ(Government Jobs) ಇರಬೇಕಾಗಿತ್ತು. ಆದ್ರೆ ಕೆಪಿಎಸ್‌ಸಿಯಿಂದ ನನಗೆ ಅನ್ಯಾಯವಾಗಿದೆ ಅಂತಾ ನೊಂದ ಧ್ವನಿಯಲ್ಲಿ ಆಕ್ರೋಶ ಹೊರಹಾಕ್ತಿದ್ದಾರೆ. 2015ರಲ್ಲಿ 428 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳಿಗೆ ಪರೀಕ್ಷೆ ನಡೆದಿತ್ತು. 2020ರ ಜನೆವರಿ 1ಕ್ಕೆ ಅಂತಿಮ ಆಯ್ಕೆ ಪಟ್ಟಿ ಪ್ರಕಟಗೊಂಡಿತ್ತು. ಈ ಕೆಪಿಎಸ್‌ಸಿ ಮೌಲ್ಯಮಾಪನದಲ್ಲಿ ಅಕ್ರಮ ನಡೆದಿದೆ ಅಂತಾ ಅನೇಕ ಅಭ್ಯರ್ಥಿಗಳು ಆರೋಪಿಸಿದ್ರು. ಕಾನೂನು ಹೋರಾಟಕ್ಕೂ ಮುಂದಾಗಿದ್ರು, ಆದರೆ ಆರೋಪ ಮಾಡಿದ್ದ ಅಭ್ಯರ್ಥಿಗಳ ಬಳಿ ಯಾವುದೇ ದಾಖಲೆಗಳೇ ಇರಲಿಲ್ಲ. ಆರ್‌ಟಿಐ ಅಡಿ ನಕಲಿ ಉತ್ತರ ಪತ್ರಿಕೆ ಕೇಳಿದ್ರೂ ಕೂಡ ನಕಲಿ ಉತ್ತರ ಹಾಳೆ ನೀಡಿರಲಿಲ್ಲ. ಕೋರ್ಟ್‌ಗೆ ಹೋದ ಬಳಿಕ ಇದೀಗ 2 ವರ್ಷ 7 ತಿಂಗಳ ಬಳಿಕ ಕೆಪಿಎಸ್‌ಸಿ ನಕಲು ಅಂಕ ಪ್ರತಿ ನೀಡಿದೆ.. ಡಿಜಿಟಲ್ ಅಂಕಪಟ್ಟಿಯನ್ನೇ ಮ್ಯಾನುವಲ್ ಆಗಿ ತಿದ್ದಲಾಗಿದೆ ಅಂತಾ ಕೆಪಿಎಸ್‌ಸಿ ವಿರುದ್ಧವೇ ರಮೇಶ್ ಆರೋಪಿಸ್ತಿದ್ದಾರೆ. ಕೈಗೆ ಸಿಕ್ಕಿರುವ ನಕಲಿ ಅಂಕಪಟ್ಟಿಗಳನ್ನು ನೋಡಿದಾಗ ಕೆಲವೊಂದು ಸರಿಯಾದ ಉತ್ತರಗಳಿಗೆ ಶೂನ್ಯ ಅಂಕ ನೀಡಲಾಗಿದೆ. ಉತ್ತರ ಬರೆಯದೇ ಖಾಲಿ ಬಿಟ್ಟ ಪುಟಗಳಿಗೆ ಅಂಕ ನೀಡಿದ್ದಾರೆ ಅಂತಾ ಅಭ್ಯರ್ಥಿಗಳು ಆರೋಪಿಸ್ತಿದ್ದಾರೆ. ಪರೀಕ್ಷಾ ಅಕ್ರಮ ತಡೆಯಬೇಕಿದ್ದ ಕೆಪಿಎಸ್‌ಸಿಯೇ ತಪ್ಪು ಮಾಡಿದ್ರೆ ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಗುತ್ತೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನೇ ನಂಬಿಕೊಂಡವರ ಭವಿಷ್ಯದ ಗತಿ ಏನು ಎಂದು ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳು ಪ್ರಶ್ನಿಸುತ್ತಿದ್ದಾರೆ.
ಇದನ್ನೂ ವೀಕ್ಷಿಸಿ: ಸರ್ಕಾರಿ ಕಚೇರಿಯಲ್ಲಿ ಥಂಬ್ ಕೊಡುವ ಮುನ್ನ ಎಚ್ಚರ! ಫಿಂಗರ್ ಪ್ರಿಂಟ್ ಕೊಟ್ಟು ಹಣ ಕಳೆದುಕೊಂಡ ಜನ !