Sep 15, 2023, 9:59 AM IST
ಹಬ್ಬಗಳು ಬಂದ್ರೆ ಸಾಕು.. ಖಾಸಗಿ ಬಸ್ ಮಾಲೀಕರಿಗೆ ಭರ್ಜರಿ ಹಬ್ಬದೂಟ. ಹಬ್ಬಕ್ಕೆ ಊರಿಗೆ ಹೋಗುವವರನ್ನೇ ಬಂಡವಾಳ ಮಾಡಿಕೊಂಡು ಬಸ್ ಟಿಕೆಟ್(Ticket) ದರಗಳನ್ನು ಯದ್ವಾ ತವ್ದಾ ಏರಿಸುತ್ತವೆ. ಈ ಬಾರಿಯೂ ಅಷ್ಟೇ.. ಗೌರಿ ಗಣೇಶ ಹಬ್ಬಕ್ಕೆ(Gauri Ganesha festival) ಊರಿಗ ಹೊರಟವರ ಸುಲಿಗೆಗೆ ಇಳಿದಿವೆ. ಸಾಮಾನ್ಯ ದಿನಗಳಲ್ಲಿ 500-700 ರೂ ಇದ್ದ ಟಿಕೆಟ್, ದರ ಈಗ 1500 - 2500ಕ್ಕೆ ತಲುಪಿದೆ. ಆನ್ ಲೈನ್ ಟಿಕೆಟ್ ಬುಕಿಂಗ್ ದರ ಸಾಮಾನ್ಯ ದಿನಕ್ಕಿಂತ ಎರಡು ಮೂರು ಪಟ್ಟು ಹೆಚ್ಚಳ ಮಾಡಿದ್ದಾರೆ. ಪ್ರಯಾಣಿಕರ ಸುಲಿಗೆಗೆ ಇಳಿದ ಖಾಸಗಿ ಬಸ್(Private buses) ಮಾಲೀಕರ ವಸೂಲಿ ದಂಧೆ ಬಗ್ಗೆ ಸುವರ್ಣ ನ್ಯೂಸ್ ವರದಿ ಪ್ರಸಾರ ಮಾಡಿತ್ತು. ನಮ್ಮ ವರದಿ ಬೆನ್ನಲ್ಲೇ ಸಾರಿಗೆ ಅಧಿಕಾರಿಗಳು ಫೀಲ್ಡ್ಗೆ ಇಳಿದಿದ್ದಾರೆ. ಬಸ್ಗಳ ಮೇಲೆ ದಾಳಿ ಮಾಡಿದ ಆರ್ಟಿಒ ಅಧಿಕಾರಿಗಳು ಟಿಕೆಟ್ ದರ ಪರಿಶೀಲಿಸಿದ್ದಾರೆ. ನಿಯಮ ಮೀರಿ ಟಿಕೆಟ್ ದರ ಏರಿಸಿದ್ದಕ್ಕೆ 60ಕ್ಕೂ ಹೆಚ್ಚು ಕೇಸ್ಗಳನ್ನ ದಾಖಲಿಸಿಕೊಂಡಿದ್ದಾರೆ.
ಬಹುತೇಕ ಖಾಸಗಿ ಬಸ್‌ಗಳು ಪ್ರಯಾಣ ದರವನ್ನು ಹೆಚ್ಚಿಸಿವೆ. ಇನ್ನು ಕೆಲ ಟ್ರಾವೆಲ್ಸ್ಗಳಂತೂ ಆನ್ಲೈನ್ ಬುಕಿಂಗ್ ಮಾಡಿದ್ದನ್ನೇ ಕ್ಯಾನ್ಸಲ್ ಮಾಡಿ ಜಾಸ್ತಿ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ ಅನ್ನೋ ಸುದ್ದಿಗಳು ಇವೆ.. ಆದ್ರೆ ಟಿಕೆಟ್ ದರ ಏರಿಕೆಯನ್ನು ಖಾಸಗಿ ಸಾರಿಗೆ ಸಂಘಗಳ ಒಕ್ಕೂಟದ ಅಧ್ಯಕ್ಷರು ಸಮರ್ಥಿಸಿಕೊಳ್ತಿದ್ದಾರೆ. ಶಕ್ತಿಯೋಜನೆ ಬಳಿಕ ಹೊಡೆತ ಬಿದ್ದಿರೋದರಿಂದ ಹಬ್ಬ-ಹರಿದಿನಗಳಲ್ಲಿ ದರ ಏರಿಸದೇ ವಿಧಿಯಿಲ್ಲ. ಖಾಸಗಿ ಬಸ್‌ಗಳ ಟಿಕೆಟ್ ದರ ನಿಗದಿ ಮಾಡುವ ಅಧಿಕಾರ ಸಾರಿಗೆ ಇಲಾಖೆಗೆ ಇಲ್ಲ ಎನ್ನುತ್ತಿದ್ದಾರೆ.
ಇದನ್ನೂ ವೀಕ್ಷಿಸಿ: ದಳಪತಿ 'ಲಿಯೋ'ಗೆ ರಜನಿ ಫ್ಯಾನ್ಸ್ ಟಕ್ಕರ್..? ಶಿವಣ್ಣನ 'ಘೋಸ್ಟ್' ಬೆನ್ನಿಗೆ ನಿಂತ ತಲೈವಾ ಫ್ಯಾನ್ಸ್!