ರಾಜ್ಯ ಹಿಂದೂ ಜಾತ್ರಾ ವ್ಯಾಪಾರಿಗಳ ಸಂಘ ಉದ್ಘಾಟನೆ: ಅಂಗಡಿಗಳ ಮೇಲೆ ಭಗವಾಧ್ವಜ ಹಾಕಲು ಕರೆ

Sep 13, 2023, 10:57 AM IST

ಕರಾವಳಿಯಲ್ಲಿ ಹುಟ್ಟಿಕೊಂಡಿದ್ದ ಹಿಂದೂ ವ್ಯಾಪಾರ ದಂಗಲ್. ರಾಜ್ಯ ವ್ಯಾಪಿ ಕಿಚ್ಚು ಹಚ್ಚಿತ್ತು. ರಾಜ್ಯಾಧ್ಯಂತ ಧರ್ಮ ಸಂಘರ್ಷಕ್ಕೆ ನಾಂದಿ ಹಾಡಿತ್ತು. ತಣ್ಣಗಿದ್ದ ಧರ್ಮ ದಂಗಲ್ ಮತ್ತೊಮ್ಮೆ ಕರಾವಳಿಯಲ್ಲಿ ಸಿದ್ದು ಮಾಡುವ ಸುಳಿವು ನೀಡಿದೆ. ಯಾಕಂದ್ರೆ ರಾಜ್ಯದ ಹಿಂದೂ ಜಾತ್ರಾ ವ್ಯಾಪಾರಿಗಳ ಪ್ರತ್ಯೇಕ ಸಂಘಕ್ಕೆ(Hindu fair traders association) ಮಂಗಳೂರಲ್ಲಿ(Mangalore) ಬಿಜೆಪಿ ರಾಜ್ಯಾಧ್ಯಕ್ಷರು ಚಾಲನೆ ನೀಡಿದ್ದಾರೆ. ಮಂಗಳೂರಿನಲ್ಲಿ ರಾಜ್ಯ ಹಿಂದೂ ಜಾತ್ರಾ ವ್ಯಾಪಾರಿಗಳ ಸಂಘಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್( Nalin kumar Kateel) ಚಾಲನೆ ನೀಡಿದ್ರು. ಈ ಮೂಲಕ ಬಹಿರಂಗವಾಗಿಯೇ ದೇವಸ್ಥಾನಗಳಲ್ಲಿ(Temples) ಹಿಂದೂಗಳಷ್ಟೇ ವ್ಯಾಪಾರ ಮಾಡಬೇಕು. ಅನ್ಯ ಧರ್ಮಿಯರಿಗೆ ಅವಕಾಶ ನೀಡಬಾರದು ಎನ್ನುವ ಸಂದೇಶ ನೀಡಿದ್ದಾರೆ. ಹಿಂದೂ ದೇವಸ್ಥಾನಗಳ ಪರಂಪರೆ, ಸಂಸ್ಕೃತಿ ಉಳಿಸುವುದಕ್ಕಾಗಿ ಹಿಂದೂ ವ್ಯಾಪಾರಿಗಳ ಸಂಘಕ್ಕೆ ಚಾಲನೆ ನೀಡಿದ್ದೇವೆ ಎಂದ ನಳಿನ್ ಕುಮಾರ್ ಕಟೀಲ್ , ಹಿಂದೂ ವ್ಯಾಪಾಸ್ಥರ ಸಂಘಟನೆ ಹುಟ್ಟಿಕೊಂಡಿರುವುದು ಒಳ್ಳೆಯ ವಿಷಯ ಎಂದರು. ಸದ್ಯ ರಾಜ್ಯಾದ್ಯಂತ 1 ಲಕ್ಷ 27 ಸಾವಿರ ಹಿಂದೂ ಜಾತ್ರಾ ವ್ಯಾಪಾರಿಗಳ ಗುರುತು ಮಾಡಲಾಗಿದ್ದು, ಸದ್ಯ ರಾಜ್ಯದ ಸಾವಿರಕ್ಕೂ ಅಧಿಕ ಹಿಂದೂ ವ್ಯಾಪಾರಿಗಳನ್ನು ಸೇರಿಸಿ ಸಂಘಟನೆ ರಚಿಸಲಾಗಿದೆ. ಧಾರ್ಮಿಕ ದತ್ತಿ ಅಧಿನಿಯಮ 33ರಡಿ ಹಿಂದೂಗಳಿಗೆ ಮಾತ್ರ ವ್ಯಾಪಾರಕ್ಕೆ ಅವಕಾಶ ನೀಡಲು ಸಂಘಟನೆ ಆಗ್ರಹಿಸಿದೆ. 

ಇದನ್ನೂ ವೀಕ್ಷಿಸಿ:  ಬಾಗಲಕೋಟೆಯಲ್ಲಿ ಹೆಚ್ಚಾದ ವಾಮಾಚಾರ: ಮಾಟ, ಮಂತ್ರದಿಂದ ಸಾರ್ವಜನಿಕರಿಗೆ ಭಯ !