'ಪೊಲೀಸರು ಬೀಟ್‌ಗೆ ಹೋಗಲ್ಲ, ಲಿಕ್ಕರ್ ಶಾಪ್‌ಗೆ ಮಾಮೂಲಿ ವಸೂಲಿಗೆ ಹೋಗ್ತಾರೆ'

Sep 22, 2021, 5:18 PM IST

ಮೈಸೂರು (ಸೆ. 22): ಸದನದಲ್ಲಿಂದು ಮೈಸೂರು ಗ್ಯಾಂಗ್ ರೇಪ್ ವಿಚಾರದ ಬಗ್ಗೆ ಸಿದ್ದರಾಮಯ್ಯ ಧ್ವನಿ ಎತ್ತಿದರು. ಸರ್ಕಾರವನ್ನು ಟೀಕಿಸಿದರು. 

ಮೈಸೂರು ಗ್ಯಾಂಗ್‌ರೇಪ್‌ ಕೇಸ್: ಸದನದಲ್ಲಿ ಮಹತ್ವದ ಮಾಹಿತಿ ಬಿಚ್ಚಿಟ್ಟ ಸಿಎಂ

'ಮೈಸೂರು ನಗರದಲ್ಲಿ 15 ಲಕ್ಷ ಜನಸಂಖ್ಯೆ ಇದೆ. 3 ಸಾವಿರ ಜನ ಪೊಲೀಸರಿದಾರೆ. ಗ್ಯಾಂಗ್ ರೇಪ್ ನಡೆದಾಗ ಅಲ್ಲಿ ಪೊಲೀಸರು ಬೀಟ್‌ನಲ್ಲಿರಬೇಕಿತ್ತು. ಏನ್ರಿ ಮಾಡ್ತಾ ಇದ್ರು..? ಎಂದು ಪ್ರಶ್ನಿಸಿದರು. 

ಕಳೆದ 30 ದಿನಗಳಲ್ಲಿ ಕೊಲೆ, ಅತ್ಯಾಚಾರ, ದರೋಡೆಗಳು ನಡೆದಿವೆ. ಪೊಲೀಸರು ಅಲರ್ಟ್ ಆಗಿರಬೇಕಿತ್ತಲ್ವಾ..?  ಬೀಟ್‌ಗೆ ಹೋಗುವ ಬದಲು ಲಿಕ್ಕರ್‌ ಶಾಪ್‌ಗಳ ಬಳಿ ಮಾಮೂಲಿ ವಸೂಲಿ ಮಾಡಲು ಹೋಗ್ತಾರೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.