Feb 23, 2022, 6:09 PM IST
ಮೈಸೂರು (ಫೆ.23): ಶಿವಮೊಗ್ಗದಲ್ಲಿ (Shivamogga) ಭಜರಂಗದಳ ಕಾರ್ಯಕರ್ತ ಹರ್ಷ ಅವರ ಹತ್ಯೆ ಪ್ರಕರಣದಲ್ಲಿ (Harsha Murder Case ) ಸರ್ಕಾರದ ವೈಫಲ್ಯದ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ (HD Kumaraswamy) ಕಿಡಿಕಾರಿದ್ದಾರೆ. ನಿಮ್ಮದೇ ಕಾರ್ಯಕರ್ತನನ್ನು ರಕ್ಷಿಸಿಕೊಳ್ಳಲಾಗದ ನಿಮ್ಮದೆಂಥಾ ಸರ್ಕಾರ ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಹತ್ಯೆ ಪ್ರಕರಣದಲ್ಲಿ ಪೊಲೀಸ್ ವೈಫಲ್ಯದ ಕುರಿತಾಗಿಯೂ ತನಿಖೆ ನಡೆಯಲಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ (Home Minister Araga Jnanendra)ಹೇಳಿದ್ದಾರೆ. ಇದಕ್ಕೆ ಕಿಡಿಕಾರಿರುವ ಎಚ್ ಡಿಕೆ, ಇದರಲ್ಲಿ ಪೊಲೀಸರ ವೈಫಲ್ಯವಲ್ಲ, ಸರ್ಕಾರದ ವೈಫಲ್ಯದ ಬಗ್ಗೆ ತನಿಖೆ ಆಗಬೇಕು ಎಂದಿದ್ದಾರೆ. ನಿಮ್ಮ ಸರ್ಕಾರವಿದ್ದೂ ನಿಮ್ಮ ಕಾರ್ಯಕರ್ತನ ಕೊಲೆಯಾಗಿದೆ, ನಿಮ್ಮದೇ ಕಾರ್ಯಕರ್ತನನ್ನು ರಕ್ಷಿಸಿಕೊಳ್ಳಲಾಗದಿರುವ ನಿಮ್ಮದೆಂತಾ ಸರ್ಕಾರ. ಕೊಲೆ ಮಾಡಿದವರ ಮೇಲೆ ತನಿಖೆ ನಡೆಸಬೇಕು ಆದರೆ, ಇಲ್ಲಿ ಪೊಲೀಸರ ಮೇಲೆ ತನಿಖೆ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
Harsha Murder Case: ಪಿಸ್ತೂಲ್ ಸಮೇತ ಪ್ರತಿಭಟನೆಯಲ್ಲಿ ಭಾಗಿ!
ಹಲವು ವರ್ಷಗಳಿಂದ ಹಲ್ಲೆ ಬಗ್ಗೆ ಗೊತ್ತಿದ್ದೂ ಕೊಲೆಯಾಗಿದೆ ಎಂದು ಹೇಳುತ್ತಾರೆ. ಇದಕ್ಕಾಗಿ ಸರ್ಕಾರ ಪೊಲೀಸರ ಮೇಲೆ ತನಿಖೆ ಮಾಡಲು ಹೊರಟಿದೆ. ಇದೆಲ್ಲವೂ ನಿಮ್ಮ ವೈಫಲ್ಯ. ಈಗ ಸಾಂತ್ವನ ಹೇಳಿ ಪರಿಹಾರ ನೀಡುತ್ತಿದ್ದಾರೆ. ಹಣದಿಂದ ಹೋದ ಜೀವ ಮರಳಿ ತಂದು ಕೊಡೋಕೆ ಆಗುತ್ತಾ ಎಂದು ಪ್ರಶ್ನೆ ಮಾಡಿದ್ದಾರೆ.