Dec 9, 2020, 4:55 PM IST
ಬೆಂಗಳೂರು (ಡಿ. 09): ಜೆಡಿಎಸ್ ಪಕ್ಷಕ್ಕೆ ರೈತದ್ರೋಹಿ ಎನ್ನುವ ಪಟ್ಟ ಕಟ್ಟಲು ಹೊರಟಿದ್ದಾರೆ. ಸಾಲ ಮನ್ನಾ ಮಾಡಿದಾಗ ಒಬ್ಬ ರೈತ ಮುಖಂಡ ನನ್ನ ಪರವಾಗಿ ಮಾತನಾಡಿಲ್ಲ ಎಂದು ರೈತರ ಮೇಲೆ ಎಚ್‌ಡಿಕೆ ಗರಂ ಆಗಿದ್ದಾರೆ.
'ಭೂ ಸುಧಾರಣೆ ಮಸೂದೆ ತಂದಾಗ ನಾನು ದೇವೇಗೌಡರು ಬಿಲ್ ವಿರೋಧಿಸಿದ್ದು ನಿಜ. ಬಿಲ್‌ನಲ್ಲಿ ನಾನು ನೀಡಿದ ಸಲಹೆಯಂತೆ ಬದಲಾವಣೆ ಮಾಡಿದ್ದಾರೆ. ರೈತ ಮುಖಂಡರಿಂದ ನಾನು ಏನನ್ನು ಹೇಳಿಸಿಕೊಳ್ಳಬೇಕಿಲ್ಲ. ಜೆಡಿಎಸ್ ಪಕ್ಷ ರೈತರಿಗಾಗಿಯೇ ಇದೆ, ಮುಂದೆಯು ರೈತರ ಪರ ಇರುತ್ತೆ. ಜೆಡಿಎಸ್ ರೈತ ಪರ ಪಕ್ಷ, ಎಲ್ಲಿಗೆ ಬೇಕಾದರು ಬಹಿರಂಗ ಚರ್ಚೆಗೆ ಬರಲು ನಾನು ಸಿದ್ದ' ಎಂದು ಎಚ್‌ಡಿಕೆ ಬಹಿರಂಗ ಸವಾಲ್ ಹಾಕಿದ್ದಾರೆ.