Harsha Murder Case: ಪಿಸ್ತೂಲ್ ಸಮೇತ ಪ್ರತಿಭಟನೆಯಲ್ಲಿ ಭಾಗಿ!

ಶಿವಮೊಗ್ಗದಲ್ಲಿ ಹರ್ಷ ಹತ್ಯೆ ಖಂಡಿಸಿ ಪ್ರತಿಭಟನೆ
ಪಿಸ್ತೂಲ್ ಸಮೇತ ಪ್ರತಿಭಟನೆಯಲ್ಲಿ ಭಾಗಿಯಾದ ಹಿಂದು ಮುಖಂಡ
ಪಿಸ್ತೂಲ್ ಜೊತೆ ಬಂದ ಹಿಂದು ಮುಖಂಡ ರಾಘವ ಅಣ್ಣಿಗೇರಿ

First Published Feb 23, 2022, 5:13 PM IST | Last Updated Feb 23, 2022, 5:13 PM IST

ವಿಜಯಪುರ (ಫೆ.23): ಶಿವಮೊಗ್ಗದಲ್ಲಿ (Shivamogga) ಭಜರದಂಗದಳ ಕಾರ್ಯಕರ್ತ ಹರ್ಷ (Harsha) ಕೊಲೆ ಪ್ರಕರಣವನ್ನು ಖಂಡಿಸಿ, ಬುಧವಾರ ವಿಜಯಪುರದಲ್ಲಿ (Vijayapura) ಬೃಹತ್ ಪ್ರತಿಭಟನೆ ನಡೆಸಲಾಯಿತು. ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಹಿಂದೂ ಮುಖಂಡ ಪಿಸ್ತೂಲ್ ಸಮೇತ ಭಾಗಿಯಾಗಿದ್ದರು ಎನ್ನುವುದು ಗಮನಸೆಳೆದಿದೆ.

ಹಿಂದೂ ಮುಖಂಡ ರಾಘವ ಅಣ್ಣೀಗೇರಿ (Raghav Annigeri) ಲೈಸೆನ್ಸ್ ಹೊಂದಿರುವ ಪಿಸ್ತೂಲ್ ಅನ್ನು ಜೊತೆಗಿಟ್ಟುಕೊಂಡು ಪ್ರತಿಭಟನೆಯಲ್ಲಿ ಹಾಜರಾಗಿದ್ದರು. ತಮಗೆ ಜೀವಬೆದರಿಕೆ ಇದ್ದಿರುವ ಹಿನ್ನೆಲೆಯಲ್ಲಿ ಪಿಸ್ತೂಲ್ ನೊಂದಿಗೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದೆ ಎಂದು ತಿಳಿಸಿದ್ದಾರೆ. ಯಾವಾಗ ನನ್ನ ಮೇಲೆ ದಾಳಿ ಮಾಡ್ತಾರೆ ಅನ್ನೋದು ಗೊತ್ತಿಲ್ಲ. ಉಗ್ರವಾದಿಗಳು ಯುದ್ಧಕ್ಕೆ ಬಂದ್ರೆ ಬಿಡೋದಿಲ್ಲ. ಶೋಕಿಗಾಗಿ ನಾನು ಗನ್ ಇಟ್ಕೊಂಡಿಲ್ಲ ಎಂದು ಹೇಳಿದ್ದಾರೆ.

Harsha Murder Case: ಹರ್ಷ ಸಾವಿಗೆ ಸರ್ಕಾರದ ವೈಫಲ್ಯವೇ ಕಾರಣ: ಎಚ್‌ಡಿಕೆ
ಹತ್ಯೆ ಘಟನೆಯನ್ನು ಖಂಡಿಸಿ ಭಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ನಡೆಸಿದ ಪ್ರತಿಭಟನೆಗೆ ವ್ಯಾಪಕ ಸ್ಪಂದನೆ ವ್ಯಕ್ತವಾಗಿತ್ತು. ಜನಸಾಮಾನ್ಯರು ಮಾತ್ರವಲ್ಲದೆ ಸ್ವಾಮೀಜಿಗಳು ಕೂಡ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Video Top Stories